Wrong UPI Payment: ಮೊಬೈಲ್ ನಿಂದ ಹಣ ವರ್ಗಾವಣೆ ಮಾಡುವಾಗ ಕೆಲವೊಮ್ಮೆ ನೀವು ಕಳುಹಿಸಬೇಕಾಗಿರುವ ಖಾತೆಯ ಬದಲಿಗೆ ಬೇರೊಬ್ಬರ ಖಾತೆಗೆ ಹಣ ವರ್ಗಾವಣೆ ಆಗಿಬಿಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯವಹಾರಿಸುವಾಗ ಇದು ಸಾಮಾನ್ಯ ಸಂಗತಿಯಾಗಿದೆ. ಬೇರೆಯವರ ಖಾತೆಗೆ ಹೋದ ಇಂಥ ಹಣವನ್ನು ಸುಲಭದಲ್ಲಿ ವಾಪಸ್ ಪಡೆಯಲು ಹೇಗೆ ಎಂದು ತಿಳಿಯುವುದು ಅತ್ಯಗತ್ಯ. 


COMMERCIAL BREAK
SCROLL TO CONTINUE READING

ಕಳೆದ ಐದು ವರ್ಷದಲ್ಲಿ ಡಿಜಿಟಲ್ ವ್ಯವಹಾರ, ಮೊಬೈಲ್ ಬ್ಯಾಂಕಿಂಗ್ ಪ್ರಮಾಣ ಹೆಚ್ಚಾಗುತ್ತಿದೆ. ಇದೇ ವೇಳೆ ಸಣ್ಣಪುಟ್ಟ ತಪ್ಪುಗಳ ಕಾರಣಕ್ಕೆ ಜನ ಹಣ ಕಳೆದುಕೊಳ್ಳುವುದೂ ಹೆಚ್ಚಾಗಿದೆ. ಯಾರದೋ ಖಾತೆಗೆ ಹಾಕಬೇಕಾದ ಹಣವನ್ನು ಬೇರೆಯೊಬ್ಬರ ಖಾತೆಗೆ ಹಾಕಿದತೆ ಆ ಹಣವನ್ನು ಮತ್ತೆ ವಾಪಸ್ ಪಡೆಯಲು ಕೆಲವು ಪರಿಹಾರಗಳಿವೆ.


ಇದನ್ನೂ ಓದಿ- ರೇಷನ್ ಕಾರ್ಡ್ ಇಲ್ಲದೇ ಇದ್ದರೂ ರೇಷನ್ ಪಡೆಯಬಹುದು, ಹೇಗೆ ಗೊತ್ತಾ?


ಒಂದೊಮ್ಮೆ ಬೇರೆಯವರ ಖಾತೆಗೆ ಹೋದ ಹಣ ದೊಡ್ಡ ಪ್ರಮಾಣದ್ದಾದರೆ ಹಣ ವಾಪಸ್ ಬರುವವರೆಗೆ ಟೆನ್ಷನ್ ಆಗುತ್ತದೆ. ಅಲ್ಲದೆ ಆ ಹಣ ಬಿಟ್ಟು ಬೇರೆ ಹಣ ನಿಮ್ಮಲ್ಲಿ ಇಲ್ಲದಿದ್ದರೂ ತೊಂದರೆ ಆಗುತ್ತದೆ. ಭಯ-ಆತಂಕದಲ್ಲಿ ಏನು ಮಾಡಬೇಕು ಎನ್ನುವುದೇ ತಿಳಿಯದಂತಾಗುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಕೇವಲ ಈ ಒಂದು ಕೆಲಸ ಮಾಡಿದ್ರೆ ನಿಮ್ಮ ದುಡ್ಡು ಮರಳಿ ಖಾತೆ ಸೇರುತ್ತೆ. 


ಇದನ್ನೂ ಓದಿ- ವರ್ಷಕ್ಕೆ ಒಮ್ಮೆ ಬರುವ ತಿರುಪತಿ ತಿಮ್ಮಪ್ಪನ ವೈಕುಂಠ ದ್ವಾರ ದರ್ಶನಕ್ಕೆ ಈ ದಿನದಿಂದ ಆನ್‌ಲೈನ್ ಟಿಕೆ


ಆರ್‌ಬಿಐ ಮಾರ್ಗಸೂಚಿಗಳ ಅನುಸಾರ ಆನ್‌ಲೈನ್ ಪಾವತಿ ವೇಳೆ ಹಣ ಮತ್ತೊಂದು ಖಾತೆಗೆ ಹೋಗಿದ್ದಾರೆ ದೂರು ಕೊಟ್ಟ 48 ಗಂಟೆಗಳಲ್ಲಿ ಮರುಪಾವತಿ ಮಾಡಿಸುವುದು ಬ್ಯಾಂಕ್ ಜವಾಬ್ದಾರಿಯಾಗಿರುತ್ತದೆ.
ಇದಲ್ಲದೆ ಬ್ಯಾಂಕಿನ ಸೇವಾ ಗ್ರಾಹಕ ವಿಭಾಗಕ್ಕೆ ಇ-ಮೇಲ್ ಮೂಲಕ ದೂರು ನೀಡಬಹುದು. ಬ್ಯಾಂಕಿನಿಂದ ಪ್ರತಿಕ್ರಿಯೆ ಬಾರದಿದ್ದರೆ ಅಥವಾ ಬ್ಯಾಂಕ್ ಸಹಾಯ ಮಾಡಲು ನಿರಾಕರಿಸಿದರೆ bankingombudsman.rbi.org.in ನಲ್ಲಿ ದೂರು ನೀಡಿ.


ಮಿಸ್ ಆಗಿ ಬೇರೆ ಖಾತೆಗೆ ಹೋದ ದುಡ್ಡನ್ನು ಮರಳಿ ಪಡೆಯಲು ಏನೇನು ಮಾಡಬೇಕು?
* ನೆಟ್ ಬ್ಯಾಂಕಿಂಗ್ ಮೂಲಕ ತಪ್ಪು ಖಾತೆಗೆ ಹಣ ಹೋಗಿದ್ದರೆ ಎಲ್ಲಕ್ಕಿಂತ ಮೊದಲು 18001201740 ಟೋಲ್ ಫ್ರೀ ಸಂಖ್ಯೆಗೆ ದೂರು ಕೊಡಿ.
* ಯಾವ ಖಾತೆಯಿಂದ ಹಣ ಕಟ್ ಆಗಿರುತ್ತದೆಯೋ ಆ ಖಾತೆಯಲ್ಲಿ ನಮೂನೆಯನ್ನು ಭರ್ತಿ ಮಾಡಿ.
* ಬೇರೆ ಖಾತೆಗೆ ಹಣ ಹೋದಾಗ ಬಂದಿರುವ ಮೆಸೇಜ್ ಅನ್ನು ಡಿಲೀಟ್ ಮಾಡಬೇಡಿ. ಅದು ಬಹಳ ಮುಖ್ಯವಾದ ವಿಷಯ.
* ಆ ಮೆಸೇಜ್ ದೂರಿನ ಸಮಯದಲ್ಲಿ ಅಗತ್ಯವಿರುವ PPBL ಸಂಖ್ಯೆಯನ್ನು ಒಳಗೊಂಡಿರುತ್ತದೆ.
* bankingombudsman.rbi.org.in ಗೆ 2 ದಿನದ ಒಳಗೆ ದೂರು ನೀಡಿ.


 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.