ನವದೆಹಲಿ: Nobel Prize 2021 - 2021 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು 2021ನ್ನು (Nobel Prize in Physics 2021) ಘೋಷಿಸಲಾಗಿದೆ. ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸಿಯುಕುರೊ ಮನಾಬೆ (Syukuro Manabe), ಕ್ಲಾಸ್ ಹ್ಯಾಸೆಲ್ಮನ್ (Klaus Hasselmann) ಮತ್ತು ಜಾರ್ಜಿಯೊ ಪ್ಯಾರಿಸಿ (Giorgio Parisi) ಅವರಿಗೆ ನೀಡಲಾಗಿದೆ. ಸಂಕೀರ್ಣ ಭೌತಶಾಸ್ತ್ರ ವ್ಯವಸ್ಥೆಗಳ ತಿಳುವಳಿಕೆಗೆ ಅವರ ಅಭೂತಪೂರ್ವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಎಲ್ಲಾ ಮೂವರು ಶಾಸ್ತ್ರಜ್ಞರಿಗೆ ನೀಡಲಾಗಿದೆ ನೀಡಲಾಗಿದೆ.


Harvard Business Review - ಕೆಲಸ ಅಥವಾ ಸಂಸ್ಥೆಗೆ ನಿಷ್ಠರಾಗಿರುವುದು ಎಷ್ಟು ಮುಖ್ಯ? ಜಾಗತಿಕ ವರದಿ ಹೇಳಿದ್ದೇನು?


COMMERCIAL BREAK
SCROLL TO CONTINUE READING

Medicine Categoryಅಲ್ಲಿ ಇವರಿಗೆ ಸಿಕ್ಕಿದೆ ನೊಬೆಲ್ 
ಸೋಮವಾರ, 2021 ರ ಶರೀರಶಾಸ್ತ್ರ ಮತ್ತು ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು (Nobel Price 2021 Medicine) ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ತಾಪಮಾನ ಮತ್ತು ಸ್ಪರ್ಶದ ಗ್ರಾಹಕಗಳನ್ನು ಪತ್ತೆ ಮಾಡಿದ್ದಕ್ಕಾಗಿ ಈ ಇಬ್ಬರು ವಿಜ್ಞಾನಿಗಳಿಗೆ ಈ ಗೌರವ ನೀಡಲಾಗಿದೆ. ಈ ಇಬ್ಬರು ವಿಜ್ಞಾನಿಗಳು ಶಾಖ, ಶೀತ, ಸ್ಪರ್ಶ ಮತ್ತು ಒತ್ತಡದ ಸಂಕೇತಗಳು ನಮ್ಮ ನರಮಂಡಲಕ್ಕೆ ಹೇಗೆ ಹರಡುತ್ತವೆ ಎಂಬುದನ್ನು ವಿವರವಾಗಿ ಅಧ್ಯಯನ ನಡೆಸಿ ತಮ್ಮ ಪ್ರಭೇಧವನ್ನು ಮಂಡಿಸಿದ್ದರು.


ಇದನ್ನೂ ಓದಿ-Covaxin : ಕೋವಾಕ್ಸಿನ್‌ ತುರ್ತು ಬಳಕೆಗೆ WHO ಅಕ್ಟೋಬರ್‌ನಲ್ಲಿ ಅನುಮೋದನೆ


ಏನಿದು ನೋಬೆಲ್ ಪುರಸ್ಕಾರ
1901 ರಲ್ಲಿ ಸ್ವೀಡಿಷ್ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ನೊಬೆಲ್ ಫೌಂಡೇಶನ್ ಸ್ಥಾಪಿಸಿದ ಶಾಂತಿ, ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಇದು ವಿಶ್ವದ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯ ರೂಪದಲ್ಲಿ 10 ಮಿಲಿಯನ್ ಡಾಲರ್ ಮೊತ್ತವನ್ನು ಪ್ರಶಸ್ತಿ ಪತ್ರದ ಜೊತೆಗೆ ನೀಡಲಾಗುತ್ತದೆ. ಆಲ್ಫ್ರೆಡ್ ನೊಬೆಲ್ ಡೈನಾಮೈಟ್ ಆವಿಷ್ಕಾರ ಸೇರಿದಂತೆ ಒಟ್ಟು 355 ಆವಿಷ್ಕಾರಗಳನ್ನು ಮಾಡಿದ್ದಾರೆ. ಡಿಸೆಂಬರ್ 1896 ರಲ್ಲಿ ಅವರ ಮರಣದ ಮೊದಲು, ಆಲ್ಫ್ರೆಡ್ ನೊಬೆಲ್ ತನ್ನ ಸಂಪತ್ತಿನ ಬಹುಭಾಗವನ್ನು ಟ್ರಸ್ಟ್‌ನ ಹೆಸರಿನಲ್ಲಿ ಕಾಯ್ದಿರಿಸಿದ್ದರು. ಮನುಕುಲದ ಹಿತಕ್ಕಾಗಿ ಕೆಲಸ ಮಾಡುವ ಜನರಿಗೆ ಈ ಹಣದ ಬಡ್ಡಿಯನ್ನು ಪ್ರಶಸ್ತಿಯ ನೀಡಬೇಕೆಂಬುದು ಅವರ ಆಶಯವಾಗಿತ್ತು. ಈ ಪ್ರಶಸ್ತಿಯನ್ನು ನೊಬೆಲ್ ಪ್ರತಿಷ್ಠಾನವು ಪ್ರತಿ ವರ್ಷ ಶಾಂತಿ, ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ವೀಡಿಷ್ ಬ್ಯಾಂಕಿನಲ್ಲಿ ಠೇವಣಿ ಇರಿಸಿದೆ.


ಇದನ್ನೂ ಓದಿ-R.1 variant of COVID-19: ಜಗತ್ತಿಗೆ ಭೀತಿ ಹುಟ್ಟಿಸಿದ ಹೊಸ ಕೊರೊನಾ ತಳಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.