Smartphone Network Problem: ಫೋನ್‌ನಲ್ಲಿ ನೆಟ್‌ವರ್ಕ್‌ ಇಲ್ಲ ಅಂದ್ರೆ ಕೆಲವರಿಗೆ ಮುಂದೆ ಏನು ಮಾಡಬೇಕು ಎಂದು ತೋಚುವುದೇ ಇಲ್ಲ. ಆದರೆ, ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಸರ್ವೇ ಸಾಮಾನ್ಯ. ಆದಾಗ್ಯೂ, ನಾವು ವಾಸಿಸುವ ಮನೆಯಲ್ಲಿಯೇ ಈ ಸಮಸ್ಯೆ ಇದ್ದರೆ ಹೇಗಿರುತ್ತೆ... ಅಬ್ಬಬ್ಬಾ! ಇದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟವೇ. ಆದಾಗ್ಯೂ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸಿಂಪಲ್ ಟ್ರಿಕ್ಸ್ ಬಳಸಿ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ 


COMMERCIAL BREAK
SCROLL TO CONTINUE READING

ಮನೆಯ  ಹಾಲ್‌ನಲ್ಲಿ ಕುಳಿತು ನೆಟ್‌ವರ್ಕ್ ಚೆಕ್ ಮಾಡಿ: 
ವಾಸ್ತವವಾಗಿ, ಮನೆಯೊಳಗೆ ನೆಟ್‌ವರ್ಕ್ ಸಮಸ್ಯೆ ಆಗಲು ಹಲವು ಕಾರಣಗಳಿವೆ. ಮನೆಯ ವಿನ್ಯಾಸವೂ ಇದಕ್ಕೆ ಕಾರಣವಿರಬಹುದು. ಕಾರಣ ಏನೇ ಇರಲಿ, ಕೆಲವೆಡೆ ರೂಂ ಒಳಗೆ ಸರಿಯಾಗಿ ನೆಟ್‌ವರ್ಕ್ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಮನೆಯ  ಹಾಲ್‌ನಲ್ಲಿ ಕುಳಿತು ನೆಟ್‌ವರ್ಕ್ ಚೆಕ್ ಮಾಡಿ. ಸಾಮಾನ್ಯವಾಗಿ, ಮಳೆಯಲ್ಲಿ ಬೇರೆಡೆಗಿಂತ ಹಾಲ್‌ನಲ್ಲಿ ಉತ್ತಮ ನೆಟ್‌ವರ್ಕ್ ಸಿಗುತ್ತದೆ. 


ಇದನ್ನೂ ಓದಿ- Best Recharge Plan: 180 ದಿನಗಳ ಮಾನ್ಯತೆ, ಬೆಲೆ ರೂ.500ಕ್ಕೂ ಕಡಿಮೆ!


ಅಪಾರ್ಟ್ಮೆಂಟ್:
ಒಂದೊಮ್ಮೆ ನೀವು ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದರೆ, ಇಲ್ಲವೇ ಅಪಾರ್ಟ್ಮೆಂಟ್ ನಲ್ಲಿ ಮನೆ ಖರೀದಿಸಲು ಯೋಚಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿ ಎತ್ತರದ ಫ್ಲೋರ್ ಗಳಲ್ಲಿ ಫ್ಲಾಟ್ ಕೊಳ್ಳಲು ಪ್ರಯತ್ನಿಸಿ. ಎತ್ತರದ ಮಹಡಿಗಳಲ್ಲಿ ಉತ್ತಮ ನೆಟ್‌ವರ್ಕ್ ಕವರೇಜ್ ಲಭ್ಯವಿರುತ್ತದೆ. 


ನೆಟ್‌ವರ್ಕ್ ಬೂಸ್ಟರ್: 
ನೀವಿರುವ ಜಾಗದಲ್ಲಿ ಅತಿಯಾದ ನೆಟ್‌ವರ್ಕ್ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಲು  ನಿಮ್ಮ ಮನೆಯೊಳಗೆ ನೀವು ನೆಟ್‌ವರ್ಕ್ ಬೂಸ್ಟರ್ ಸಾಧನವನ್ನು ಬಳಸುವುದು ಕೂಡ ನಿಮಗೆ ತುಂಬಾ ಪಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ₹ 1500 ರಿಂದ ₹ 4000 ವರೆಗಿನ ಬೆಲೆಯಲ್ಲಿ ಅತ್ಯುತ್ತಮವಾದ ನೆಟ್‌ವರ್ಕ್ ಬೂಸ್ಟರ್  ಲಭ್ಯವಾಗಲಿದೆ. 


ಇದನ್ನೂ ಓದಿ- ಜೋತಿಷ್ಯ ಲೋಕದಲ್ಲಿ AI ಪದಾರ್ಪಣೆ, ಉಚಿತವಾಗಿ ಭವಿಷ್ಯ ಹೇಳಲಿದೆ ಕುಂಡಲಿ ಜಿಪಿಟಿ!


ಗಾಜಿನ ಕಿಟಕಿಗಳು: 
ನೀವು ಮನೆಯನ್ನು ಫುಲ್ ಕವರ್ ಮಾಡುವ ಸಲುವಾಗಿ ಭಾರೀ ಗಾತ್ರದ ಕಿಟಕಿಗಳನ್ನು ಬಳಸುವುದರಿಂದಲೂ ಕೂಡ ನಿಮ್ಮ ಮನೆಯೊಳಗೆ ಸರಿಯಾಗಿ ನೆಟ್‌ವರ್ಕ್ ಬರದೇ ಇರಬಹುದು. ಇದನ್ನು ತಪ್ಪಿಸಲು ಮನೆಯಲ್ಲಿ ಕಿಟಕಿಗಳಿಗೆ ಗಾಜಿನ ಬಾಗಿಲುಗಳನ್ನು ಮಾಡಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ