Mosquito Repellent Apps: ಚಳಿಗಾಲದಲ್ಲಿ ರೋಗಗಳ ಹಾವಳಿ ಹೆಚ್ಚು. ಈ ಸಮಯದಲ್ಲಿ ಕತ್ತಲು ಹೆಚ್ಚಾಗಿರುವ ಕಾರಣ ಸೊಳ್ಳೆಗಳ ಕಾಟ ಕೂಡ ಹೆಚ್ಚುತ್ತದೆ. ಸೊಳ್ಳೆ ಕಡಿತದಿಂದ ಟೈಫಾಯಿಡ್, ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳು ಹರಡುವ ಅಪಾಯವಿದೆ. ಈ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ತಪ್ಪಿಸಲು ಎಷ್ಟೋ ಜನ ಸೊಳ್ಳೆ ಕಾಯಿಲ್ ಮತ್ತು ಆಲೌಟ್ ಬಳಸುತ್ತಾರೆ. ಆದರೆ ಇವು ಮಾತ್ರವಲ್ಲ.. ಸೊಳ್ಳೆಗಳನ್ನು ಓಡಿಸಲು ಕೆಲವು ರೀತಿಯ ಮೊಬೈಲ್ ಆ್ಯಪ್ ಗಳೂ ಲಭ್ಯವಿವೆ. ಈ ಅಪ್ಲಿಕೇಶನ್‌ಗಳನ್ನು ಸಕ್ರಿಯಗೊಳಿಸುವ ಮೂಲಕ, ಅವುಗಳಿಂದ ಹೊರಸೂಸುವ ಆವರ್ತನದ ಧ್ವನಿ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ :  ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷ ನಿರಾಳವಾಗಿರಬಹುದು.! ವೊಡಾಫೋನ್ ತಂದಿದೆ ಬೆಸ್ಟ್ ರಿಚಾರ್ಜ್ ಪ್ಲಾನ್


ಸೊಳ್ಳೆ ಕಿಲ್ಲರ್, ಸೊಳ್ಳೆ ಸೌಂಡ್, ಫ್ರೀಕ್ವೆನ್ಸಿ ಜನರೇಟರ್ ಮುಂತಾದ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್‌ಗಳನ್ನು ಲಕ್ಷಾಂತರ ಜನರು ಡೌನ್‌ಲೋಡ್‌ ಮಾಡಿದ್ದಾರೆ. ಇವುಗಳನ್ನು ಸ್ಮಾರ್ಟ್ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು. ಸೊಳ್ಳೆಗಳನ್ನು ಓಡಿಸುವ ಅಲ್ಟ್ರಾ ಸೋನಿಕ್ ಸೌಂಡ್ ಫ್ರೀಕ್ವೆನ್ಸಿಯನ್ನು ಉತ್ಪಾದಿಸುವ ಕೆಲಸವನ್ನು ಈ ಆ್ಯಪ್‌ ಮಾಡುತ್ತವೆ. ಆ ಶಬ್ದ ನಮಗೆ ಕೇಳಿಸುವುದಿಲ್ಲ. ಆದರೆ ಸೊಳ್ಳೆಗಳನ್ನು ಓಡಿಸಲು ಇದು ಉಪಯುಕ್ತವಾಗಿದೆ.


ಈ ಅಪ್ಲಿಕೇಶನ್‌ಗಳು ಸೊಳ್ಳೆಗಳನ್ನು ನಿಜವಾಗಿಯೂ ಓಡಿಸುತ್ತದೆಯೇ ಎಂದು ಹೇಳುವುದು ಕಷ್ಟ, ಏಕೆಂದರೆ ಈ ಅಪ್ಲಿಕೇಶನ್‌ಗಳು ಮಿಶ್ರ ವಿಮರ್ಶೆಗಳನ್ನು ಹೊಂದಿವೆ. ಕೆಲವರು ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರೆ, ಮತ್ತೆ ಕೆಲವರು ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. Google Play Store ನಲ್ಲಿ ಲಭ್ಯವಿರುವ ಈ ಅಪ್ಲಿಕೇಶನ್‌ಗಳು ನಿಜವಾಗಿ ಕಾರ್ಯನಿರ್ವಹಿಸುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.


ಇದನ್ನೂ ಓದಿ :  ಡಿಲೀಟ್‌ ಆದ WhatsApp ಫೋಟೋಗಳನ್ನು restore ಮಾಡುವುದು ಹೇಗೆ? ಇಲ್ಲಿ ತಿಳಿಯಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.