ಬೆಂಗಳೂರು : ಮಳೆಗಾಲದಲ್ಲಿ ಮನೆಗಳಲ್ಲಿ ಸೊಳ್ಳೆಗಳದ್ದೇ ಕಾಟ. ಸೊಳ್ಳೆಗಳನ್ನು ತೊಡೆದುಹಾಕಲು ಜನರು ಸೊಳ್ಳೆ ಬತ್ತಿ, ಕಾಯಿಲ್ , ಕ್ರೀಂ, ಲೋಶನ್ ಹೀಗೆ ವಿವಿಧ ಉಪಾಯಗಳನ್ನು ಮಾಡುತ್ತಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಸೊಳ್ಳೆಗಳಿಂದ ಮುಕ್ತಿ ಸಿಗುವುದಿಲ್ಲ. ಮಾತ್ರವಲ್ಲ ಇವುಗಳು ಆರೋಗ್ಯದ ಮೇಕೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಆತಂಕವೂ ಇರುತ್ತದೆ. ಇನ್ನು ಮಕ್ಕಳಿದ್ದ ಮನೆಯಲ್ಲಿ ಮಕ್ಕಳು ಅಲರ್ಜಿಗೆ ತುತ್ತಾಗುವ ಭಯ ಕೂಡಾ ಪೋಷಕರನ್ನು ಕಾಡುತ್ತದೆ.  ಇದೀಗ ಸೊಳ್ಳೆಗಳಿಂದ ಕ್ಷಣ ಮಾತ್ರದಲ್ಲಿ ಮುಕ್ತಿ ನೀಡುವ ಲ್ಯಾಂಪ್ ಮಾರುಕಟ್ಟೆಗೆ ಬಂದಿದೆ. ಇದರ ಬೆಲೆ ಕೂಡಾ ತೀರ ಕಡಿಮೆ. 


COMMERCIAL BREAK
SCROLL TO CONTINUE READING

ಬೆಳಕಿನತ್ತ ಆಕರ್ಷಿಸಲ್ಪಡುವ ಸೊಳ್ಳೆಗಳು :  
ಲ್ಯಾಂಪ್ ನಿಂದ ಹೊರಸೂಸುವ ಬೆಳಕಿನ ಪರಿಣಾಮ ಸೊಳ್ಳೆಗಳು ಇದರತ್ತ ಆಕರ್ಷಿಸಲ್ಪಡುತ್ತವೆ. ಹೀಗೆ ಬೆಳಕಿನತ್ತ ಬರುವ ಸೊಳ್ಳೆಗಳು ಅಲ್ಲೇ ಸತ್ತು ಬೀಳುತ್ತವೆ. ಮನೆಯ ಯಾವ ಕೋಣೆಯಲ್ಲೇ ಇರಬಹುದು ಅಥವಾ ಕಚೇರಿಯಲ್ಲಿಯಲ್ಲಾದರೂ ಈ ಲ್ಯಾಂಪ್ ಅನ್ನು ಇರಿಸಬಹುದು. ಈ ಲ್ಯಾಂಪ್ ಅತ್ಯಂತ ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ. ಇವು  ಸೊಳ್ಳೆಗಳನ್ನು ಕೊಲ್ಲುವುದರ ಜೊತೆಗೆ ನೈಟ್ ಲ್ಯಾಂಪ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಹೊರ ಸೂಸುವ ನೀಲಿ ಲ್ಯಾಂಪ್ ಸೊಳ್ಳೆಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದು 20 ಚದರ ಮೀಟರ್ ದೂರದಲ್ಲಿ ಹಾರುವ ಸೊಳ್ಳೆಗಳನ್ನು ಕೂಡಾ ತನ್ನತ್ತ ಆಕರ್ಷಿಸುತ್ತದೆ


ಇದನ್ನೂ ಓದಿ : ಈ ತಂತ್ರಜ್ಞಾನದ ಮೂಲಕ ಕೇವಲ 24 ಗಂಟೆಗಳಲ್ಲಿ ಸಿದ್ದವಾಗುತ್ತದೆ ಐಶಾರಾಮಿ ಮನೆ, ತಗಲುವ ವೆಚ್ಚ ಕೂಡಾ ಕಡಿಮೆ


ಭಾರತದಲ್ಲಿ ಸೊಳ್ಳೆ ಕಿಲ್ಲರ್ ಲ್ಯಾಂಪ್ ಬೆಲೆ :
ಈ ಲ್ಯಾಂಪ್ ಅನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಖರೀದಿಸಬಹುದು. ಇದರ ಬೆಲೆ ಕೇವಲ 199 ರೂ. ಆನ್‌ಲೈನ್‌ನಲ್ಲಿ ಈ ಲ್ಯಾಂಪ್ ಅನ್ನು ಖರೀದಿಸುವುದಾದರೆ, ಅಮೆಜಾನ್‌ನಿಂದ  ಕೇವಲ 199 ರೂಪಾಯಿಗೆ ಖರೀದಿಸಬಹುದು. ಈ ಲಮ್ಪ್ನ್ ಸುತ್ತ  ಸತ್ತ ಸೊಳ್ಳೆಗಳನ್ನು ಸಂಗ್ರಹಿಸುವ ಟ್ರೇ ಕೂಡ ಇದೆ. ಹಾಗಾಗಿ ಆ ಟ್ರೇ ತುಂಬಿದಾಗ  ಸೊಳ್ಳೆಗಳನ್ನು ಹೊರ ಹಾಕಬಹುದು.  


ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಗೆ 5G Smartphone ಹೊರ ತರುತ್ತಿದೆ ಜಿಯೋ .. ! ಬೆಲೆ ಕೇಳಿದರೆ ಖರೀದಿಸುವುದು ಗ್ಯಾರಂಟಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.