Portable AC : ಬೇಸಿಗೆ ಕಾಲ ಬಂದಾಗಿದೆ. ಎಲ್ಲಾ ಮನೆ, ಕಚೇರಿಗಳಲ್ಲಿ  ಎಸಿ ಆನ್ ಆಗಿದೆ. ಆದರೆ ಪೋರ್ಟಬಲ್ ಎಸಿ ಬಗ್ಗೆ ನೀವೇನಾದರೂ ಯೋಚಿಸುತ್ತಿದ್ದರೆ ಮಾರುಕಟ್ಟೆಗೆ ಹೊಸ ಆಯ್ಕೆ ಬಂದಿದೆ. ಈ ಹೊಸ ಎಸಿಯನ್ನು ಒಂದೇ ಕಡೆ ಫಿಕ್ಷ ಮಾಡುವ ಅಗತ್ಯ ಇಲ್ಲ. ಗೋಡೆಗೆ ನೇತು ಹಾಕುವ ಅಗತ್ಯವೂ ಇಲ್ಲ. ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಇದನ್ನು ಇರಿಸಬಹುದು. ಕಡಿಮೆ ಬೆಲೆಗೆ ಸಿಗುವ ಬಳಕೆಗೂ ಸುಲಭವಾಗಿರುವ ಈ ಪೋರ್ಟಬಲ್ ಎಸಿ ಬಹಳ ಭಿನ್ನವಾಗಿದೆ. ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಪೋರ್ಟಬಲ್ ಎಸಿಗಳನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಅನೇಕ ಹೆಸರಾಂತ ಕಂಪನಿಗಳೂ ಸೇರಿವೆ.ಲಾಯ್ಡ್ ಮತ್ತು ಬ್ಲೂ ಸ್ಟಾರ್ ನಂತಹ ಕಂಪನಿಗಳೂ ಇದರಲ್ಲಿವೆ. 


COMMERCIAL BREAK
SCROLL TO CONTINUE READING

ಲಾಯ್ಡ್ 1 ಟನ್ 3 ಸ್ಟಾರ್ ಪೋರ್ಟಬಲ್ ಎಸಿ : 
Lloyd 1 Ton 3 Star Portable ACಯನ್ನು ಫ್ಲಿಪ್‌ಕಾರ್ಟ್‌ನಿಂದ  39,990 ರೂಪಾಯಿಗೆ ಖರೀದಿಸಬಹುದು.ಇದರಲ್ಲಿ ಅನೇಕ ಬ್ಯಾಂಕ್ ಆಫರ್ ಗಳು ಕೂಡಾ ಸಿಗುತ್ತವೆ. ಇಲ್ಲಿ ಫಾಸ್ಟ್ ಡೆಲಿವೆರಿ ಆಯ್ಕೆ ಕೂಡಾ ಇದೆ.ಈ AC ಜೊತೆಗೆ 1 ವರ್ಷದ ವಾರಂಟಿ ಕೂಡಾ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ  ಪಾವತಿಸುವುದಾದರೆ  ಇಫ್ದರ ಖರೀದಿ ಮೇಲೆ ರಿಯಾಯಿತಿ ಕೂಡಾ ಸಿಗುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಇದು ಶೇ. 15ರಷ್ಟು ಕಡಿಮೆ ವಿದ್ಯುತ್ ಬಳಸುತ್ತದೆ ಎನ್ನುವುದು    ಕಂಪನಿಯಾ ಮಾತು. 


ಇದನ್ನೂ ಓದಿ : ಬಿರು ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಇಂದೇ ತನ್ನಿ ಕೂಲರ್ ಫ್ಯಾನ್


ಕ್ರೋಮಾ 1.5 ಟನ್ ಪೋರ್ಟಬಲ್ ಎಸಿ : 
ಕ್ರೋಮಾ 1.5 ಟನ್ ಪೋರ್ಟಬಲ್ ಎಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.ಕ್ರೋಮಾ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕವೂ ಇದನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ 43,990 ರೂ.  ಇದರ ವಿನ್ಯಾಸ ಕೂಡಾ ಸಾಕಷ್ಟು ಅದ್ಭುತವಾಗಿದೆ.


ಬ್ಲೂ ಸ್ಟಾರ್ 1 ಟನ್ ಪೋರ್ಟಬಲ್ ಎಸಿ: 
ಬ್ಲೂ ಸ್ಟಾರ್ 1 ಟನ್ ಪೋರ್ಟಬಲ್ ಎಸಿ  ಉತ್ತಮ ಕೂಲಿಂಗ್ ನೀಡುತ್ತದೆ. ಅದರ ಬೆಲೆ 39,000 ರೂಪಾಯಿ. ಅದನ್ನು ಆನ್‌ಲೈನ್‌ನಲ್ಲಿ 33,990 ರೂಪಾಯಿಗೆ ಖರೀದಿಸಬಹುದು. ಇದರಿಂದ ವಿದ್ಯುತ್ ಉಳಿತಾಯವೂ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು ಎಲ್ಲಿಗೆ ಬೇಕಾದರೂ  ಸುಲಭವಾಗಿ ಸಾಗಿಸಬಹುದು.


ಇದನ್ನೂ ಓದಿ : ಯಮಹಾ Aerox S: ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಈ ಸ್ಕೂಟರ್ ಚಾಲನೆಗೆ ಕೀ ಅಗತ್ಯವೇ ಇಲ್ಲ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.