E-Bike: ಗಿಯರ್ ಹೊಂದಿರುವ Electric Bike, ಫುಲ್ ಚಾರ್ಜ್ ಗೆ 150 ಕೀ,ಮೀ ಮೈಲೇಜ್
Electric bike with gearbox in india: ಈ ಎಲೆಕ್ಟ್ರಿಕ್ ಬೈಕ್ ನಲ್ಲಿ 4-ಸ್ಪೀಡ್ ಗಿಯರ್ ಬಾಕ್ಸ್ ಹಾಗೂ ಎಬಿಎಸ್ ಸೌಕರ್ಯವನ್ನು ನೀಡಲಾಗಿದೆ. ಈ ಬೈಕ್ ಲಿಕ್ವಿಡ್ ಕೂಲ್ದ್ 5.0 kWh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಒಂದು ಫುಲ್ ಚಾರ್ಜ್ ನಲ್ಲಿ 150 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Matter Electric Bike: ಟೆಕ್ನಾಲಜಿ ಸ್ಟಾರ್ಟ್ ಅಪ್ ಕಂಪನಿಯಾಗಿರುವ ಮ್ಯಾಟರ್ ತನ್ನ ಹೊಚ್ಚ ಹೊಸ ಹೊಸ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದೆ. ಇದು ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇದನ್ನು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಮತ್ತು ಎಬಿಎಸ್ ಸೌಲಭ್ಯವನ್ನು ಸಹ ಹೊಂದಿದೆ. ಲಿಕ್ವಿಡ್ ಕೂಲ್ಡ್, 5.0 kWh ಬ್ಯಾಟರಿಯನ್ನು ಈ ಬೈಕ್ ಒಳಗೊಂಡಿದೆ ಮತ್ತು ಫುಲ್ ಚಾರ್ಜ್ ನಲ್ಲಿ 125-150km ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ಮ್ಯಾಟರ್ ಎನರ್ಜಿ ಹೇಳಿಕೊಂಡಿದೆ. ಪ್ರಸ್ತುತ, ಕಂಪನಿಯು ಈ ಬೈಕ್‌ನ ಹೆಸರು ಮತ್ತು ಬೆಲೆಯನ್ನು ಘೋಷಿಸಿಲ್ಲ, ಆದರೂ ಅದು ಬೈಕ್ ನ ವೈಶಿಷ್ಟ್ಯಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ದಿನಾಂಕವನ್ನು ಕೂಡ ಇನ್ನೂ ಘೋಷಿಸಲಾಗಿಲ್ಲ, ಆದರೆ ಅದರ ಬೆಲೆ ಮತ್ತು ಹೆಸರನ್ನು 2023 ಆಟೋ ಎಕ್ಸ್‌ಪೋದಲ್ಲಿ ಘೋಷಿಸಲಾಗುವುದು ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.
ಇದು ನೇಕೆಡ್ ಶೈಲಿಯ ಮೋಟಾರ್‌ಸೈಕಲ್ ಆಗಿದ್ದು, ಇದು ಯಮಹಾ FZ ಅನ್ನು ಹೋಲುತ್ತದೆ. ಬಾಡಿ ಮೇಲೆ ರೇಸ್ ಸಂಖ್ಯೆಗಳೊಂದಿಗೆ ಗ್ರಾಫಿಕ್ಸ್ ಜೊತೆಗೆ LED ಹೆಡ್‌ಲ್ಯಾಂಪ್‌ಗಳನ್ನು ಇದು ಹೊಂದಿದೆ. ಬೈಕ್ 7 ಇಂಚಿನ ಟಚ್ ಎನೇಬಲ್ಡ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಹೊಂದಿದೆ. ಇದು ರಿಮೋಟ್ ಲಾಕ್/ಅನ್‌ಲಾಕ್, ಲೈವ್ ಲೊಕೇಶನ್ ಟ್ರ್ಯಾಕಿಂಗ್, ವೆಹಿಕಲ್ ಹೆಲ್ತ್, ಪುಶ್ ನ್ಯಾವಿಗೇಶನ್, ಚಾರ್ಜಿಂಗ್ ಸ್ಥಿತಿಯಂತಹ ವೈಶಿಷ್ಟ್ಯಗಳೊಂದಿಗೆ ಸಂಪರ್ಕಿತ ಪರದೆಯಾಗಿದೆ. ಬೈಕ್ ಕೀ ಲೆಸ್ ಸ್ಟಾರ್ಟ್ ಕೂಡ ಸಿಗಲಿದೆ.
ಇದನ್ನೂ ಓದಿ-Smart TV Deal: ಕೇವಲ ರೂ.999ಕ್ಕೆ ಸಿಗುತ್ತಿದೆ 22 ಸಾವಿರ ಬೆಲೆ ಬಾಳುವ ಸ್ಮಾರ್ಟ್ ಟಿವಿ!
ಎಬಿಎಸ್‌ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಈ ಬೈಕ್ ಒಳಗೊಂಡಿವೆ. -10 ರಿಂದ 55 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೈಕ್ ಅನ್ನು ನೀವು ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಎಲೆಕ್ಟ್ರಿಕ್ ಮೋಟಾರ್ ಸೈಕಲ್ ನಲ್ಲಿ 10.5kW ಮೋಟಾರ್ ನೀಡಲಾಗಿದೆ. ಈ ಮೋಟರ್ ಅನ್ನು ಸ್ವಯಂಚಾಲಿತ ಬದಲಿಗೆ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ ಎಂಬುದು ಈ ಬೈಕ್ ನ ಮತ್ತೊಂದು ಕುತೂಹಲಕಾರಿ ಸಂಗತಿಯಾಗಿದೆ . ಮ್ಯಾಟರ್ ಪ್ರಕಾರ, ಮ್ಯಾನುವಲ್ ಗೇರ್‌ಬಾಕ್ಸ್‌ನಿಂದಾಗಿ, ಕಾರ್ಯಕ್ಷಮತೆಯು ಶ್ರೇಣಿಯಾದ್ಯಂತ ಉತ್ತಮವಾಗಿದೆ ಮತ್ತು ಪವರ್ ಡೆಲಿವರಿ ಸಹ ಅತ್ಯುತ್ತಮವಾಗಿದೆ.
ಇದನ್ನೂ ಓದಿ-Male To Get Pregnant: ಪುರುಷರು ಕೂಡ ಮಕ್ಕಳಿಗೆ ಜನ್ಮ ನೀಡಬಹುದು! ಈ ರೀತಿ ಗರ್ಭ ಧರಿಸಬಹುದು
ಮೋಟಾರ್‌ನೊಂದಿಗೆ 5 kWh ಬ್ಯಾಟರಿ ಪ್ಯಾಕ್ ಲಭ್ಯವಿದೆ. ಈ ಎಲೆಕ್ಟ್ರಿಕ್ ಬೈಕ್‌ನ ಕಾರ್ಯಕ್ಷಮತೆಯನ್ನು ಸಹ ಉಲ್ಲೇಖಿಸಲಾಗಿಲ್ಲ. ಬಿಲ್ಟ್ ಇನ್ ಚಾರ್ಜರ್ ಬಳಸಿ ಬೈಕ್ ಅನ್ನು ಕೇವಲ 5 ಗಂಟೆಗಳಲ್ಲಿ ನೀವು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಮತ್ತು ಇದು ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.