Buy 55-inch smart TV for FREE: ನೀವು ನಿಮ್ಮ ಮನೆಗೆ ದೊಡ್ಡ ಸ್ಮಾರ್ಟ್ ಟಿವಿ ತರುವ ಬಗ್ಗೆ ಯೋಚಿಸುತ್ತಿದ್ದರೆ 55 ಇಂಚಿನ ಸ್ಮಾರ್ಟ್ ತಿವಿಯನ್ನು ಉಚಿತವಾಗಿ ನಿಮ್ಮದಾಗಿಸುವ ಸುವರ್ಣಾವಕಾಶವಿದೆ. ಹಾರ್ಡ್‌ವೇರ್ ಸ್ಟಾರ್ಟ್ಅಪ್ ಕಂಪನಿ ಟೆಲ್ಲಿ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಒಂದು ರೂಪಾಯಿ ಖರ್ಚಿಲ್ಲದೆ ಉಚಿತವಾಗಿ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಟೆಲ್ಲಿ ಕಂಪನಿಯ ಸಹ ಸಂಸ್ಥಾಪಕ, llya Pozin ಅವರು 5 ಲಕ್ಷ ಜನರಿಗೆ ಉಚಿತ ಸ್ಮಾರ್ಟ್ ಟಿವಿ ನೀಡುವುದಾಗಿ ಘೋಷಿಸಿದ್ದಾರೆ. ತನ್ನ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಸಲುವಾಗಿ ಕಂಪನಿ ಈ ಭರ್ಜರಿ ಕೊಡುಗೆಯನ್ನು ಘೋಷಿಸಿದೆ. 


ಇದನ್ನೂ ಓದಿ- ಎಲೆಕ್ಟ್ರಿಕ್ ಮೀಟರ್‌ನೊಂದಿಗೆ ಈ ಸಾಧನ ಅಳವಡಿಸಿದರೆ ಎಸಿ-ಕೂಲರ್ ಬಳಸಿದರೂ ಕಡಿಮೆ ಬರುತ್ತೆ ವಿದ್ಯುತ್ ಬಿಲ್!


55 ಇಂಚಿನ ಟೆಲ್ಲಿ ಸ್ಮಾರ್ಟ್ ಟಿವಿ ವಿಶೇಷತೆಗಳು:
>> ಈ 55 ಇಂಚಿನ ಟೆಲ್ಲಿ ಸ್ಮಾರ್ಟ್ ಟಿವಿ ವಿಶಿಷ್ಟವಾದ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್ ಟಿವಿಯಾಗಿದೆ. ವಿಶಿಷ್ಟವಾದ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್ ಟಿವಿಯಾಗಿ ಗ್ರಾಹಕರು ಹೆಚ್ಚಿನ  ರೆಸಲ್ಯೂಶನ್ ಅನುಭವವನ್ನು ಪಡೆಯಬಹುದಾಗಿದೆ. 
>> ಹೆಚ್ಚುವರಿಯಾಗಿ, ಈ ಸ್ಮಾರ್ಟ್ ಟಿವಿ ಬಿಲ್ಡ್-ಇನ್ ಐದು ಡ್ರೈವರ್ ಸೌಂಡ್‌ಬಾರ್ ಅನ್ನು ಸಹ ಹೊಂದಿದೆ. ಇದು ಸ್ಪಷ್ಟವಾದ ಧ್ವನಿಯನ್ನು ಆನಂದಿಸಲು ಸಹಕಾರಿ ಆಗಿದೆ. 
>>  ಇದರ ಹೊರತಾಗಿ ಈ ಪರದೆಯಲ್ಲಿ 9 ಇಂಚಿನ ಎರಡನೇ ಪರದೆಯ ವೈಶಿಷ್ಟ್ಯವನ್ನು ಹೊಂದಿದೆ. 
>> ಈ ಎರಡನೇ ಪರದೆಯು ತಡೆರಹಿತ ಜಾಹೀರಾತು, ಸಂಗೀತ ಪ್ಲೇಬ್ಯಾಕ್, ಕ್ರೀಡಾ ಸ್ಕೋರ್‌ಗಳು ಮತ್ತು ಇತರ ವೈಶಿಷ್ಟ್ಯಗಳನ್ನು ಆನಂದಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. 
>> ಈ ರೀತಿಯಾಗಿ, ನಿಮ್ಮ ಮುಖ್ಯ ಪರದೆಯಲ್ಲಿ ನಿಮ್ಮ ಮೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರವನ್ನು ನೀವು ಆನಂದಿಸಬಹುದು, ಆದರೆ ನಿಮ್ಮ ಎರಡನೇ ಪರದೆಯು ನಿಮಗೆ ಪಂದ್ಯದ ಸ್ಕೋರ್ ಅನ್ನು ತೋರಿಸುತ್ತದೆ.


ಇದನ್ನೂ ಓದಿ- Google Facts: ನೀವೂ ಗೂಗಲ್ ಬಳಸುತ್ತೀರಾ? ಹಾಗಾದರೆ ಗೂಗಲ್ ಕುರಿತಾದ ಈ ಸಂಗತಿಗಳು ನಿಮಗೆ ಗೊತ್ತಿರಬೇಕಲ್ಲ!


55 ಇಂಚಿನ ಈ ಸ್ಮಾರ್ಟ್ ಟಿವಿಯಲ್ಲಿವೆ ಹಲವು ಅದ್ಭುತ ವೈಶಿಷ್ಟ್ಯಗಳು: 
* ಈ ಸ್ಮಾರ್ಟ್ ಟಿವಿಯಲ್ಲಿ ವೀಡಿಯೊ ಕರೆ ವೈಶಿಷ್ಟ್ಯವೂ ಲಭ್ಯವಿದೆ. 
* ಇದು ಬಿಲ್ಡ್-ಇನ್ ಕ್ಯಾಮೆರಾಗಳು, ಸೆನ್ಸರ್‌ಗಳು ಮತ್ತು ಮೈಕ್ರೊಫೋನ್‌ಗಳನ್ನು ಸಹ ಒಳಗೊಂಡಿದೆ.
* ಇದರ ಹೊರತಾಗಿ, ನೀವು ಈ ಟಿವಿಯಲ್ಲಿ ವೀಡಿಯೊ ಗೇಮ್ಸ್ ಸಹ ಆಡಬಹುದು.


80 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಟಿವಿಯನ್ನು ಫ್ರೀ ಆಗಿ ನೀಡಲಿರುವ ಟೆಲ್ಲಿ ಕಂಪನಿ: 
ಟೆಲ್ಲಿ ಕಂಪನಿ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಸುಮಾರು $ 1000 (80 ಸಾವಿರ ರೂಪಾಯಿಗಳು). ಆದಾಗ್ಯೂ, ನೀವು ಒಂದೇ ಒಂದು ರೂಪಾಯಿಯನ್ನೂ ಖರ್ಚು ಮಾಡದೆ ಈ ಸ್ಮಾರ್ಟ್ ಟಿವಿಯನ್ನು ನಿಮ್ಮದಾಗಿಸಬಹುದು. 
ಇದಕ್ಕಾಗಿ ನೀವು www.freetelly.com ನಿಂದ ಉಚಿತ ಸ್ಮಾರ್ಟ್ ಟಿವಿಗಾಗಿ ಬುಕ್ ಮಾಡಬಹುದಾಗಿದೆ. 


ಆದಾಗ್ಯೂ, ಇದೀಗ ಕಂಪನಿಯು ಈ ಕೊಡುಗೆಯನ್ನು ಯುಎಸ್‌ನಲ್ಲಿ ಮಾತ್ರ ತಂದಿದೆ. ಆದರೆ ಶೀಘ್ರದಲ್ಲೇ ಕಂಪನಿಯು ಅಂತಹ ಉಚಿತ ಸ್ಮಾರ್ಟ್ ಟಿವಿಯನ್ನು ಇತರ ದೇಶಗಳಲ್ಲಿಯೂ ಲಭ್ಯಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಟಿವಿ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿಗಌ ಲಭ್ಯವಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ