ನವದೆಹಲಿ: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಡೆಯುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ರಿಯಾಯಿತಿ  ನೀಡಲಾಗುತ್ತಿದೆ. ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಕೊಡುಗೆಗಳು ಲಭ್ಯವಿವೆ. ಐಫೋನ್‌ಗಳ ಮೇಲೂ ಉತ್ತಮ ರಿಯಾಯಿತಿ ದೊರೆಯುತ್ತಿದೆ. ಈ ಆಫರ್‍ಗಳ ಭರಾಟೆಯಲ್ಲಿ ವಸ್ತುಗಳನ್ನು ಖರೀದಿಸುವವರಿಗೆ ಕೆಲವೊಮ್ಮೆ ಆಘಾತವುಂಟಾಗುತ್ತದೆ. ಈ ಮೊದಲು ಫ್ಲಿಪ್‌ಕಾರ್ಟ್‍ನಲ್ಲಿ ಏನೋ ಆರ್ಡರ್ ಮಾಡಿದ್ರೆ ಮತ್ತೇನೋ ವಸ್ತುಗಳು ಬರುತ್ತಿದ್ದವು. ಇದೀಗ ಮತ್ತೊಂದು ರೀತಿಯ ಎಡವಟ್ಟನ್ನು ಫ್ಲಿಪ್‌ಕಾರ್ಟ್ ಮಾಡಿದೆ.   


COMMERCIAL BREAK
SCROLL TO CONTINUE READING

ಹೌದು, ವ್ಯಕ್ತಿಯೊಬ್ಬರು ಫ್ಲಿಪ್‌ಕಾರ್ಟ್‌ನಿಂದ 70 ಸಾವಿರ ರೂ. ಬೆಲೆಯ ಐಫೋನ್ 13ಅನ್ನು ಕೇವಲ 35 ಸಾವಿರ ರೂ.ಗೆ ಆರ್ಡರ್ ಮಾಡಿದ್ದರು. ಕಡಿಮೆ ಬೆಲೆಗೆ ಐಫೋನ್ ಸಿಕ್ಕಿತು ಅಂತಾ ಆ ವ್ಯಕ್ತಿ ತುಂಬಾ ಖುಷಿಯಾಗಿದ್ದ. ಆದರೆ 2 ದಿನಗಳ ನಂತರ ಫ್ಲಿಪ್‌ಕಾರ್ಟ್ ಮಾಡಿದ ಮೋಸ ತಿಳಿದು ವ್ಯಕ್ತಿಗೆ ಶಾಕ್ ಆಗಿದೆ.


ಇದನ್ನೂ ಓದಿ: Google Pixel 7 Pro: ಗೂಗಲ್ ಹೊರತರುತ್ತಿದೆ ಇನ್‌ಸ್ಟಂಟ್ ಫುಲ್ ಚಾರ್ಚಿಂಗ್ ಸ್ಮಾರ್ಟ್‌ಫೋನ್..!


ಫ್ಲಿಪ್‌ಕಾರ್ಟ್ ಐಫೋನ್ 13ನಲ್ಲಿ ಭರ್ಜರಿ ವಿನಿಮಯ ಕೊಡುಗೆ ನೀಡುತ್ತಿದೆ. ಪ್ರಣೀತ್ ಎಂಬ ವ್ಯಕ್ತಿ ಈ ಕೊಡುಗೆಯ ಲಾಭ ಪಡೆದು 35 ಸಾವಿರ ರೂ.ಗೆ ಐಫೋನ್ 13 ಖರೀದಿಸಿದ್ದಾರೆ. ಆದರೆ 2 ದಿನಗಳ ನಂತರ ಈ ಆಫರ್‍ಅನ್ನು ಫ್ಲಿಪ್‌ಕಾರ್ಟ್ ರದ್ದುಗೊಳಿಸಿದೆ. ಇದರಿಂದ ಪ್ರಣೀತ್ ಕೆರಳಿ ಕೆಂಡವಾಗಿದ್ದಾರೆ. ಟ್ವಿಟರ್‍ನಲ್ಲಿ ಫ್ಲಿಪ್‍ಕಾರ್ಟ್‍ಗೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಟ್ವಿಟರ್‌ನಲ್ಲಿ ಪ್ರಿಂಟ್‌ಶಾಟ್ ಹಾಕಿರುವ ಪ್ರಣೀತ್, ‘ಗ್ರಾಹಕ ನ್ಯಾಯಾಲಯದಲ್ಲಿ ಈ ಬಗ್ಗೆ ನಾನು ದೂರು ಸಲ್ಲಿಸುವುದು ಹೇಗೆ? ದಯವಿಟ್ಟು ನನಗೆ ಸಹಾಯ ಮಾಡಿ’ ಅಂತಾ ಹೇಳಿದ್ದಾನೆ. ಈ ವೇಳೆ #FlipkartBigBillionDays #Flipkart ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಫ್ಲಿಪ್‌ಕಾರ್ಟ್ ತನಗೆ ಮೋಸ ಮಾಡಿದೆ ಅಂತಾ ಟ್ವೀಟ್ ಮಾಡಿದ್ದಾರೆ.


ಫ್ಲಿಪ್‌ಕಾರ್ಟ್‍ ಸೈಟ್‍ನಲ್ಲಿ ಆರ್ಡರ್ ಮಾಡಿರಬೇಕು. ನಕಲಿ ಸೈಟ್‍ನಲ್ಲಿ ಮೊದಲು ಮಾರಾಟದ ಬೆಲೆ 50 ಸಾವಿರ ರೂ. ಎಂದು ತೋರಿಸುತ್ತದೆ. ಸ್ವಲ್ಪ ಸಮಯದ ನಂತರ ಅದು 50 ರಿಂದ 52 ನಂತರ 54 ಮತ್ತು ನಂತರ 57 ಸಾವಿರ ಆಗುತ್ತದೆ. ಹೀಗಾಗಿ ಯಾವುದೇ ಉತ್ಪನ್ನಗಳನ್ನು ಆರ್ಡರ್ ಮಾಡುವಾಗ ನಕಲಿ ಮತ್ತು ಅಸಲಿ ಆನ್‍ಲೈನ್ ಸೈಟ್‍ಗಳನ್ನು ನೋಡಿ ಖರೀದಿಸಬೇಕು. ಸ್ವಲ್ಪ ಎಡವಟ್ಟಾದರೂ ಆರ್ಡರ್ ಬರುವುದಿರಲಿ ನಮ್ಮ ಹಣವೇ ವಾಪಸ್ ಬರಲ್ಲ’ ಅಂತಾ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Flipkart Big Billion Days Sale offer: 5ಜಿ ಐಫೋನ್ ಅನ್ನು 13ಸಾವಿರ ರೂ.ಗಳಿಗೆ ಖರೀದಿಸುವ ಅವಕಾಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.