ಮೊಟೊರೊಲಾದ ಮತ್ತೊಂದು ಅದ್ಭುತ ಸ್ಮಾರ್ಟ್ಫೋನ್: ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
ಮೊಟೊರೊಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ನವದೆಹಲಿ: Motorola ಮತ್ತೊಂದು G ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದಕ್ಕೆ Moto G72 ಎಂದು ಹೆಸರಿಡಲಾಗಿದೆ. ಯುಎಸ್ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC), ಟೆಲಿಕಮ್ಯುನಿಕೇಶನ್ ಮತ್ತು ಡಿಜಿಟಲ್ ಗವರ್ನಮೆಂಟ್ ರೆಗ್ಯುಲೇಟರಿ ಅಥಾರಿಟಿ (TDRA) ಯುಎಇ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಮತ್ತು ಐಎಂಇಐ ಸೇರಿದಂತೆ ಹಲವಾರು ಪ್ರಮಾಣೀಕರಣ ಸೈಟ್‌ಗಳಲ್ಲಿ ಈ ಸಾಧನವನ್ನು ಗುರುತಿಸಲಾಗಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‍ಫೋನ್ ಕಳೆದ ವರ್ಷ ಬಿಡುಗಡೆಯಾದ Moto G71ನ ಮುಂದಿನ ವರ್ಷನ್ ಆಗಿದೆ ಎಂದು ಹೇಳಲಾಗಿದೆ.
ಶೀಘ್ರವೇ ಭಾರತದಲ್ಲಿ Moto G72 ಬಿಡುಗಡೆ
ಆರಂಭದಲ್ಲಿ MySmartPrice ಗುರುತಿಸಿದಂತೆ, Moto G72 ಸ್ಮಾರ್ಟ್‌ಫೋನ್ FCC, TDRA ಮತ್ತು BIS ವೆಬ್‌ಸೈಟ್‌ಗಳಲ್ಲಿ ಮತ್ತು ಮಾದರಿ ಸಂಖ್ಯೆ XT2255 ನೊಂದಿಗೆ IMEI ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ. ಇದು 5,000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರಲಿದ್ದು, NFC ಮತ್ತು ಬ್ಲೂಟೂತ್ ಸಂಪರ್ಕ ಆಯ್ಕೆಗಳನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಗೆ 5G Smartphone ಹೊರ ತರುತ್ತಿದೆ ಜಿಯೋ .. ! ಬೆಲೆ ಕೇಳಿದರೆ ಖರೀದಿಸುವುದು ಗ್ಯಾರಂಟಿ
Moto G72 ವೇಗದ ಚಾರ್ಜಿಂಗ್
ಮಾಹಿತಿ ಪ್ರಕಾರ ಈ ಸ್ಮಾರ್ಟ್‍ಫೋನ್ 33W ವೇಗದ ಚಾರ್ಜಿಂಗ್ ಬೆಂಬಲಿಸಿದೆ. ಇದಲ್ಲದೆ Moto G72ನ BIS ಪಟ್ಟಿಯು ಈ ಸಾಧನವನ್ನು ಭಾರತದಲ್ಲಿಯೂ ತಯಾರಿಸಲಾಗುವುದು ಎಂದು ಖಚಿತಪಡಿಸಿದೆ. ಇತ್ತೀಚೆಗೆ ಮೊಟೊರೊಲಾ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ Moto G32 ಮತ್ತು Moto G62 ಸ್ಮಾರ್ಟ್‍ಫೋನ್‍ಗಳನ್ನು ಅನಾವರಣಗೊಳಿಸಿತು. ಇದಲ್ಲದ ಲೆನೊವೊ ಮಾಲೀಕತ್ವದ ಕಂಪನಿಯು ಸೆಪ್ಟೆಂಬರ್ 8ರಂದು ಜಾಗತಿಕ ಮಾರುಕಟ್ಟೆಯಲ್ಲಿ 3 ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ.
Moto G72ನ ನಿರೀಕ್ಷಿತ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ Moto G72 ಸ್ಮಾರ್ಟ್‍ಫೋನ್ Moto G71ನ ಉತ್ತರಾಧಿಕಾರಿ ಅಂದರೆ ಮುಂದುವರಿದ ವರ್ಷನ್ ಅಗಿರಲಿದೆ. ಇದು ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. Qualcommನ ಸ್ನಾಪ್‌ಡ್ರಾಗನ್ 695 SoC, 5,000mAh ಬ್ಯಾಟರಿ, 33W TurboPower ವೇಗದ ಚಾರ್ಜಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ಸಾಧನವು ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಮತ್ತು 6.4-ಇಂಚಿನ AMOLED ಡಿಸ್ಪ್ಲೇ ಜೊತೆಗೆ ಪಂಚ್ ಹೋಲ್ ಒಳಗೊಂಡಿದೆ. ಇದರ ಮೂಲ ಸಾಧನದ 6GB + 128GB ರೂಪಾಂತರಕ್ಕೆ 15,999 ರೂ. ಬೆಲೆ ಇದೆ. ಹೀಗಾಗಿ Moto G72 ಹೆಚ್ಚುಕಡಿಮೆ ಇದೇ ಆಸುಪಾಸಿನ ಬೆಲೆ ಹೊಂದಿರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಈ ತಂತ್ರಜ್ಞಾನದ ಮೂಲಕ ಕೇವಲ 24 ಗಂಟೆಗಳಲ್ಲಿ ಸಿದ್ದವಾಗುತ್ತದೆ ಐಶಾರಾಮಿ ಮನೆ, ತಗಲುವ ವೆಚ್ಚ ಕೂಡಾ ಕಡಿಮೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.