Kuhl Exzel Fan: ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಬಿರು ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ಅನುಭವಿಸಲು ಕುಹ್ಲ್ ಕಂಪನಿ ಕೂಲರ್ ಫ್ಯಾನ್ ಅನ್ನು ಪರಿಚಯಿಸಿದೆ. ಕುಹ್ಲ್ ನೆಕ್ಸ್ಟ್ ಜೆನ್ ಫ್ಯಾನ್ ಎಕ್ಸ್‌ಜೆಲ್ ಎಚ್1 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದರಲ್ಲಿ ಜನರು ಕೂಲರ್‌ನಂತೆಯೇ ತಂಪಾದ ಗಾಳಿಯ ಅನುಭವವನ್ನು ಆನಂದಿಸಬಹುದು. ಏನಿದರ ವಿಶೇಷತೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡುವುದಾದರೆ.... 


COMMERCIAL BREAK
SCROLL TO CONTINUE READING

ಏನಿದು ಕೂಲರ್ ಫ್ಯಾನ್? 
ನೋಡಲು ಸಾಮಾನ್ಯ ಫ್ಯಾನ್‌ನಂತೆ ಕಾಣುವ ಈ ಫ್ಯಾನ್‌ನಲ್ಲಿ ಕೂಲರ್ (Fan Cooler) ಅನುಭವಕ್ಕಾಗಿ ಒಂದಿಷ್ಟು ವೈಶಿಷ್ಟ್ಯಗಳನ್ನು ಕೂಡ ನೀಡಲಾಗಿದೆ.  Xgel H1 ಫ್ಯಾನ್ ಕೂಲರ್ ಬಳಕೆಯಿಂದ ಗ್ರಾಹಕರು, ದೊಡ್ಡ ಡೆಸರ್ಟ್ ಕೂಲರ್‌ನಂತೆ ಕೂಲಿಂಗ್ ಅನುಭವವನ್ನು ಪಡೆಯುತ್ತಾರೆ. ಈ ಫ್ಯಾನ್ ಮನೆಯ ಯಾವುದೇ ಮೂಲೆಯಲ್ಲಿ ಸ್ವಲ್ಪ ಜಾಗದಲ್ಲಿಯೇ ಫಿಟ್ ಆಗುತ್ತದೆ. 


ಇದನ್ನೂ ಓದಿ- ಯಮಹಾ Aerox S: ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಈ ಸ್ಕೂಟರ್ ಚಾಲನೆಗೆ ಕೀ ಅಗತ್ಯವೇ ಇಲ್ಲ!


Xzel H1 ನ ವಿಶೇಷತೆ:-
Xzel H1 ಕೂಲರ್ ಫ್ಯಾನ್ (Cooler Fan) ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಪ್ರಮುಖ ವಿಶೇಷತೆಗಳೆಂದರೆ... 


* ಬಿ‌ಎಲ್‌ಡಿ‌ಸಿ ಮೋಟಾರ್: 
ಈ ಫ್ಯಾನ್‌ನಲ್ಲಿ ಬಿ‌ಎಲ್‌ಡಿ‌ಸಿ ಮೋಟಾರ್ ಅಳವಡಿಸಲಾಗಿದ್ದು ಇದು 65% ರಷ್ಟು ಶಕ್ತಿಯನ್ನು ಉಳಿಸುತ್ತದೆ. ಹಾಗಾಗಿ, ಇದು ವಿದ್ಯುತ್ ಬಿಲ್‌ನಲ್ಲಿ ಪರಿಹಾರವನ್ನು ನೀಡುತ್ತದೆ. 


* ರಿಮೋಟ್ ಕಂಟ್ರೋಲ್: 
ಈ ಫ್ಯಾನ್ ನಿಯಂತ್ರಣಕ್ಕೆ ರಿಮೋಟ್ ಅನ್ನು ಕೂಡ ನೀಡಲಾಗಿದ್ದು ಇದರ ಮೂಲಕ ನೀವು ಫ್ಯಾನ್ ವೇಗ, ಗಾಳಿಯ ಹರಿವು ಮತ್ತು ಮೋದ್ ಅನ್ನು ಸುಲಭವಾಗಿ ನೀವು ಕುಳಿತಿರುವಲ್ಲಿಯೇ ನಿಯಂತ್ರಿಸಬಹುದು. 


* ವಿನ್ಯಾಸ: 
ಸ್ಟೈಲಿಶ್ ವಿನ್ಯಾಸದಲ್ಲಿ ಲಭ್ಯವಿರುವ ಈ ಕೂಲರ್ ಫ್ಯಾನ್ ನಿಮ್ಮ ಕೋಣೆಯನ್ನು ತಂಪಾಗಿರಿಸುವುದು ಮಾತ್ರವಲ್ಲದೆ, ಅದರ ಆಕರ್ಷಕ ವಿನ್ಯಾಸದಿಂದ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ- ರೈಲ್ವೇ ನಿಲ್ದಾಣದ ಫ್ರೀ ವೈ-ಫೈ ಬಳಕೆ ಎಷ್ಟು ಸುರಕ್ಷಿತ?


* ತಂಪಾದ ತಾಜಾ ಗಾಳಿ: 
Exgel H1 ಕೋಣೆಗೆ ತಂಪಾದ ತಾಜಾ ಗಾಳಿಯನ್ನು ನೀಡುತ್ತದೆ. ಇದರಿಂದಾಗಿ, ಕೋಣೆ ಕೆಲವೇ ನಿಮಿಷಗಳಲ್ಲಿ ತಂಪಾಗುತ್ತದೆ. 


ಕುಹ್ಲ್ Xgel H1 ವೈಶಿಷ್ಟ್ಯಗಳು: 
* ಕುಹ್ಲ್ Xgel H1 ಅಲ್ಟ್ರಾಸಾನಿಕ್ ಮಂಜು ಆರ್ದ್ರಕವನ್ನು ಹೊಂದಿದ್ದು ಸದಾ ತಂಪಾದ ಗಾಳಿಯ ಅನುಭವವನ್ನು ನೀಡುತ್ತದೆ. 
* ಈ ಫ್ಯಾನ್ ತರಹದ ಕೂಲರ್ ಕೂಲಿಂಗ್ ಅನುಭವವನ್ನು ನೀಡುತ್ತದೆ. ಆದರೂ, ಇದು ಕೂಲರ್‌ನಂತೆ ಶಬ್ಧ ಮಾಡುವುದಿಲ್ಲ. 
* ಇದು ಡಿಜಿಟಲ್ ಸ್ಪೀಡ್ ಡಿಸ್ಪ್ಲೇಯ ವೈಶಿಷ್ಟ್ಯವನ್ನು ಸಹ ಹೊಂದಿದೆ, ಅದರ ಮೂಲಕ ನಿಮ್ಮ ಆಯ್ಕೆಯ ಪ್ರಕಾರ ನೀವು ಗಾಳಿಯ ವೇಗವನ್ನು ನಿಯಂತ್ರಿಸಬಹುದು.
* ಕುಹ್ಲ್ Xgel H1 ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪೋರ್ಟಬಲ್ ಕೂಲರ್ ಆಗಿದ್ದು ಒಮ್ಮೆಗೆ ಸತತ 8 ಗಂಟೆಗಳವರೆಗೆ ನಿರಂತರ ಕೂಲಿಂಗ್ ಅನುಭವವನ್ನು ನೀಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.