ನವದೆಹಲಿ: ಮೊಟೊರೊಲಾ ಕಳೆದ ವಾರ ಯುರೋಪ್‌ನಲ್ಲಿ ತನ್ನ ಬಜೆಟ್ ಸ್ಮಾರ್ಟ್‌ಫೋನ್ Moto G32 ಬಿಡುಗಡೆ ಮಾಡಿತು. ಈಗ ಕಂಪನಿಯು ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಮೊಟೊರೊಲಾ Moto G32 ಸ್ಮಾರ್ಟ್‌ಫೋನ್ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಸಾಧನವು ಆಗಸ್ಟ್ 9ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಜನಪ್ರಿಯ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದರ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

Moto G32 ವಿಶೇಷಣಗಳು


Moto G32 Full HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‍ನೊಂದಿಗೆ 6.5-ಇಂಚಿನ LCD ಪ್ಯಾನೆಲ್‌ನೊಂದಿಗೆ ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಸ್ಮಾರ್ಟ್‌ಫೋನ್ ಬದಿಗಳಲ್ಲಿ slim bezelsಗಳನ್ನು ಹೊಂದಿದ್ದು, ಸೆಲ್ಫಿ ಕ್ಯಾಮೆರಾಗಾಗಿ ಮಧ್ಯದಲ್ಲಿ ಪಂಚ್-ಹೋಲ್ ಇದೆ.


ಇದನ್ನೂ ಓದಿ: 5G Spectrum ಹರಾಜು ಪ್ರಕ್ರಿಯೆಯಲ್ಲಿ ಬಾಜಿ ಹೊಡೆದ ಜಿಯೋ, 1.5 ಲಕ್ಷ ಕೋಟಿ ರೂ.ರೇಸ್ ನಲ್ಲಿ ಹಿಂದೆ ಬಿದ್ದ ಅಡಾನಿ ನೆಟ್ವರ್ಕ್


Moto G32 ಬ್ಯಾಟರಿ


ಈ ಸಾಧನವು ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 4GB RAM ಮತ್ತು 64GB ಸ್ಟೋರೇಜ್‍ನೊಂದಿಗೆ ಬರುತ್ತದೆ. ಮೈಕ್ರೊ SD ಕಾರ್ಡ್ ಬಳಸಿ 1TBವರೆಗೆ ಸ್ಟೋರೇಜ್ ವಿಸ್ತರಿಸುವ ಅವಕಾಶವಿದೆ. ಈ ಸಾಧನವು 5,000mAh ಬ್ಯಾಟರಿ ಹೊಂದಿದ್ದು, ಅದು 30W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು Android 12-ಆಧಾರಿತ UI ನಲ್ಲಿ ಕಾರ್ಯನಿರ್ವಹಿಸುತ್ತದೆ.


Moto G32 ಕ್ಯಾಮೆರಾ


ಕ್ಯಾಮೆರಾ ಬಗ್ಗೆ ಹೇಳುವುದಾದರೆ ಈ ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 118-ಡಿಗ್ರಿ FOV ಜೊತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಈ ಸಾಧನವು ಸೆಲ್ಫಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.


ಇದನ್ನೂ ಓದಿ: ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ನ ಅದ್ಭುತ ಸ್ಮಾರ್ಟ್‌ಫೋನ್


Moto G32 ವೈಶಿಷ್ಟ್ಯಗಳು


Moto G32 ಆಂಡ್ರಾಯ್ಡ್ 13 ಅಪ್‌ಗ್ರೇಡ್ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಇದರ ಹೊರತಾಗಿ ಈ ಸಾಧನವು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಸಾಧನದ ಇತರ ವೈಶಿಷ್ಟ್ಯಗಳ ಪೈಕಿ ಡ್ಯುಯಲ್ ಸಿಮ್, 4G LTE, Wi-Fi 802.11ac, ಬ್ಲೂಟೂತ್ 5.2, GPS, NFC, USB-C ಪೋರ್ಟ್, 3.5mm ಆಡಿಯೋ ಜ್ಯಾಕ್ ಮತ್ತು ನೀರು-ನಿವಾರಕ ವಿನ್ಯಾಸವನ್ನು ಒಳಗೊಂಡಿದೆ. ಈ ಸ್ಮಾರ್ಟ್‍ಫೋನ್‍ 161.8 x 73.8 x 8.5 ಮಿಮೀ ಅಳತೆ ಮತ್ತು 184 ಗ್ರಾಂ ತೂಕವಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.