Most Google Search By Brides: ಇಂದಿನ ತಂತ್ರಜ್ಞಾನದ ಯುಗದಲ್ಲಿ ಇಂಟರ್ನೆಟ್ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಇಂದಿನ ಯುಗದಲ್ಲಿ ಗೂಗಲ್ ಇಲ್ಲದೆ ಜೀವನ ಅಪೂರ್ಣ ಎಂದೆನಿಸಲಾರಂಭಿಸಿದೆ. ನಾವು ಏನನ್ನಾದರೂ ತಿಳಿದುಕೊಳ್ಳಲು ಬಯಸಿದಾಗ, ನಾವು ತಕ್ಷಣ Google ನಲ್ಲಿ ಸರ್ಚ್ ಕೈಗೊಳ್ಳುತ್ತೇವೆ ಮತ್ತು ನಾವು ಎಲ್ಲಾ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳುತ್ತೇವೆ. ಸರ್ಚ್ ಇಂಜಿನ್ ಗೂಗಲ್ ನಮ್ಮ ಜೀವನವನ್ನು ಇಂದು ತುಂಬಾ ಸುಲಭಗೊಳಿಸಿದೆ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳು ಸೇರಿದಂತೆ ನಮ್ಮ ಜೀವನದ ಅನೇಕ ಸಮಸ್ಯೆಗಳಿಗಾಗಿ ಪರಿಹಾರ ಹುಡುಕಲು ನಾವು ಗೂಗಲ್ ನತ್ತ ಧಾವಿಸುತ್ತೇವೆ. ಗೂಗಲ್‌ನಿಂದ ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ವಯಸುವ ಸಾಕಷ್ಟು ಜನರಿದ್ದಾರೆ. ಹೀಗಿರುವಾಗ ನವವಿವಾಹಿತ ಯುವತಿ ಗೂಗಲ್‌ನಲ್ಲಿ ಏನು ಹುಡುಕಾಟ ನಡೆಸುತ್ತಾಳೆ ಎಂಬುದರ ಕುರಿತು ವರದಿಯೊಂದು ಬಹಿರಂಗಗೊಂಡಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಗಂಡನನ್ನು ಸಂತೋಷವಾಗಿರಿಸುವುದು ಹೇಗೆ?
ಮದುವೆಯ ನಂತರ ಹೆಣ್ಣು ತನ್ನ ತಂದೆಯ ಮನೆಯನ್ನು ತೊರೆದು ಪತಿಯ ಮನೆಗೆ ಸೇರಿಕೊಂಡಾಗ ಅವಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತವೇ. ಇಂತಹ ಪರಿಸ್ಥಿತಿಯಲ್ಲಿ, ಅವಳು ಯಾವಾಗಲೂ ತನ್ನ ಪತಿ ತನ್ನೊಂದಿಗೆ ಸಂತೋಷವಾಗಿರಬೇಕು ಎಂದು ಬಯಸುತ್ತಾಳೆ. ಅವಳು ತನ್ನ ಪತಿಗೆ ಇಷ್ಟವಾಗುವುದು ಎಂದು ಮತ್ತು ಇಷ್ಟವಾಗದೆ ಇರುವುದು ಎಂದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಥವಾ ತಿಳಿದುಕೊಳ್ಳಳು ಬಯಸುತ್ತಾಳೆ. ಬಹುತೇಕ ನವ ವಧುಗಳು ಗೂಗಲ್‌ನಲ್ಲಿ ಪತಿಯನ್ನು ಸಂತೋಷವಾಗಿರಿಸುವುದು ಹೇಗೆ? ಎಂಬುದರ ಕುರಿತು ಸರ್ಚ್ ಮಾಡುತ್ತಾರೆ


ಗಂಡನ ಹೃದಯ ಗೆಲ್ಲುವುದು ಹೇಗೆ?
ನವವಿವಾಹಿತ ಮಹಿಳೆ ತನ್ನ ಬಾಳಸಂಗಾತಿಯೊಂದಿಗೆ ಉತ್ತಮ ಸಂಬಂಧಕ್ಕಾಗಿ ತನ್ನ ಗಂಡನ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಾಳೆ. ಹೀಗಿರುವಾಗ ನವವಿವಾಹಿತೆ ಪತಿಯ ಹೃದಯವನ್ನು ಹೇಗೆ ಗೆಲ್ಲಬಹುದು? ಎಂಬುದರ ಕುರಿತು ಗೂಗಲ್‌ನಲ್ಲಿ ಸಾಕಷ್ಟು ಸರ್ಚ್ ನಡೆಸುತ್ತಾಳೆ. 


ಗಂಡನನ್ನು ಮೋಹಿಸುವುದು ಹೇಗೆ?
ವಿವಾಹದ ನಂತರ ಪ್ರತಿಯೊಬ್ಬ ಪತ್ನಿ ತನ್ನ ಪತಿ ತನ್ನತ್ತ ಆಕರ್ಶಿತನಾಗಬೇಕೆಂದು ಬಯಸುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ನವ ವಧುಗಳು ಪತಿಯನ್ನು ಆಕರ್ಷಿಸುವುದು ಹೇಗೆ? ಎಂಬುದರ ಕುರಿತು ಗೂಗಲ್‌ನಲ್ಲಿ ಸಾಕಷ್ಟು ಸರ್ಚ್ ಕೈಗೊಳ್ಳುತ್ತಾರೆ.


ಇದನ್ನೂ ಓದಿ-ಪ್ರತಿ ದಿನ 1 ಮಿಲಿಯನ್ ಸ್ಪ್ಯಾಮ್ ಅಕೌಂಟ್‌ಗಳು ಪತ್ತೆ, ಆಘಾತಕಾರಿ ವಿಚಾರ ಬಿಚ್ಚಿಟ್ಟ Twitter


ಕುಟುಂಬವನ್ನು ಹೇಗೆ ನೋಡಿಕೊಳ್ಳುವುದು?
ಮದುವೆಯ ನಂತರ  ನವವಧು ಪತಿಯ ಮನೆ ಸೇರಿಕೊಂಡಾಗ, ಇಡೀ ಮನೆಯ ಜವಾಬ್ದಾರಿ ಅವಳ ಹೆಗಲ ಮೇಲೆ ಬೀಳುತ್ತದೆ. ಹೀಗಿರುವಾಗ ಇಡೀ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಲು ಅವಳಿಗೆ ಕಷ್ಟಸಾಧ್ಯ ಎನಿಸಲಾರಂಭಿಸುತ್ತದೆ. ಸಂಸಾರದ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವುದು? ಎಂಬುದನ್ನು ಕೂಡ ಪತ್ನಿಯರು ಗೂಗಲ್ ನಿಂದ ತಿಳಿದುಕೊಳ್ಳಲು ಬಯಸುತ್ತಾರೆ.


ಇದನ್ನೂ ಓದಿ-ಈ ಪೋರ್ಟಬಲ್ ಟೇಬಲ್ ಫ್ಯಾನ್ ಅನ್ನು ಕರೆಂಟ್ ಇಲ್ಲದಿದ್ದರೂ 15 ಗಂಟೆ ಓಡಿಸಬಹುದು


ಅತ್ತೆ ಸೇರಿದಂತೆ ಮನೆಯ ಇತರ ಸದಸ್ಯರನ್ನು ಮೆಚ್ಚಿಸುವುದು ಹೇಗೆ?
ಮದುವೆಯಾಗಿ ಪತಿಯ ಮನೆ ಸೇರುವ ನವವಿವಾಹಿತೆಗೆ ಪತಿಯ ಜೊತೆಗೆ ಆಕೆಯ ಆತ್ತೆ, ಮಾವ ಮತ್ತು ಮನೆಯ ಇತರ ಸದಸ್ಯರ ಜೊತೆಗೆ ನಿರಂತರ ಬಾಳಬೇಕಾಗುತ್ತದೆ. ಆದರೆ ಕೆಲವೆಡೆ ಈ ಸಂಬಂಧಗಳು ತುಂಬಾ ಸಿಹಿಯಾಗಿದ್ದಾರೆ ಮತ್ತು ಕೆಲವೆಡೆ ಕಹಿ ಅನುಭವ ನೀಡುತ್ತವೆ. ಹಾಗಾಗಿ ತನ್ನ ಪತಿಯ ಮನೆಯ ಇತರ ಸ್ಕಾಸ್ಯರನ್ನು ಹೇಗೆ ಮೆಚ್ಚಿಸಬೇಕು? ಎಂಬುದನ್ನು ತಿಳಿದುಕೊಳ್ಳಲು ಕೂಡ ನವವಿವಾಹಿತ ಯುವತಿ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಕೈಗೊಳ್ಳುತ್ತಾಳೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.