Mother's Day 2021: ತಾಯಂದಿರರ ದಿನಾಚರಣೆ 2021ರ ಮುನ್ನವೇ ಗೂಗಲ್ ಅಸಿಸ್ಟೆಂಟ್ ನಲ್ಲಿ ಹೊಸ ವೈಶಿಷ್ಟ್ಯಗಳು ಸೇರ್ಪಡೆಯಾಗಿವೆ. ಗೂಗಲ್ (Google)ನ ಈ ಅಸಿಸ್ಟೆಂಟ್ ಸರ್ವಿಸ್ ನ ಅಪ್ಡೇಟ್ ವರ್ಶನ್ ನಲ್ಲಿ ಹೊಸ ಮನರಂಜನಾತ್ಮಕ ಕಂಟೆಂಟ್, ಫ್ಯಾಮಿಲಿ ಬೆಲ್ ಹಾಗೂ ಒಂದು ಬ್ರಾಡ್ಕಾಸ್ಟಿಂಗ್ ಮೆಸೇಜಿಂಗ್ ವೈಶಿಷ್ಟ್ಯ ನೀಡಲಾಗಿದೆ. ಈ ಹೊಸ ವೈಶಿಷ್ಟ್ಯಗಳ (Google Assistant New Feature) ಕುರಿತು ಬ್ಲಾಗ್ ವೊಂದರಲ್ಲಿ ಗೂಗಲ್ ಮಾಹಿತಿ ನೀಡಿದೆ. ವಿಶ್ವದ ಎಲ್ಲಾ ತಾಯಂದಿರರ ಸಹಾಯ ಮಾಡುವುದರ ಜೊತೆಗೆ ಕುಟುಂಬದ ಎಲ್ಲ ಸದಸ್ಯರಿಗೂ ಕೂಡ ಇವು ಸಹಾಯಕಾರಿ ಸಾಬೀತಾಗಲಿವೆ. ಇದರಲ್ಲಿನ ಕೆಲ ವೈಶಿಷ್ಟ್ಯಗಳು ಮಕ್ಕಳಿಗೂ ಕೂಡ ಇಷ್ಟವಾಗಲಿವೆ. ಉದಾಹರಣೆಗೆ ಇದರಲ್ಲಿನ ಒಂದು ವೈಶಿಷ್ಟ್ಯ ಮಕ್ಕಳಿಗೆ ಕಥೆ ಹೇಳಲಿದೆ. ಈ ವರ್ಷ ಮೇ 9 ರಂದು ಅಂದರೆ ನಾಳೆ ತಾಯಂದಿರರ ದಿನಾಚರಣೆ ಆಚರಿಸಲಾಗುತ್ತಿದೆ. ಗೂಗಲ್ ಅಸಿಸ್ಟಂಟ್ ನ ಅಪ್ಡೇಟ್ (Google Assistant Updates) ವರ್ಶನ್ ನಲ್ಲಿ ಜೋಡಿಸಲಾಗಿರುವ ಹೊಸ ವೈಶಿಷ್ಟ್ಯಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

Google Assistant Mother's Day 2021 Special Features
1. Enhanced Broadcast Feature
: ಈ ವೈಶಿಷ್ಟ್ಯದ ಮೂಲಕ ಗೂಗಲ್ ಅಸಿಸ್ಟೆಂಟ್ ಕುಟುಂಬದ ಎಲ್ಲಾ ಸದಸ್ಯರಿಗೆ  ವಿಭಿನ್ನ ಉಪಕರಣಗಳ ಮೇಲೆ ತಕ್ಷಣ ಬ್ರಾಡ್ಕಾಸ್ಟ್ ಸಂದೇಶ ಕಳುಹಿಸಬಹುದು. ಈ ವೈಶಿಷ್ಟ್ಯದ ಮೂಲಕ ಸ್ಮಾರ್ಟ್ ಫೋನ್, ಗೂಗಲ್ ಹೋಮ್, ಗೂಗಲ್ ನೆಸ್ಟ್ ಗಳಂತಹ ಹಲವು ಡಿವೈಸಸ್ ಗಳ ಮೇಲೆ ಸಂದೇಶ ಕಳುಹಿಸಬಹುದಾಗಿದೆ. ಈ ವೈಶಿಷ್ಟ್ಯದ ವಿಶೇಷತೆ ಎಂದರೆ ಇದು ಕೇವಲ ಅಂಡ್ರಾಯಿಡ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ. iOS ಬಳಕೆದಾರರಿಗೂ ಕೂಡ ಬ್ರಾಡ್ಕಾಸ್ಟ್ ಸಂದೇಶಗಳು ಸಿಗಲಿವೆ.


2. Family Bell: ಗೂಗಲ್ ನ ಫ್ಯಾಮಿಲಿ ಬೆಲ್ ವೈಶಿಷ್ಟ್ಯ ಕಳೆದ ವರ್ಷ ಆಗಸ್ಟ್ 2020ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಆದರೆ, ಅಪ್ಡೇಟ್ ಮಾಡುವ ಮೂಲಕ ಇದನ್ನು ಸುಧಾರಿಸಲಾಗಿದೆ. ಇದೀಗ ಬಳಕೆದಾರು ಯಾವುದಾದರೊಬ್ಬ ಅಥವಾ ಒಬ್ಬರಿಗಿಂತ ಅಧಿಕ ಸದಸ್ಯರಿಗಾಗಿ ರಿಮೈಂಡರ್ ಸೆಟ್ ಮಾಡಬಹುದು. ಇದಲ್ಲದೆ ಹಲವು ಚಟುವಟಿಕೆಗಳಿಗೆ ಅಲರ್ಟ್ ಕೂಡ ಸೆಟ್ ಮಾಡಬಹುದು. ಈ ವೈಶಿಷ್ಟ್ಯ ಕೇವಲ ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತವಾಗಿರದೇ, ಶೀಘ್ರದಲ್ಲಿಯೇ  ಹಿಂದಿ, ಡಚ್, ಫ್ರೆಂಚ್, ಜರ್ಮನಿ, ಇಟಾಲಿಯನ್, ಜಪಾನೀ, ಕೊರಿಯಾ, ಪೋರ್ಚುಗಲ್ ಹಾಗೂ ಸ್ಪ್ಯಾನಿಶ್ ಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಫ್ಯಾಮಿಲಿ ಬೆಲ್ ಮೂಲಕ ಮನೆಯಲ್ಲಿರುವ ಹಲವು ಉಪಕರಣಗಳ ಮೇಲೆ ನೋಟಿಫಿಕೆಶನ್ ಕಳುಹಿಸಬಹುದಾಗಿದೆ.


ಇದನ್ನೂ ಓದಿ- Google Pay NFC Service: ಶೀಘ್ರದಲ್ಲಿಯೇ ಭಾರತದಲ್ಲಿ Google Pay ಬಳಕೆದಾರರು NFC ಬಳಸಿ ಸಂಪರ್ಕರಹಿತ UPI ಪೇಮೆಂಟ್ ಮಾಡಬಹುದು


3. Story Narration: ರಾತ್ರಿ ಮಲಗುವ ವೇಳೆ ಮಕ್ಕಳಿಗೆ ಕಥೆ ಕೇಳುವುದು ಇಷ್ಟವಾಗುತ್ತದೆ. ಹೌದು, ಇದೀಗ ಗೂಗಲ್ (Google) ಅಸಿಸ್ಟೆಂಟ್ ಮಕ್ಕಳಿಗೆ ಕಥೆ ಕೂಡ ಹೇಳಲಿದೆ. ಇದನ್ನು ನೀವು ಯಾವುದೇ ಸ್ಮಾರ್ಟ್ ಡಿಸ್ಪ್ಲೇ ಅಥ್ವಾ ಅಂಡ್ರಾಯಿಡ್ ಡಿಸ್ಪ್ಲೇ ಮೂಲಕ ಆಕ್ಸಸ್ ಮಾಡಬಹುದಾಗಿದೆ. ಗೂಗಲ್ ಲೈಬ್ರರೀ ಮೇಲೆ ಲಭ್ಯವಿರುವ ಯಾವುದೇ ಕಥೆ ನರೆಶನ್ ಗಾಗಿ ಲಭ್ಯವಿರಲಿದೆ.ಇದಲ್ಲದೆ ಗೂಗಲ್ ಪಾಟ್ ಮೋರ್ ಪಬ್ಲಿಷಿಂಗ್ ಹಾಗೂ ಪೆಂಗ್ವಿನ್ ರಾಂಡಮ್ ಹೌಸ್ ಜೊತೆ ಒಪ್ಪಂದ ಕೂಡ ಮಾಡಿಕೊಂಡಿದೆ. ಇದರಿಂದ 'ಹ್ಯಾರಿ ಪಾಟರ್' ಹಾಗೂ 'ಹೂ ವಾಸ್' ಗಳಂತಹ ಕಥೆಗಳ ನರೆಶನ್ ಕೂಡ ನಿಮಗೆ ಲಭಿಸಲಿದೆ. ಇದಲ್ಲದೆ ಗೂಗಲ್ ನೆಸ್ಟ್ ಹಬ್ ಗಳಂತಹ ಡಿವೈಸೆಸ್ ಗಳ ಮೇಲೆ ಮಕ್ಕಳು 'ಕ್ಯಾ ಆಪ್ ಪಾಂಚವಿ ಪಾಸ್ ಹೈ'ಗಳಂತಹ ಆಟಗಳನ್ನು ಕೂಡ ಆಡಬಹುದಾಗಿದೆ.


ಇದನ್ನೂ ಓದಿ- Google Phone: ಶೀಘ್ರದಲ್ಲೇ ಲಾಂಚ್ ಆಗಲಿದೆ ಗೂಗಲ್‌ನ ಫೋನ್


4.New Songs for Kids: ಮಕ್ಕಳಿಗಾಗಿ ಗೂಗಲ್ ಅಸಿಸ್ಟೆಂಟ್ ನಲ್ಲಿ ಮತ್ತೊಂದು ವೈಶಿಷ್ಟ್ಯ ಜೋಡಿಸಲಾಗಿದೆ. ಗೂಗಲ್ ಅಸಿಸ್ಟೆಂಟ್ ನಲ್ಲಿ ಮನೆಯಲಿಯೇ ಹಲವು ಕಾರ್ಯಗಳನ್ನು ಮಾಡಲು ಮಕ್ಕಳಿಗೆ ಸ್ಫೂರ್ತಿ ನೀಡಲು ಹೊಸ ಹಾಡುಗಳನ್ನು ಕೂಡ ಜೋಡಿಸಿದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ಮಕ್ಕಳಿಗೆ ಕೈತೊಳೆಯಲು ಸ್ಫೂರ್ತಿ ನೀಡುವ ಹಾಡುಗಳಂತೆಯೇ ಈ ಹಾಡುಗಳು ಇರಲಿವೆ. ಈ ಬಾರಿ ಗೂಗಲ್ 'ಕ್ಲೀನ್ ಅಪ್', 'ಗೋ ಟು ಸ್ಲೀಪ್' ಹಾಗೂ 'ಬ್ರಷ್ ಯುವರ್ ಟೀಥ್' ಗಳಂತಹ ಹಾಡುಗಳನ್ನು ಇದರಲ್ಲಿ ಜೋಡಿಸಿದೆ.


ಇದನ್ನೂ ಓದಿ- Googleನಲ್ಲಿ ಈ ವಿಷಯಗಳನ್ನು ಮರೆತೂ ಕೂಡ ಸರ್ಚ್ ಮಾಡದಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.