ಬೆಂಗಳೂರು : ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಾರುಕಟ್ಟೆಯಲ್ಲಿ ನಾನಾ ರೀತಿಯ ಹಣ್ಣುಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಮೇಲೆ ಸ್ಟಿಕ್ಕರ್ ಗಳನ್ನು ಹಾಕಿರುವುದನ್ನು ನೀವು ಕೂಡಾ ಗಮನಿಸಿರಬಹುದು. ಈ ಸ್ಟಿಕರ್ ಗಳನ್ನು ಹಣ್ಣುಗಳ ಮೇಲೆ ಯಾತಕ್ಕಾಗಿ ಹಾಕಿರುತ್ತಾರೆ ಎನ್ನುವುದನ್ನು ಯಾವತ್ತಾದರೂ ತಿಳಿದುಕೊಳ್ಳುವ ಪ್ರಯತ್ನ ಪಟ್ಟಿದ್ದೀರಾ? ಈ ಸ್ಟಿಕರ್ ಗೆ ಅದರದ್ದೇ ಆದ ಅರ್ಥವಿದೆ. ಇದನ್ನು ಅರಿತುಕೊಂಡರೆ ನೀವು ಉತ್ತಮ ಗುಣಮಟ್ಟದ ಹಣ್ಣುಗಳನ್ನೇ ಖರೀದಿಸಿ ತರಬಹುದು.


COMMERCIAL BREAK
SCROLL TO CONTINUE READING

ಹಣ್ಣಿನ ಮೇಲಿನ ಸ್ಟಿಕ್ಕರ್ ಹೇಳುವ ಸತ್ಯಗಳು ಇವು : 
ಹಣ್ಣುಗಳ ಮೇಲಿನ ಸ್ಟಿಕ್ಕರ್‌ಗಳು ಅವುಗಳ ಗುಣಮಟ್ಟದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತವೆ. ಈ ಮೂಲಕ ಯಾವ ಹಣ್ಣುಗಳನ್ನು ಖರೀದಿಸಬೇಕು ಮತ್ತು ಯಾವ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಿಜಾಂಶವನ್ನು ತಿಳಿಸುತ್ತದೆ. ಹಾಗಾಗಿ ಹಣ್ಣುಗಳನ್ನು ಖರೀದಿಸುವ ಮೊದಲು ಈ  ಸ್ಟಿಕರ್ ಹಿಂದಿನ ಸತ್ಯವನ್ನು ಅರಿತುಕೊಳ್ಳುವುದು ಮುಖ್ಯ. 


ಇದನ್ನೂ ಓದಿ : Jio 5G ಹೊಸ ರಿಚಾರ್ಜ್ ಪ್ಲಾನ್ಸ್...! ಅತಿ ಕಡಿಮೆ ಬೆಲೆ ಬೊಂಬಾಟ್ ಲಾಭ!


4 ಅಂಕಿಯ ಕೋಡ್‌ : 
ಹಣ್ಣಿನ ಸ್ಟಿಕ್ಕರ್‌ನಲ್ಲಿ ಹಣ್ಣಿನ  ಕೋಡ್ ಅನ್ನು ನೀಡಲಾಗುತ್ತದೆ. ಇದನ್ನು PLU ಎಂದು ಕರೆಯಲಾಗುತ್ತದೆ.ಅಂದರೆ Price Look Up. ಪ್ರತಿಯೊಂದು ಕೋಡಿಗೂ ಒಂದೊಂದು ಅರ್ಥವಿದೆ. ಈ ಕೋಡ್ ನಿಮಗೆ ಅರ್ಥವಾದರೆ  ಖರೀದಿಸುವ ಹಣ್ಣಿನ  ಬಗ್ಗೆಯೂ  ನಮಗೆ ತಿಳಿಯುತ್ತದೆ. ಸ್ಟಿಕ್ಕರ್‌ನಲ್ಲಿ  ನಾಲ್ಕು-ಅಂಕಿಯ ಕೋಡ್ ಇದ್ದರೆ  ಆ ಹಣ್ಣುಗಳನ್ನು ಬೆಳೆಯುವಾಗ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗಿದೆ ಎಂದು ಅರ್ಥ.


5 ಅಂಕಿಯ ಕೋಡ್‌ :
ಒಂದು ಹಣ್ಣಿನಲ್ಲಿ  8 ನಂಬರಿನಿಂದ ಆರಂಭವಾಗುವ 5 ಅಂಕೆಯ ಕೋಡ್ ಇದ್ದರೆ, ಆ ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ ಎಂದರ್ಥ. ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಬಹುದು ಎಂಬುದನ್ನು ಹೇಳುತ್ತದೆ.


ಸಂಖ್ಯೆ 7 ರಿಂದ ಪ್ರಾರಂಭವಾಗುವ ಕೋಡ್‌ನ ಅರ್ಥ:
ಒಂದು ಹಣ್ಣಿನಲ್ಲಿ 7ನಂಬರಿನಿಂದ ಆರಂಭವಾಗುವ 5 ಅಂಕೆಗಳ  ಕೋಡ್ ಇದ್ದರೆ, ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ. ಆದರೆ ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾಗುವುದಿಲ್ಲ ಎನ್ನುವ ಅರ್ಥ ನೀಡುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಹಾಗಾಗಿ ನೀವು ಇನ್ನು ಮುಂದೆ ಮಾರುಕಟ್ಟೆಗೆ ಹಣ್ಣು ಖರೀದಿಗೆ ತೆರಳುವಾಗ ಈ ಸ್ಟಿಕ್ಕರ್ ಗಳನ್ನು ನೋಡಿಯೇ ಹಣ್ಣು ಖರೀದಿಸಿ ತರುವುದು ಒಳ್ಳೆಯದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ