ನವದೆಹಲಿ: FASTag App New Feature - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಯಾಗ್ ಅಪ್ಲಿಕೇಶನ್‌ಗೆ ಹೊಸ ವೈಶಿಷ್ಟ್ಯ  ಸೇರಿಸಿದೆ. ಅದರ ಸಹಾಯದಿಂದ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಬ್ಯಾಲೆನ್ಸ್  ಸ್ಥಿತಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಜನವರಿ 1 ರಿಂದ ಪ್ರತಿ ವಾಹನಕ್ಕೂ ಫಾಸ್ಟಾಗ್ ಕಡ್ಡಾಯವಾಗಿರುವುದರಿಂದ, ಈ ಬದಲಾವಣೆಯ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎನ್‌ಎಚ್‌ಎಐ 'ಚೆಕ್ ಬ್ಯಾಲೆನ್ಸ್ ಸ್ಟೇಟಸ್' ವೈಶಿಷ್ಟ್ಯದೊಂದಿಗೆ ಫಾಸ್ಟ್ಯಾಗ್ ಅಪ್ಲಿಕೇಶನ್ ಅನ್ನು ನವೀಕರಿಸಿದೆ ಎಂದು ಎನ್‌ಎಚ್‌ಎಐ ಹೇಳಿಕೆಯಲ್ಲಿ ತಿಳಿಸಿದೆ. ಫಾಸ್ಟ್ಯಾಗ್‌ನಲ್ಲಿ ಎಷ್ಟು ಬ್ಯಾಲೆನ್ಸ್ ಉಳಿದಿದೆ ಎಂದು ತಿಳಿಯಲು, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ವಾಹನ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- FASTag ಇಲ್ಲವೇ? ಚಿಂತೆ ಬಿಡಿ, ದುಪ್ಪಟ್ಟು ಟೋಲ್ ನೀಡಬೇಕಾಗಿಲ್ಲ, ಜನವರಿಯಿಂದ ಈ ವಿಶೇಷ ಸೇವೆ ಆರಂಭ


ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಟೋಲ್ ಆಪರೇಟರ್‌ಗಳಿಗೆ ಮತ್ತು ಹೆದ್ದಾರಿಯಲ್ಲಿ ಹಾದುಹೋಗುವವರಿಗೆ ಈ ಹೊಸ ವೈಶಿಷ್ಟ್ಯವು ತುಂಬಾ ಸಹಕಾರಿಯಾಗಿದೆ. ಇಬ್ಬರು ಬಳಕೆದಾರರು ಹಿಂದಿನ ಸಮಯದ ಆಧಾರದ ಮೇಲೆ ಫಾಸ್ಟ್ಯಾಗ್‌ನ ಬ್ಯಾಲೆನ್ಸ್ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲಾಗುವುದು. ಫಾಸ್ಟ್ಯಾಗ್ ಮೂಲಕ ಟೋಲ್ ಪ್ಲಾಜಾದಲ್ಲಿ ಬಳಕೆದಾರರ ಶುಲ್ಕವನ್ನು ಪಾವತಿಸಲು ಮತ್ತು ಕಾಯುವ ಸಮಯವನ್ನು ಕಡಿಮೆ ಮಾಡಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಸಮಯ ಮತ್ತು ಇಂಧನವನ್ನು ಉಳಿಸುವುದಲ್ಲದೆ, ವಾಹನಗಳ ಮುಕ್ತ ಸಂಚಾರಕ್ಕೂ ಅನುವುಮಾಡಿಕೊಡಲಿದೆ.


ಇದನ್ನು ಓದಿ- ಜನವರಿಯಿಂದ FASTag ಕಡ್ಡಾಯ, ಅದನ್ನು ಎಲ್ಲಿ? ಹೇಗೆ ಪಡೆಯಬೇಕೆಂದು ತಿಳಿಯಿರಿ


ಟ್ಯಾಗ್ ಗಳ ರಿಫ್ರೆಶ್ ಟೈಮ್ ಲಿಮಿಟ್ ನಲ್ಲಿಯೂ ಇಳಿಕೆ
ಇದಲ್ಲದೆ, ಪ್ರಾಧಿಕಾರವು ಕಪ್ಪುಪಟ್ಟಿ ಮಾಡಿದ ಟ್ಯಾಗ್‌ಗಳ ರಿಫ್ರೆಶ್ ಸಮಯ ಮಿತಿಯನ್ನು ಕಡಿಮೆ ಮಾಡಿದೆ. ಈ ಮಿತಿಯನ್ನು ಪ್ರಸ್ತುತ 10 ನಿಮಿಷದಿಂದ 3 ನಿಮಿಷಕ್ಕೆ ಇಳಿಸಲಾಗಿದೆ. ಇದರ ಹಿಂದಿನ ಉದ್ದೇಶವೆಂದರೆ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ, ಸ್ಥಿತಿಯನ್ನು ವೇಗವಾಗಿ ನವೀಕರಣವಿರಬಹುದು ಮತ್ತು ಇತ್ತೀಚಿನ ಸ್ಥಿತಿಯನ್ನು ಅಪ್ಲಿಕೇಶನ್‌ನಲ್ಲಿ ನೋಡಬಹುದು.


ಇದನ್ನು ಓದಿ- ಹೈವೇ ಪ್ರಯಾಣ ಆಗಲಿದೆ ದುಬಾರಿ, ರಿಯಾಯಿತಿ ಪಡೆಯಲು ಇರುವುದು ಒಂದೇ ಮಾರ್ಗ!


ವಿವಿಧ ಕಲರ್ ಕೋಡ್ ಮೂಲಕ ಸ್ಟೇಟಸ್ ಕಾಣಿಸಿಕೊಳ್ಳಲಿದೆ
'ಮೈ ಫಾಸ್ಟ್ ಟ್ಯಾಗ್ ಆಪ್' ನಲ್ಲಿ ಫಾಸ್ಟ್ಯಾಗ್  (FASTag) ವಾಲೆಟ್ ಬ್ಯಾಲೆನ್ಸ್‌ನ ಸ್ಥಿತಿಯನ್ನು ವಿವಿಧ ಬಣ್ಣದ ಕೋಡ್ ಗಳಲ್ಲಿ ಕಾಣಿಸಲಿದೆ. ಸಾಕಷ್ಟು ಬ್ಯಾಲೆನ್ಸ್ ಹೊಂದಿರುವ ಸಕ್ರಿಯ ಟ್ಯಾಗ್‌ಗಳಿಗೆ ಗ್ರೀನ್ ಬಣ್ಣ ಕೋಡ್, ಕಡಿಮೆ ಬ್ಯಾಲೆನ್ಸ್ ಟ್ಯಾಗ್‌ಗಳಿಗೆ ಆರೆಂಜ್  ಕಲರ್ ಕೋಡ್ ಮತ್ತು ಕಪ್ಪುಪಟ್ಟಿ ಮಾಡಿದ ಟ್ಯಾಗ್‌ಗಳಿಗೆ ರೆಡ್ ಬಣ್ಣದ ಕೋಡ್ ಅನ್ನು ಬಳಸಲಾಗಿದೆ. ಆರೆಂಜ್ ಸ್ಥಿತಿಯ ಸಂದರ್ಭದಲ್ಲಿ, ವಾಹನ ಬಳಕೆದಾರರು ಮೊಬೈಲ್ ಅಪ್ಲಿಕೇಶನ್‌ನಿಂದ ಫಾಸ್ಟ್ಯಾಗ್ ಅನ್ನು ತ್ವರಿತವಾಗಿ ರೀಚಾರ್ಜ್ ಮಾಡಬಹುದು ಅಥವಾ ಟೋಲ್ ಪ್ಲಾಜಾ ಪಾಯಿಂಟ್ ಆಫ್ ಸೇಲ್ (POS) ನಲ್ಲಿ ತ್ವರಿತ ರೀಚಾರ್ಜ್ ಸೌಲಭ್ಯವನ್ನು ಪಡೆಯಬಹುದು. 26 ಬ್ಯಾಂಕುಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ 40,000 POSಗಳನ್ನು ಸ್ಥಾಪಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.