Threads Launched: ಟ್ವಿಟರ್‌ ಗೆ ಟಕ್ಕರ್ ನೀಡುವ ಹೊಸ  ಅಪ್ಲಿಕೇಶನ್ ಸಾಮಾಜಿಕ ಮಾಧ್ಯಮ ಮಾರುಕಟ್ಟೆಗೆ ಬಿಡುಗಡೆಯಾಗಿದೆ.  ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಭಾರತ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. Android ಮತ್ತು iOS ನಲ್ಲಿ ಡೌನ್‌ಲೋಡ್ ಮಾಡಲು Threads ಲಭ್ಯವಿದೆ. ಬಿಡುಗಡೆಯಾದ ಕೇವಲ ಎರಡು ಗಂಟೆಗಳಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಜನರು  ಈ ಹೊಸ ಅಪ್ಲಿಕೇಶನ್ ಗೆ ಇದಕ್ಕೆ ಸೈನ್ ಅಪ್ ಮಾಡಿದ್ದಾರೆ. ಟೆಕ್ಸ್ಟ್ ಅಪ್ಡೇಟ್ ಮಾಡಲು ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವ ಉದ್ದೇಶದಿಂದ Instagram ತಂಡ ಈ ಥ್ರೆಡ್ಸ್  ಎನ್ನುವ ಈ ಹೊಸ ಆಪ್ ಅನ್ನು ಹೊರ ತಂದಿದೆ ಎಂದು ಮೆಟಾ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಥ್ರೆಡ್ಸ್ ನ ವೈಶಿಷ್ಟ್ಯಗಳು : 
Instagram ಖಾತೆಯನ್ನು ಬಳಸಿಕೊಂಡು ಕೂಡಾ ಈ appಗೆ  ಲಾಗ್ ಆಗಬಹುದು. ಹೀಗೆ ಲಾಗ್ ಇನ್ ಆದರೆ 500 ಅಕ್ಷರಗಳವರೆಗಿನ ಪೋಸ್ಟ್ ಗಳನ್ನು ಬರೆಯಬಹುದು. ಜೊತೆಗೆ ಐದು ನಿಮಿಷಗಳವರೆಗಿನ ವೀಡಿಯೊಗಳು ಮತ್ತು ಫೋಟೋಗಳನ್ನು ಸಹ ಅಟ್ಯಾಚ್ ಮಾಡಬಹುದು. ಕಂಪನಿಯು ಇದಕ್ಕೆ ActivityPub ಪ್ರೋಟೋಕಾಲ್ ಅನ್ನು ಸೇರಿಸಲು ಯೋಜಿಸುತ್ತಿದೆ.  ಇದು ಮುಕ್ತ ಸಾಮಾಜಿಕ ನೆಟ್‌ವರ್ಕಿಂಗ್ ಪ್ರೋಟೋಕಾಲ್ ಆಗಿದೆ.


ಇದನ್ನೂ ಓದಿ : ಹೊರಬಿತ್ತು OPPO Reno 10 Series ಬೆಲೆ ! ಅತ್ಯದ್ಭುತ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ


"ಇದು Mastodon ಮತ್ತು WordPress ನಂತಹ ActivityPub ಪ್ರೋಟೋಕಾಲ್ ಅನ್ನು support ಮಾಡುವ  ಇತರ ಅಪ್ಲಿಕೇಶನ್‌ಗಳೊಂದಿಗೆ ಥ್ರೆಡ್ಸ್ ಪರಸ್ಪರ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಹೆಚ್ಚಿನ ಸಾಮಾಜಿಕ ಅಪ್ಲಿಕೇಶನ್‌ಗಳಲ್ಲಿ ಪ್ರಸ್ತುತ ಸಾಧ್ಯವಾಗದ ಹೊಸ ರೀತಿಯ ಸಂಪರ್ಕಗಳಿಗೆ ಥ್ರೆಡ್ಸ್ ಅವಕಾಶ ನೀಡುತ್ತದೆ" ಎಂದು ಮೆಟಾ ಹೇಳಿದೆ.


Instagram ನಂತೆ ಜನಪ್ರಿಯವಾಗಲಿದೆ :
ಥ್ರೆಡ್ಸ್ ನೊಂದಿಗೆ  ಬಳಕೆದಾರರು Instagramನಲ್ಲಿ ಅವರು  ಫಾಲೋ ಮಾಡುವ ಜನರನ್ನು ಒಳಗೊಂಡಂತೆ ತಮ್ಮ ಆಸಕ್ತಿಗಳನ್ನು ಹಂಚಿಕೊಳ್ಳುವ ಸ್ನೇಹಿತರು ಮತ್ತು ರಚನೆಕಾರರನ್ನು  ಫಾಲೋ ಮಾಡಬಹುದು ಕನೆಕ್ಟ್ ಆಗಬಹುದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಥವಾ ಕೆಲವು ದೇಶಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಅಪ್ಲಿಕೇಶನ್‌ಗೆ ಸೇರಿದ ನಂತರ ಸ್ವಯಂಚಾಲಿತವಾಗಿ ಖಾಸಗಿ ಪ್ರೊಫೈಲ್ ಅನ್ನು ನಿಯೋಜಿಸಲಾಗುತ್ತದೆ. ಥ್ರೆಡ್ಸ್  ನಲ್ಲಿ ಯಾರು ಬಳಕೆದಾರರನ್ನು ಮೆನ್ಶನ್ ಮಾಡಬಹುದು ಅಥವಾ ರಿಪ್ಲೈ ಮಾಡಬಹುದು ಎನ್ನುವುದನ್ನು ನಿಯಂತ್ರಿಸುವ ಅವಕಾಶ ಕೂಡಾ ನೀಡಲಾಗಿದೆ. 


ಇದನ್ನೂ ಓದಿ : Tech Tips: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇಂಟರ್ನೆಟ್ ಸರಿಯಾಗಿ ವರ್ಕ್ ಆಗ್ತಿಲ್ಲವೇ?


Instagramನಂತೆ, ನಿರ್ದಿಷ್ಟ ಪದಗಳನ್ನು ಒಳಗೊಂಡಿರುವ ಪ್ರತ್ಯುತ್ತರಗಳನ್ನು ಫಿಲ್ಟರ್ ಮಾಡಲು ಬಳಕೆದಾರರು ತಮ್ಮ ಥ್ರೆಡ್ಸ್ ಗೆ ಗುಪ್ತ ಪದಗಳನ್ನು ಸೇರಿಸಬಹುದು. ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡುವ ಮೂಲಕ ಥ್ರೆಡ್ಸ್  ನಲ್ಲಿ ಪ್ರೊಫೈಲ್ ಅನ್ನು  ಅನ್ ಫಾಲೋ ಮಾಡಬಹುದು, ಅಥವಾ ಬ್ಲಾಕ್ ಮಾಡಬಹುದು.  Instagram ನಲ್ಲಿ ಯಾವ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆಯೋ ಆ ಖಾತೆಯನ್ನು ಥ್ರೆಡ್ಸ್ ನಲ್ಲಿ ಕೂಡಾ ಬ್ಲಾಕ್ ಮಾಡಲಾಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.