Car Sales in January 2023 : ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ, ಬದಲಾಗುತ್ತಲೇ ಇರುತ್ತವೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಕಾಯ್ದುಕೊಳ್ಳುವುದು ಕೆಲವೇ ಕಾರುಗಳು ಮಾತ್ರ. ಕಳೆದ ಕೆಲವು ತಿಂಗಳುಗಳಿಂದ, ಮಾರುತಿ ಸುಜುಕಿ ಬಲೆನೊ ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರು  ಎಂದೆನಿಸಿಕೊಂಡಿತ್ತು. ಆದರೆ ಜನವರಿಯಲ್ಲಿ ಈ ಅಂಕಿಅಂಶಗಳು ಸ್ವಲ್ಪ ಬದಲಾಗಿದೆ. ಮಾರುತಿ ಸುಜುಕಿಯ ಎರಡು ಕೈಗೆಟುಕುವ ದರದ ಕಾರುಗಳು ಮಾರಾಟದಲ್ಲಿ ದೊಡ್ಡ ಜಿಗಿತವನ್ನೇ ಕಂಡಿವೆ. ಈ ಎರಡು ಕಾರುಗಳು ಒಂದು ತಿಂಗಳ ಹಿಂದೆ ಮಾರಾಟ ವಿಭಾಗದಲ್ಲಿ ಹೇಳಿಕೊಳ್ಳುವಂಥಹ ಸದ್ದು ಮಾಡಿರಲಿಲ್ಲ. ಆದರೆ ಈ ಬಾರಿ ಅವುಗಳು ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿವೆ.


COMMERCIAL BREAK
SCROLL TO CONTINUE READING

ಇಲ್ಲಿ ನಾವು ಹೇಳುತ್ತಿರುವ ಎರಡು ಕಾರುಗಳೆಂದರೆ ಮಾರುತಿ ಸುಜುಕಿ ಆಲ್ಟೊ ಮತ್ತು ಮಾರುತಿ ಸುಜುಕಿ ವ್ಯಾಗನಾರ್. ಈ ಎರಡೂ ಕಾರುಗಳು ಜನವರಿ 2023 ರಲ್ಲಿ ದೇಶದ ಅತಿ ಹೆಚ್ಚು ಮಾರಾಟವಾದ ಕಾರುಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ. ವಿಶೇಷವೆಂದರೆ ಡಿಸೆಂಬರ್‌ಗೆ ಹೋಲಿಸಿದರೆ, ಜನವರಿಯಲ್ಲಿ ಅವುಗಳ ಮಾರಾಟವು 2 ರಿಂದ 2.5 ಪಟ್ಟು ಹೆಚ್ಚಾಗಿದೆ.


ಇದನ್ನೂ ಓದಿ : ಹೊಸ ಅವತಾರದಲ್ಲಿ ರೋಡಿಗಿಳಿದ ಮಾರುತಿಯ ಈ Luxury ಕಾರು! ಬೆಲೆ ಎಷ್ಟು ಇಲ್ಲಿದೆ ಮಾಹಿತಿ


ಮಾರುತಿ ಸುಜುಕಿ ಆಲ್ಟೊ :
ಮಾರುತಿ ಸುಜುಕಿಯ ಆಲ್ಟೊ ಕಳೆದ ತಿಂಗಳು 21,411 ಯುನಿಟ್‌ಗಳ ಮಾರಾಟದೊಂದಿಗೆ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿವೆ. . ಡಿಸೆಂಬರ್ 2022 ರಲ್ಲಿ, ಈ ಕಾರಿನ ಕೇವಲ 8,648 ಯುನಿಟ್‌ಗಳು ಮಾತ್ರ ಮಾರಾಟವಾಗಿತ್ತು. ಹೀಗಾಗಿ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಆಲ್ಟೊ ಮಾರಾಟದಲ್ಲಿ ಶೇ.147.58ರಷ್ಟು ಏರಿಕೆಯಾಗಿದೆ. ಮಾರುತಿ ಆಲ್ಟೊ ಎರಡು ಮಾದರಿಗಳಲ್ಲಿ ಬರುತ್ತದೆ - ಆಲ್ಟೊ 800 ಮತ್ತು ಆಲ್ಟೊ ಕೆ10. ಆಲ್ಟೊ 800 ಬೆಲೆ 3.53 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.


ಮಾರುತಿ ಸುಜುಕಿ ವ್ಯಾಗನಾರ್ :
ಮಾರುತಿ ವ್ಯಾಗನ್ಆರ್ 20,466 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಡಿಸೆಂಬರ್ 2022 ರಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ನ ಕೇವಲ 10,181 ಯುನಿಟ್‌ಗಳಿಗೆ ಳು ಮಾರಾಟವಾಗಿತ್ತು.  ಎರಡು ತಿಒಂಗಳ ಮಾರಾಟವನ್ನು ಹೋಲಿಸಿ ನೋಡಿದರೆ ಜನವರಿಯಲ್ಲಿ ಈ ಕಾರಿನ ಮಾರಾಟದಲ್ಲಿ 101.02 ಶೇಕಡಾ ಹೆಚ್ಚಳ ದಾಖಲಾಗಿದೆ.  ಮಾರುತಿ ಸುಜುಕಿ ವ್ಯಾಗನ್ಆರ್ ಬೆಲೆಯು 5.53 ಲಕ್ಷದಿಂದ ಪ್ರಾರಂಭವಾಗಿ 7.41 ಲಕ್ಷಕ್ಕೆ ಏರುತ್ತದೆ.


ಇದನ್ನೂ ಓದಿ : Maruti Cars: ಅಗ್ಗದ ದರದಲ್ಲಿ ಲಕ್ಸುರಿ ಫೀಲ್ ನೀಡುವ ಕಾರುಗಳಿವು.!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.