Lotus Temple : ಭಾರತವು ಧರ್ಮ ಮತ್ತು ನಂಬಿಕೆಯ ದೇಶವಾಗಿದೆ.ಇಲ್ಲಿ ಸಾವಿರಾರು ದೇವಾಲಯಗಳಿದ್ದು,ಬೇರೆ ಬೇರೆ ದೇವರನ್ನು ಪೂಜಿಸಲಾಗುತ್ತದೆ.ಪ್ರತಿಯೊಂದು ದೇವಾಲಯವೂ ತನ್ನದೇ ಆದ ವಿಶಿಷ್ಟ ಕಥೆ,ನಂಬಿಕೆಯನ್ನು ಹೊಂದಿದೆ.ಆದರೆ ದೇವರ ಮೂರ್ತಿಯೇ ಇಲ್ಲದ ದೇವಸ್ಥಾನವೊಂದಿದೆ.ಈ ದೇವಸ್ಥಾನದಲ್ಲಿ ಒಂದೇ ಒಂದು ದೇವರ ಮೂರ್ತಿ ಇಲ್ಲ.ಪೂಜೆ ಪುನಸ್ಕಾರ ಕೂಡಾ ದೂರದ ಮಾತು.ಆದರೂ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ನಿತ್ಯ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. 


COMMERCIAL BREAK
SCROLL TO CONTINUE READING

ವಿಶಿಷ್ಟ ದೇವಾಲಯ :
ಹೌದು,ಭಾರತದಲ್ಲಿ ಇಂತಹ ವಿಶಿಷ್ಟವಾದ ದೇವಾಲಯವಿದೆ.ಈ ದೇವಾಲಯ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.ನಾವು ಇಲ್ಲಿ ಹೇಳುತ್ತಿರುವ ದೇವಸ್ಥಾನ ಲೋಟಸ್ ಟೆಂಪಲ್.ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.ಈ ದೇವಾಲಯದ ವಿಶೇಷತೆ ಏನೆಂದರೆ ಇದು ಯಾವುದೇ ಒಂದು ಧರ್ಮಕ್ಕೆ ಸಂಬಂಧಪಟ್ಟಿಲ್ಲ, ಇಲ್ಲಿ ಎಲ್ಲಾ ಧರ್ಮದವರ ಪ್ರವೇಶಕ್ಕೂ ಮುಕ್ತ ಅವಕಾಶವಿದೆ. 


ಇದನ್ನೂ ಓದಿ : Private Jet ನಲ್ಲಿ ಪ್ರಯಾಣ ಬೆಳಸುವ ಆಸೆ ಇದೆಯಾ? ಅಗ್ಗದ ಬೆಲೆಯಲ್ಲಿ ಖಾಸಗಿ ಜೆಟ್ ಬುಕ್ ಮಾಡುವ ವಿಧಾನ ಇಲ್ಲಿದೆ !


ದೇವರ ಪ್ರತಿಮೆ ಇಲ್ಲ : 
ಈ ದೇವಾಲಯದ ದೊಡ್ಡ ವಿಶೇಷತೆಯೆಂದರೆ ಇಲ್ಲಿ ಯಾವುದೇ ರೀತಿಯ ವಿಗ್ರಹಗಳು ಅಥವಾ ಧಾರ್ಮಿಕ ಆಚರಣೆಗಳು ನಡೆಯುವುದಿಲ್ಲ.ಬದಲಾಗಿ,ವಿವಿಧ ಧರ್ಮಗಳ ಪವಿತ್ರ ಗ್ರಂಥಗಳನ್ನು ಇಲ್ಲಿ ಪಠಿಸಲಾಗುತ್ತದೆ.ಇದು ಎಲ್ಲಾ ಧರ್ಮದವರನ್ನೂ ಸಮಾನವಾಗಿ ನೋಡುವ ಸ್ಥಳವಾಗಿದೆ.


ಲೋಟಸ್ ಟೆಂಪಲ್ ವಾಸ್ತುಶಿಲ್ಪ :
ಲೋಟಸ್ ಟೆಂಪಲ್‌ನ ಅತ್ಯಂತ ವಿಶೇಷವಾದ ವಿಷಯವೆಂದರೆ ಅದರ ಅದ್ಭುತ ವಾಸ್ತುಶಿಲ್ಪ. ಇದು ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟಿದ್ದು,ಕಮಲದ ಹೂವಿನಂತೆ ಕಾಣುತ್ತದೆ. ದೇವಾಲಯದ ವಿನ್ಯಾಸದಲ್ಲಿ 27 ದಳಗಳಿವೆ.ಅವುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ.


2500 ಜನರಿಗೆ ಸ್ಥಳಾವಕಾಶ : 
ದೇವಾಲಯದ ಕೇಂದ್ರ ಗುಮ್ಮಟವು 40 ಮೀಟರ್ ಎತ್ತರ ಮತ್ತು ಒಂಬತ್ತು ಬಾಗಿಲುಗಳನ್ನು ಹೊಂದಿದೆ.ದೇವಾಲಯದ ಒಳಗೆ 2500 ಜನರು ಏಕಕಾಲದಲ್ಲಿ ಕುಳಿತುಕೊಳ್ಳಬಹುದಾದ ಬೃಹತ್ ಪ್ರಾರ್ಥನಾ ಮಂದಿರವಿದೆ.


ಇದನ್ನೂ ಓದಿ : ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಭಾರತ ಸರ್ಕಾರ! ಕೂಡಲೇ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ!


ನಿರ್ಮಿಸಿದ್ದು ಯಾರು ? : 
ದೆಹಲಿಯ ನೆಹರು ಪ್ಲೇಸ್‌ನಲ್ಲಿರುವ ಈ ದೇವಾಲಯವನ್ನು 1986ರಲ್ಲಿ ಸಾರ್ವಜನಿಕರಿಗಾಗಿ ತೆರೆಯಲಾಯಿತು.ಇದನ್ನು ಇರಾನಿನ ಪ್ರಸಿದ್ಧ ವಾಸ್ತುಶಿಲ್ಪಿ ಫರಿಬಾರ್ಜ್ ಸಾಹಬಾ ನಿರ್ಮಿಸಿದ್ದಾರೆ.ಈ ದೇವಾಲಯವು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.