Digital Payment App ಗಳ ಬಳಕೆ ಹೆಚ್ಚಾದಂತೆ, ಈ ವಿಭಾಗದಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಜನಪ್ರೀಯ ಹಣ ಪಾವತಿ ಅಪ್ಪ್ಲಿಕೆಶನ್ Paytm ಕೂಡ ಇದಕ್ಕೆ ಹೊರತಾಗಿಲ್ಲ. ವಂಚಕರು ಯಾವಾಗಲು Paytm ಬಳಕೆದಾರರನ್ನು ವಂಚಿಸಲು ಹುನ್ನಾರ ನಡೆಸುತ್ತಿರುತ್ತಾರೆ. ಪ್ರಸ್ತುತ Cashback Offer ಅಡಿ Paytm ಬಳಕೆದಾರರನ್ನು ವಂಚಿಸುವ ಪ್ರಯತ್ನ ನಡೆದಿದೆ. ಒಂದು ವೇಳೆ ನೀವೂ ಕೂಡ Paytm ಆಪ್ ಬಳಸುತ್ತಿದ್ದರೆ, ಈ ಹೊಸ ಸ್ಕ್ಯಾಮ್ ನಿಂದ ಪಾರಾಗುವ ಅವಶ್ಯಕತೆ ಇದೆ.


COMMERCIAL BREAK
SCROLL TO CONTINUE READING

ಏನಿದು ಹೊಸ Paytm Cashback Scam
ಆಂಗ್ಲ ಭಾಷೆಯ ವೃತ್ತಪತ್ರಿಕೆಯೊಂದು ಪ್ರಕಟಿಸಿರುವ ವರದಿಯೊಂದರ ಪ್ರಕಾರ, ಹಲವು ಬಳಕೆದಾರರಿಗೆ ಅವರ ಕ್ರೋಮ್ ಬ್ರೌಸರ್ (Chrome Browser) ಮೇಲೆ Paytm Cashback Offer ನೋಟಿಫಿಕೆಶನ್ ಸಿಗುತ್ತಿದೆ. ಈ ನೋಟಿಫಿಕೆಶನ್ ನಲ್ಲಿ 'Congratulations! you have won Paytm Scratch Card' ಎಂದು ಬರೆದಿರುತ್ತದೆ. ಒಂದೊಮ್ಮೆ ನೀವು ಈ ನೋಟಿಫಿಕೆಶನ್ ಅನ್ನು ಕ್ಲಿಕ್ಕಿಸಿದರೆ, ನೀವು Paytm-ಕ್ಯಾಶ್ ಫರ್ ಡಾಟ್ ಕಾಮ್ ವೆಬ್ಸೈಟ್ ತೆರೆದುಕೊಳ್ಳಲಿದೆ.


ಇದನ್ನೂ ಓದಿ-ನಿಮ್ಮ Smartphone ನ Storage ಹೆಚ್ಚಿಸಲು ತಪ್ಪದೆ ಈ 5 ಕೆಲಸಗಳನ್ನ ಮಾಡಿ!


ಈ ವೆಬ್ಸೈಟ್ ನೋಡಲು ಸಂಪೂರ್ಣ Paytm ಅಧಿಕೃತ ವೆಬ್ ತಾಣದಂತೆಯೇ ಇದೆ. ಆದರೆ, ನಿಜ ಹೇಳುವುದಾದರೆ ಇದೊಂದು ಫೇಕ್ ವೆಬ್ ಸೈಟ್ ಆಗಿದೆ. ಈ ವೆಬ್ ಸೈಟ್ ಮೇಲೆ ನಿಮಗೆ ಒಂದು ಕೂಪನ್ ಕಾಣಿಸಿಕೊಳ್ಳಲಿದೆ. ಇದನ್ನು ನೀವು ಸ್ಕ್ರ್ಯಾಚ್ ಮಾಡಿದಾಗ ನಿಮಗೆ ಕ್ಯಾಶ್ ಬ್ಯಾಕ್ (Paytm Cashback Scam) ಹಣ ಕಾಣಿಸಿಕೊಳ್ಳಲಿದೆ. ಈ ಮೊತ್ತ ಪ್ರತಿ ಬಾರಿ ವಿಭಿನ್ನವಾಗಿರಲಿದೆ. ಇದಾರೆ ಕೆಳಗೆ  Send Reward to Paytm ಬಟನ್ ಕೂಡ ನೀಡಲಾಗಿದೆ. ಅದರಲ್ಲಿ ನೀಡಲಾಗಿರುವ ಎಲ್ಲ ಸಂಗತಿಗಳನ್ನು ಒಂದು ವೇಳೆ ನೀವು ಫಾಲೋ ಮಾಡಿದರೆ, ನಿಮ್ಮ ಅಕೌಂಟ್ ಖಾಲಿಯಾಗುವ ಸಾಧ್ಯತೆ ಇದೆ. 


ಇದನ್ನೂ ಓದಿ-Alert! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ


ಅಪ್ಪಿ-ತಪ್ಪಿಯೂ ಕೂಡ ಈ ವೆಬ್ ಸೈಟ್ ತೆರೆಯಬೇಡಿ
ವರದಿಯ ಪ್ರಕಾರ, ಈ ಸ್ಕ್ಯಾಮ್ ಕೇವಲ ಮೊಬೈಲ್ ಫೋನ್ ಮೇಲೆಯೇ ಕಾರ್ಯನಿರ್ವಹಿಸುತ್ತದೆ. ಅಂದರೆ, ಈ ವೆಬ್ಸೈಟ್ ಹಿಂದಿನ ವಂಚಕರ (Paytm Scam) ಉದ್ದೇಶ ಕೇವಲ ಮೊಬೈಲ್ ಬಳಕೆದಾರರನ್ನು ಗುರಿಯಾಗಿಸುವುದಾಗಿದೆ. ಕಂಪ್ಯೂಟರ್ ಬ್ರೌಸರ್ ನಲ್ಲಿ URL ಟೈಪ್ ಮಾಡಿದಾಗ ನೀವು ನೇರವಾಗಿ Paytm ಭೇಟಿ ನೀಡುವಿರಿ. ಹೀಗಾಗಿ ವಂಚಕ ವೆಬ್ ಸೈಟ್ ಗೆ ಭೇಟಿ ನೀಡದಂತೆ ಝೀ ಹಿಂದೂಸ್ತಾನ್ ತನ್ನೆಲ್ಲ ಓದುಗರಿಗೆ ಸಲಹೆ ನೀಡಲು ಬಯಸುತ್ತದೆ. 


ಇದನ್ನೂ ಓದಿ- Best Prepaid Plans Bellow 100 Rupees: 100 ರೂ.ಗಿಂತಲೂ ಕಮ್ಮಿ ಬೆಲೆಗೆ ಸಿಗುವ ಈ ಪ್ಲಾನ್ ನಲ್ಲಿ ಸಿಗುತ್ತೆ 21GB ಡೇಟಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ