Costliest Smartphone: ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ, ಮುಕೇಶ್ ಅಂಬಾನಿ ಓರ್ವ ಬಿಸ್ನೆಸ್ ಟೈಕೂನ್ ಆಗಿದ್ದಾರೆ ಮತ್ತು ದೇಶಾದ್ಯಂತ ಅನೇಕ ವ್ಯವಹಾರಗಳನ್ನು ಹೊಂದಿದ್ದಾರೆ. ಮುಕೇಶ್ ಅಂಬಾನಿ ಬಳಿ ವಿಶ್ವದ ಎಲ್ಲಾ ರೀತಿಯ ಸೌಕರ್ಯಗಳಿವೆ ಎಂದರೆ ತಪ್ಪಾಗಲಾರದು.  ಈ ಸೌಕರ್ಯಗಳಲ್ಲಿ ಐಷಾರಾಮಿ ಕಾರುಗಳು, ಖಾಸಗಿ ಜೆಟ್‌ಗಳು ಮತ್ತು ದುಬಾರಿ ಮನೆಗಳು ಶಾಮೀಳಾಗಿವೆ. ಮುಕೇಶ್ ಅಂಬಾನಿಯಂತೆ, ಅವರ ಪತ್ನಿ ನೀತಾ ಅಂಬಾನಿ ಕೂಡ ಐಷಾರಾಮಿ ವಸ್ತುಗಳನ್ನು ಇಷ್ಟಪಡುತ್ತಾರೆ ಮತ್ತು ಅವರ ಐಷಾರಾಮಿ ಸಂಗ್ರಹಣೆಯು ಕಾರುಗಳು, ಮನೆಗಳು ಮತ್ತು ಜೆಟ್ ವಿಮಾನಗಳಂತಹ ವಸ್ತುಗಳನ್ನು ಒಳಗೊಂಡಿದೆ, ಆದರೆ ಅವರ ಬಳಿ ಇರುವ ಸ್ಮಾರ್ಟ್ ಫೋನ್ ಸಾಕಷ್ಟು ದುಬಾರಿಯಾಗಿದೆ ಎನ್ನಲಾಗಿದೆ. ನೀತಾ ಅಂಬಾನಿ ಅವರ ಸ್ಮಾರ್ಟ್‌ಫೋನ್‌ನ ಬೆಲೆ ಗರಿಷ್ಠ 2 ರಿಂದ 5 ಲಕ್ಷ ರೂಪಾಯಿ ಎಂದು ನೀವು ಭಾವಿಸುತ್ತಿದ್ದರೆ, ಸ್ವಲ್ಪ ನಿಲ್ಲಿ,  ಏಕೆಂದರೆ ಅವರ ಫೋನ್‌ನ ಬೆಲೆ ನಿಮ್ಮ ಯೋಚನೆಯನ್ನು ಮೀರಿದೆ. ನಿಮಗೆ ಇದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿದ್ದರೆ, ಇಂದು ನಾವು ನಿಮಗೆ ನೀತಾ ಅಂಬಾನಿ ಬಳಿ ಇರುವ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ, ನಾವು ನಿಮಗೆ ಹೇಳಲು ಹೊರಟಿರುವ ಫೋನ್ ವಿಶ್ವದ ಅತ್ಯಂತ ದುಬಾರಿ ಫೋನ್ ಆಗಿದೆ, ಇದರ ಬೆಲೆ ಸಾಮಾನ್ಯ ಮನುಷ್ಯನಿಗೆ ನಿಲುಕದ ಬೆಲೆಯಾಗಿದೆ, ಹಲವು ಮಿಲಿಯನೇರ್‌ಗಳು ಕೂಡ ಅದನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇಂದು ನಾವು ನಿಮಗೆ ಈ ಅತ್ಯಂತ ದುಬಾರಿ ಫೋನ್ ಬಗ್ಗೆ ಹೇಳಲಿದ್ದೇವೆ.  ಅಷ್ಟೇ ಅಲ್ಲ, ವಿಶ್ವದ 5 ಅತ್ಯಂತ ದುಬಾರಿ ಫೋನ್‌ಗಳ ಬಗ್ಗೆಯೂ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಇವುಗಳ ಬೆಲೆಗೆ ನೀವು ಹಲವು ಚಾರ್ಟರ್ಡ್ ವಿಮಾನಗಳನ್ನು ಖರೀದಿಸಬಹುದು.


ಇದನ್ನೂ ಓದಿ-Inverter Bulb: ಕರೆಂಟ್ ಇಲ್ಲದೆಯೇ 6 ಗಂಟೆ ಉರಿಯುತ್ತೇ ಈ ಬಲ್ಬ್, ಭಾರಿ ಬೆಳಕು ಕೂಡ ನೀಡುತ್ತದೆ!


ಇವು ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳಾಗಿವೆ
ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ 
ಸ್ಟುವರ್ಟ್ ಹ್ಯೂಸ್ ಐಫೋನ್ 4 ಎಸ್ ಎಲೈಟ್ ಗೋಲ್ಡ್ 
ಸ್ಟುವರ್ಟ್ ಹ್ಯೂಸ್ ಐಫೋನ್ 4 ಡೈಮಂಡ್ ರೋಸ್ ಆವೃತ್ತಿ 
ಗೋಲ್ಡ್ ಸ್ಟ್ರೈಕರ್ ಐಫೋನ್ 3GS ಸುಪ್ರೀಂ 
iPhone 3G ಕಿಂಗ್ಸ್ ಬಟನ್ 


ಇದನ್ನೂ ಓದಿ-Watch Netflix Free: ವರ್ಷವಿಡೀ ನೆಟ್ ಫ್ಲಿಕ್ಸ್ ಮೇಲೆ ಉಚಿತ ಚಲನಚಿತ್ರಗಳನ್ನು ವೀಕ್ಷಿಸಬೇಕೆ? ಇಲ್ಲಿದೆ ಪ್ಲಾನ್ !


Falcon Supernova iPhone 6 Pink Diamond ಇದು ವಿಶ್ವದ ಅತ್ಯಂತ ದುಬಾರಿ ಫೋನ್ ಆಗಿದ್ದು, ಬೆಲೆಬಾಳುವ ಗುಲಾಬಿ ಬಣ್ಣದ ವಜ್ರವನ್ನು ಇದರಲ್ಲಿ ಅಳವಡಿಸಿರುವ ಕಾರಣ ಇದು ತುಂಬಾ ದುಬಾರಿಯಾಗಿದೆ. ನಾವು ಈ ಫೋನ್‌ನ ಬೆಲೆಯ ಬಗ್ಗೆ ಹೇಳುವುದಾದರೆ, ಅದನ್ನು ಖರೀದಿಸಲು $ 48.5 ಮಿಲಿಯನ್ (ಸುಮಾರು 395 ಕೋಟಿ ರೂ.) ಪಾವತಿಸಬೇಕು. ಈ ಫೋನ್ ಅನ್ನು ವಾಸ್ತವದಲ್ಲಿ  ಐಫೋನ್ 6 ಗಾಗಿ ಫಾಲ್ಕನ್ ಸೂಪರ್ನೋವಾ ಸಿದ್ಧಪಡಿಸಿದ ಕಸ್ಟಮೈಸ್ ಮಾಡಿದ ಆವೃತ್ತಿಯಾಗಿದೆ. ಇದು 2004 ರಲ್ಲಿ ಬಿಡುಗಡೆಯಾದ ಅದೇ ಐಫೋನ್ 6 ಆಗಿದ್ದು, ತುಂಬಾ ಜನಪ್ರೇಯವಾಗಿತ್ತು. ಇದನ್ನು ಸಿದ್ಧಪಡಿಸುವಾಗ, ಐಫೋನ್ 6 ನಲ್ಲಿ 24 ಕ್ಯಾರೆಟ್ ಚಿನ್ನವನ್ನು ಬಳಸಲಾಗಿದೆ, ಜೊತೆಗೆ ಫೋನ್‌ನ ಹಿಂಭಾಗದ ಪ್ಯಾನೆಲ್‌ಗೆ ದೊಡ್ಡ ಗುಲಾಬಿ ಬಣ್ಣದ ವಜ್ರವನ್ನು ಸೇರಿಸಲಾಗಿದೆ, ಇದು ಈ ಫೋನ್ ಅನ್ನು ಅಮೂಲ್ಯ ಸಾಧನವನ್ನಾಗಿ ಮಾಡುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ