NASA, GJ 1132 b: ಎರಡನೇ ಭೂಮಿಯ ಕುರಿತು ಸಿಕ್ಕ ಸಂಕೇತ! ಲಾವಾರಸದಿಂದ ಕೂಡಿದ ಈ Alien ಗ್ರಹ (Alien Planet) ತನ್ನದೇ ವಾಯುಮಂಡಲ ಸೃಷ್ಟಿಸುತ್ತಿದೆ
NASA, GJ 1132 b: ವಿಜ್ಞಾನಿಗಳು ನಿರಂತರವಾಗಿ ಈ ಗೃಹದ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದಾರೆ. GJ1132B ಹೆಸರಿನ ಈ ಗ್ರಹ ತನ್ನ ನಕ್ಷತ್ರಗಳ ಜೊತೆಗೆ ಹೇಗೆ ಸಂಬಂಧ ಹೊಂದಿದೆ.? ಗ್ರಹದ ಸ್ಥಿತಿಗತಿಯ ಕಾರಣ ಸಂಶೋಧಕರು ಈ ಪ್ರಕರಣದಲ್ಲಿ ಸೂರ್ಯನಂತನ ನಕ್ಷತ್ರ ಈ ಗ್ರಹವನ್ನು ಬೆಚ್ಚಗಿಡಲು ತನ್ನತ್ತ ಸೆಳೆಯುತ್ತವೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಗ್ರಹದ ಮೇಲೆ ಭೀಕರ ಜ್ವಾಲಾಮುಖಿ ಚಟುವಟಿಕೆಗಳಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: NASA, GJ 1132 b - ಲಾವಾದಿಂದ ತುಂಬಿದ ಏಲಿಯನ್ ಗ್ರಹವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ಲ ಈ ಏಲಿಯನ್ ಗ್ರಹವು ಈ ಸಮಯದಲ್ಲಿ ತನ್ನದೇ ಆದ ವಾಯುಮಂಡಲ ಸೃಷ್ಟಿಸುತ್ತಿದೆ. ಲಕ್ಷಾಂತರ ವರ್ಷಗಳ ಹಿಂದೆ, ಭೂಮಿ ಕೂಡ ಇದೆ ರೀತಿ ಮಾಡಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಬಲ್ ಟೆಲಿಸ್ಕೋಪ್ ಈ ಗ್ರಹವನ್ನು ಕಂಡುಹಿಡಿಯಲಾಗಿದೆ. ಈ ಏಲಿಯನ್ ಗ್ರಹವನ್ನು ಬೇಹುಗಾರಿಕೆಯ ಮೂಲಕ ಪತ್ತೆಹಚ್ಚಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಗ್ರಹ ತನ್ನ ವಾಯುಮಂಡಲ ಕಳೆದುಕೊಂಡ ಬಳಿಕ ತನ್ನಷ್ಟಕ್ಕೆ ತಾನೇ ಅದನ್ನು ಪುನರ್ನಿರ್ಮಿಸುತಿದೆ ಎಂದು ಅವರು ಹೇಳಿದ್ದಾರೆ.
ಎಚ್ಚರ! March 21ರಂದು ಭೂಮಿಯ ಸನೀಹದಿಂದ ಹಾದುಹೋಗಲಿದೆ ಇದುವರೆಗಿನ ಅತ್ಯಂತ ದೊಡ್ಡ ಉಲ್ಕಾಶಿಲೆ: NASA
ಆಶ್ಚರ್ಯಕ್ಕೆ ಒಳಗಾದ ವಿಜ್ಞಾನಿಗಳು
ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಎಕ್ಸೋಪ್ಲಾನೆಟ್ ವಿಜ್ಞಾನಿ ರೈಸಾ ಎಸ್ಟ್ರೆಲ್ಲಾ ಹೇಳುವ ಪ್ರಕಾರ, "ಇದು ತುಂಬಾ ರೋಮಾಂಚನಕ ಘಟನೆಯಾಗಿದೆ , ಏಕೆಂದರೆ ಇದು ತನ್ನ ವಾಯುಮಂಡಲವನ್ನು ಪುನಃ ಸೃಷ್ಟಿಸುತ್ತಿದೆ ಎಂಬುದನ್ನು ನಾವು ಊಹಿಸಬಹುದು" ಎನ್ನುತ್ತಾರೆ. ಆದ್ದರಿಂದ, ಇದು ಈ ಗ್ರಹದ ಎರಡನೇ ವಾಯುಮಂಡಲವಾಗಿರುವ ಸಾಧ್ಯತೆ ಇದೆ. ಈ ಹೆಚ್ಚಿನ ವಿಕಿರಣ ಗ್ರಹವು ತನ್ನ ವಾತಾವರಣವನ್ನು ಕಳೆದುಕೊಂಡಿರುವುದರಿಂದ ಬಹಳ ನೀರಸವಾಗಲಿದೆ ಎಂದು ನಾವು ಈ ಹಿಂದೆ ಭಾವಿಸಿದ್ದೇವೆ ಎಂದು ಎಸ್ಟ್ರೆಲ್ಲಾ ಹೇಳುತ್ತಾರೆ. ಹಬಲ್ ಟೆಲಿಸ್ಕೋಪ್ನೊಂದಿಗೆ ಅದರ ಪ್ರಸ್ತುತ ನೋಟವನ್ನು ನೋಡಿದಾಗ, ನಮಗೆ ಆಶ್ಚರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Parker Solar Probe : ಶುಕ್ರ ಗ್ರಹದ ಬಹು ಅಪರೂಪದ ಫೋಟೋ ಕ್ಲಿಕ್ಕಿಸಿದ ನಾಸಾ..!
ಭೂಮಿಯ ವಾಯುಮಂಡಲ ಅದರ ಆಯಸ್ಕಾಂತೀಯ ಗುಣದ ಕಾರಣ ಉಳಿದುಕೊಂಡಿದೆ. ಆದರೆ, ಬೇರೆ ಗ್ರಹಗಳಲ್ಲಿ ಇದೆ ರೀತಿ ಇರಲಿದೆ ಎಂಬುದನ್ನು ಊಹಿಸುವುದು ಸರಿಯಲ್ಲ. ಮಂಗಳ ಗ್ರಹದ ಮೇಲೂ ಕೂಡ ದಟ್ಟವಾದ ವಾಯುಮಂಡಲವಿತ್ತು. ಆದರೆ, ಮಂಗಳ ಗ್ರಹ 400 ವರ್ಷಗಳ ಬಳಿಕ ತನ್ನ ಮ್ಯಾಗ್ನೆಟಿಕ್ ಫೀಲ್ಡ್ ತೋರೆದಿದೆ. ಆ ನಂತರ ಅದರ ವಾಯುಮಂಡಲ ಕೂಡ ಮಾಯವಾಗಿದೆ.
ಇದನ್ನೂ ಓದಿ-ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.