LG ಹೊರ ತಂದಿದೆ ಅಗ್ಗದ ಸ್ಮಾರ್ಟ್ ಫೋನ್ ಏನೆಲ್ಲಾ ಇರಲಿದೆ ವೈಶಿಷ್ಟ್ಯ ತಿಳಿಯಿರಿ
ANS ಸುದ್ದಿಯ ಪ್ರಕಾರ, LG ಇತ್ತೀಚೆಗೆ ಹೊಸ K42 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ phone 4,000mAh ಬ್ಯಾಟರಿಯನ್ನು ಹೊಂದಿದೆ.
ನವದೆಹಲಿ: ಕೊರಿಯಾದ ಕಂಪನಿ LG ಬಹಳ ಸಮಯದ ನಂತರ ಅಗ್ಗದ ಸ್ಮಾರ್ಟ್‌ಫೋನ್ (Smartphone) ಬಿಡುಗಡೆ ಮಾಡಿದೆ. ಕಂಪನಿಯು K42 ಸ್ಮಾರ್ಟ್‌ಫೋನ್ ಅನ್ನು ತಂದಿದೆ. ಈ ಫೋನ್ ಕಡಿಮೆ ದರವನ್ನು ಹೊಂದಿದ್ದು, ಇದರ ಮೇಲೆ ವಿಶೇಷ offer ಕೂಡ ಲಭ್ಯವಿದೆ. ಅಲ್ಲದೆ ಹಲವು ವೈಶಿಷ್ಟ್ಯಗಳನ್ನು ಈ ಫೋನ್ ಒಳಗೊಂಡಿದೆ.
IANS ಸುದ್ದಿಯ ಪ್ರಕಾರ, LG ಇತ್ತೀಚೆಗೆ ಹೊಸ K42 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ phone 4,000mAh ಬ್ಯಾಟರಿಯನ್ನು ಹೊಂದಿದೆ. ಈ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪವರ್ ಫುಲ್ ಬ್ಯಾಟರಿಯನ್ನು ನೀಡುತ್ತಿದೆ. ಇದಲ್ಲದೆ ಈ ಫೋನ್ ಕಡಿಮೆ ಬೆಲೆಯದ್ದಾದರೂ Quad (4) ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ.
ಇದನ್ನೂ ಓದಿ : WhatsApp ನಲ್ಲಿ ಹರಿದಾಡುತ್ತಿದೆ ಈ ಫೇಕ್ ಮೆಸೇಜ್; ಅಪ್ಪಿತಪ್ಪಿಯೂ ಓಪನ್ ಮಾಡದಿರಿ!
ಸ್ಕ್ರೀನ್ ಒಡೆದು ಹೋಗುವ ಭಯವಿಲ್ಲ :
ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಹೊಸ ಫೋನ್‌ನಲ್ಲಿ ಉಚಿತ ಒನ್ ಟೈಮ್ ಸ್ಕ್ರೀನ್ ರಿಪ್ಲೇಸ್‌ಮೆಂಟ್ (One Time Screen Replacement) ಅನ್ನು ನೀಡುತ್ತಿದೆ. ಇದರೊಂದಿಗೆ ಎರಡು ವರ್ಷಗಳ ಆಕ್ಸಿಡೆಂಟ್ ವಾರಂಟಿಯನ್ನು ಕೂಡಾ ನೀಡಲಾಗುತ್ತಿದೆ.
ಎಷಿದೆ ಇದರ ಬೆಲೆ :
3 GB RAM ಹೊಂದಿರುವ 64 GB ಸ್ಟೋರೇಜ್ ಹೊಂದಿರುವ ಈ ಫೋನಿನ ಬೆಲೆ ಕೇವಲ 10,990 ರೂ.
K42 ಡೆಡಿಕೇಟೆಡ್ ಗೂಗಲ್ ಅಸಿಟನ್ಸ್ ಬಟನ್‌ನೊಂದಿಗೆ ಬರುತ್ತದೆ. ಬಟನ್ ಒತ್ತುವ ಮೂಲಕ ಗುಂಡಿಯನ್ನು ಒತ್ತುವ ಮೂಲಕ ಗೂಗಲ್ ಅಸಿಟನ್ಸ್ ಲಾಂಚ್ ಮಾಡಬಹುದು. ಈ ಬಟನ್ ಅನ್ನು ಎರಡು ಸಲ ಒತ್ತಿದರೆ ವಿಸ್ಯುವಲ್ ಸ್ನ್ಯಾಪ್‌ಶಾಟ್ ಆರಂಭವಾಗುತ್ತದೆ. ಅಲ್ಲದೆ, ಹವಾಮಾನ, ವೇಳಾಪಟ್ಟಿ ಸೇರಿದಂತೆ ಇತರ ಮಾಹಿತಿ ಸಿಗುತ್ತದೆ. K42 ನಾರ್ಮಲ್ ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಅನ್ಲಾಕಿಂಗ್ ಸಿಸ್ಟಮ್ ಜೊತೆ ಬರುತ್ತದೆ.
ಇದನ್ನೂ ಓದಿ : ಹಣ ಇಲ್ಲವೇ? ಚಿಂತೆಬಿಡಿ Amazon, Paytm, Mobikwik ನೀಡುತ್ತಿವೆ ಉತ್ತಮ ಕೊಡುಗೆ
K42 ಸೂಪರ್ ಶಾರ್ಪ್ ಮತ್ತು ಕ್ರಿಸ್ಪ್ 6.6 ಇಂಚು ಹೆಚ್ ಡಿ display ಹೊಂದಿದೆ . ಸ್ಟ್ರೀಮಿಂಗ್ ವೀಡಿಯೊ, ಫಿಲಂಗಳನ್ನು ನೋಡಲು ಮತ್ತು ಗೇಮ್ ಆಡುವವರಿಗೆ ಹೇಳಿ ಮಾಡಿಸಿದ್ದಾಗಿದೆ.
LG K42 ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 13 ಎಂಪಿ ಪ್ರೈಮರಿ ಸೆನ್ಸಾರ್ ಮತ್ತು ಸೂಪರ್-ವೈಡ್-ಆಂಗಲ್ ಲೆನ್ಸ್ ಹೊಂದಿರುವ 5 ಎಂಪಿ ಸೆಕೆಂಡರಿ ಸೆನ್ಸಾರ್ ಅನ್ನು ಒಳಗೊಂಡಿದೆ. Camera ಸೆಟಪ್ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2 ಎಂಪಿ ಮ್ಯಾಕ್ರೋ ಶೂಟರ್ ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್ ಗಾಗಿ 8 ಎಂಪಿ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಹೊಂದಿದೆ.
ಇದನ್ನೂ ಓದಿ : TV ಖರೀದಿಸುವವರಿಗೊಂದು ಗುಡ್ ನ್ಯೂಸ್ : TCL TV ಮೇಲೆ 57 ಶೇ ರಿಯಾಯಿತಿ
ಕ್ಯಾಮೆರಾದಲ್ಲಿ ಫ್ಲ್ಯಾಷ್ ಜಂಪ್ ಕಟ್ ನಂತಹ ವೈಶಿಷ್ಟ್ಯವನ್ನು ಸಹ ಹೊಂದಿದೆ. ಇದರಲ್ಲಿ 4 ಫೋಟೋಗಳನ್ನ ತೆಗೆದುಕೊಳ್ಳಬಹುದು. ಇದರಲ್ಲಿರುವ ಫ್ಲಾಶ್ ನಿಂದಾಗಿ ಫೋಟೋ ಯಾವಾಗ click ಆಗುತ್ತದೆ ಅನ್ನೋದು ಗೊತ್ತಾಗುತ್ತದೆ.
ಈ ಫೋನಿನ ಕಾರ್ಯಕ್ಷಮತೆ ಉತ್ತಮವಾಗಿದೆ. ಇದರಲಿ ಯಾವುದೇ ಸಮಸ್ಯೆ ಕಂಡು ಬರಲು ಸಾಧ್ಯವಿಲ್ಲ ಎನ್ನಲಾಗಿದೆ. ಎಂಟ್ರಿ ಲೆವೆಲ್ ಗೇಮರ್ಸ್ ಗಳಿಗಾಗಿ 'ಗೇಮ್ ಲಾಂಚರ್' ನೊಂದಿಗೆ ಪ್ರೀ ಲೋಡ್ ಮಾಡಲಾಗಿದೆ. ಇದು mobile ಆಟಗಳಿಗೆ ಸಂಬಂಧಿಸಿದ ಸೆಟ್ಟಿಂಗ್‌ಗಳನ್ನು ಒದಗಿಸಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.