Maruti Dzire Airbags: ಸುರಕ್ಷತೆಯ ವಿಷಯದಲ್ಲಿ ಮಹೀಂದ್ರಾ ಮತ್ತು ಟಾಟಾ ವಾಹನಗಳು ಮೊದಲ ಸ್ಥಾನದಲ್ಲಿವೆ. ಈ ಎರಡೂ ಕಂಪನಿಗಳ ಬಹುತೇಕ ಕಾರುಗಳು 4 ಅಥವಾ 5 ಸ್ಟಾರ್ ರೇಟಿಂಗ್ ಪಡೆದಿವೆ. ಮಾರುತಿ ಸುಜುಕಿ ಕಾರುಗಳು ಕಡಿಮೆ ಸುರಕ್ಷಿತ ಎಂಬ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇತ್ತೀಚಿಗೆ ಇಂಥದ್ದೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಒಂದು ವರ್ಷದ ಹಿಂದೆ ಖರೀದಿಸಿದ ಮಾರುತಿ ಡಿಜೈರ್‌ನಲ್ಲಿ ಅಪಘಾತ ಸಂಭವಿಸಿದೆ. ಈ ಅಪಘಾತದ ವೇಳೆ ಕಾರಿನ ವೇಗ 70 ಕಿ.ಮೀ ಇತ್ತು. ಆದರೂ ಕೂಡ ಅಪಘಾತದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್‌ಗಳು ತೆರೆದಿರಲಿಲ್ಲ. ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಕಾರಿನ ಮಾಲೀಕರು ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Mosquito ಕಾಟವೇ? ಸೊಳ್ಳೆ ಓಡಿಸಲು ಸ್ಮಾರ್ಟ್‌ಫೋನ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್‌ ಮಾಡಿ


ಅಮಿತ್ ಕುಮಾರ್ ಎಂಬ ವ್ಯಕ್ತಿ ತಮ್ಮ ಮಾರುತಿ ಸುಜುಕಿ ಡಿಜೈರ್ ಕಾರಿನ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಕಾರು ಗಂಟೆಗೆ 70 ಕಿಮೀ ವೇಗದಲ್ಲಿರುವಾಗ ಅಪಘಾತಕ್ಕೀಡಾಯಿತು. ಆದರೆ ಈ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳಲಿಲ್ಲ. ಸುರಕ್ಷಿತವೆಂದು ಪರಿಗಣಿಸಿದ ವಾಹನವು 'ಟಿನ್ ಬಾಕ್ಸ್' ಆಗಿ ಮಾರ್ಪಟ್ಟಿದೆ ಎಂದು ಅಮಿತ್ ಕುಮಾರ್ ಹೇಳಿದ್ದಾರೆ. ಮಾರುತಿ ಸುಜುಕಿ (@Maruti_Corp) ನ ಅಧಿಕೃತ ಹ್ಯಾಂಡಲ್ ಅನ್ನು ಸಹ ವೀಡಿಯೊದಲ್ಲಿ ಟ್ಯಾಗ್ ಮಾಡಲಾಗಿದೆ.


ಡಿಲೀಟ್‌ ಆದ WhatsApp ಫೋಟೋಗಳನ್ನು restore ಮಾಡುವುದು ಹೇಗೆ? ಇಲ್ಲಿ ತಿಳಿಯಿರಿ


2 ಸ್ಟಾರ್ ಸುರಕ್ಷತೆ ರೇಟಿಂಗ್


ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಸುಜುಕಿ ಡಿಜೈರ್ ಕೇವಲ 2-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. 5-ಸ್ಟಾರ್ ರೇಟಿಂಗ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, 1-ಸ್ಟಾರ್ ರೇಟಿಂಗ್ ಅನ್ನು ಕೆಟ್ಟದಾಗಿ ಪರಿಗಣಿಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.