Mysterious Places In India: ಪ್ರಪಂಚದಲ್ಲಿ ಇಂತಹ ಹಲವಾರು ಸಂಗತಿಗಳಿದ್ದು, ಈ ಸಂಗತಿಗಳ ಮೇಲೆ ಕಿವಿ ಮತ್ತು ಕಣ್ಣುಗಳು ನಂಬುವುದೇ ಇಲ್ಲ. ಈ ಸಂಗತಿಗಳು ತನ್ನ ಒಡಲಲ್ಲಿ ಹಲವಾರು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿವೆ. ಹಾಗಾದರೆ ಬನ್ನಿ ಇಂತಹುದೇ ಒಂದು ರಹಸ್ಯದಿಂದ ಕೂಡಿದ ಸ್ಥಳವೊಂದರ ಬಗ್ಗೆ ಮಾಹಿತಿ ಪಡೆಯೋಣ.


COMMERCIAL BREAK
SCROLL TO CONTINUE READING

ಮ್ಯಾಗ್ನೆಟಿಕ್ ಹಿಲ್ Magnetic Hill
ಭಾರತದಲ್ಲಿ ಪರ್ವತ ಪ್ರದೇಶವೊಂದಿದ್ದು, ಅಲ್ಲಿ ವಾಹನಗಳು ಪೆಟ್ರೋಲ್-ಡೀಸೆಲ್ ಇಲ್ಲದೆ ಚಲಿಸುತ್ತವೆ. ಈ ಬೆಟ್ಟವು ಲಡಾಖ್‌ನ ಲೇಹ್  (Leh of Ladakh) ಪ್ರದೇಶದಲ್ಲಿದೆ. ಇಲ್ಲಿನ ರಸ್ತೆಗಳಲ್ಲಿ ವಾಹನಗಳು ತನ್ನಷ್ಟಕ್ಕೆ ತಾನೇ ಚಲಿಸುತ್ತವೆ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಯಾರಾದರೂ ತಮ್ಮ ಕಾರನ್ನು ಇರಿಸಿದರೆ ಅವರಿಗೆ ಆ ಕಾರು ಎಂದಿಗೂ ಸಿಗುವುದಿಲ್ಲವಂತೆ. ಇದೆಲ್ಲ ಹೇಗೆ ನಡೆಯುತ್ತದೆ ಎಂಬ ರಹಸ್ಯ ಇನ್ನೂ ತಿಳಿದುಬಂದಿಲ್ಲ.


ವಿಜ್ಞಾನಿಗಳ ಹೇಳುವ ಪ್ರಕಾರ, ಈ ಪರ್ವತ ಪ್ರದೇಶವು ಆಯಸ್ಕಾಂತೀಯ  ಶಕ್ತಿಯನ್ನು ಹೊಂದಿದೆ, ಇದು ವಾಹನಗಳನ್ನು ಗಂಟೆಗೆ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಎಳೆಯುತ್ತದೆ.


ಇದನ್ನೂ ಓದಿ-ಎಚ್ಚರ! March 21ರಂದು ಭೂಮಿಯ ಸನೀಹದಿಂದ ಹಾದುಹೋಗಲಿದೆ ಇದುವರೆಗಿನ ಅತ್ಯಂತ ದೊಡ್ಡ ಉಲ್ಕಾಶಿಲೆ: NASA


ವಿಮಾನಗಳಲ್ಲಿಯೂ  ಕೂಡ ಈ ಆಯಸ್ಕಾಂತಿಯ ಶಕ್ತಿಯ ಪ್ರಭಾವ
ಈ ಪರ್ವತ ಪ್ರದೇಶದಲ್ಲಿರುವ ಆಯಸ್ಕಾಂತೀಯ ಶಕ್ತಿಯ ಪ್ರಭಾವ ಎಷ್ತೊಂದು ಪ್ರಬಲವಾಗಿದೆ ಎಂದರೆ ಈ ಪ್ರದೇಶದ ಮೇಲೆ ಹಾರಾಡುವ ವಿಮಾನಗಳೂ ಕೂಡ ಇದಕ್ಕೆ ಹೊರತಾಗಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಹಲವು ಪೈಲಟ್ ಗಳು ಕೂಡ ಈ ಪ್ರದೇಶದ ಮೇಲಿಂದ ವಿಮಾನ ಹಾರಾಟದ ಸಮಯದಲ್ಲಿಯೂ ಕೂಡ ಈ ಆಯಸ್ಕಾಂತಿಯ ಶಕ್ತಿಯ ಅನುಭವವಾಗಿದೆ ಎನ್ನುತ್ತಾರೆ. ಈ ಆಯಸ್ಕಾಂತೀಯ ಸೆಳೆತದಿಂದ ಪಾರಾಗಲು ವಿಮಾನ ವೇಗವಾಗಿ ಚಲಿಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ-Alert : ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಆಗಬಹುದು.! ಕೂಡಲೇ ಈ 8 ಆಪ್ಸ್ ಡಿಲಿಟ್ ಮಾಡಿ


ಗ್ರ್ಯಾವಿಟಿ ಹಿಲ್ Gravity Hill
ಈ ಮ್ಯಾಗ್ನೆಟಿಕ್ ಹಿಲ್ ಅನ್ನು ಗ್ರ್ಯಾವಿಟಿ ಹಿಲ್ ಎಂದೂ ಕೂಡ ಕರಯಲಾಗುತ್ತದೆ. ಈ ಪರ್ವತ ಪ್ರದೇಶದಲ್ಲಿ ಗುರುತ್ವಾಕರ್ಶನದ ನಿಯಮಗಳೂ ಕೂಡ ಫೇಲ್ ಆಗುತ್ತವಂತೆ. ಗುರುತ್ವಾಕರ್ಷಣ ನಿಯಮದ ಪ್ರಕಾರ ಯಾವುದೇ ಒಂದು ವಸ್ತುವನ್ನು ಇಳಿಜಾರು ಪ್ರದೇಶದಲ್ಲಿ ಇರಿಸಿದರೆ. ಅದು ಕೇಳಬಾಗಕ್ಕೆ ಉರುಳುತ್ತದೆ. ಆದರೆ, ಈ ಪರ್ವತ ಪ್ರದೇಶದಲ್ಲಿ ಇದರ ತದ್ವಿರುದ್ಧ ನಡೆಯುತ್ತದೆ ಎನ್ನಲಾಗಿದೆ.


ಇದನ್ನೂ ಓದಿ-UCAV Arrow: ವಿಶ್ವದ ಮೊಟ್ಟಮೊದಲ ಮಾನವರಹಿತ ಸೂಪರ್ ಸಾನಿಕ್ ಯುದ್ಧ ಡ್ರೋನ್ ಬಿಡುಗಡೆ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.