ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ನಾಯ್ಸ್‌ನ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್
Affordable Smartwatch: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಜೊತೆಗೆ ಸ್ಮಾರ್ಟ್ ಟಿವಿ, ಸ್ಮಾರ್ಟ್‌ವಾಚ್ ಕ್ರೇಜ್ ಹೆಚ್ಚಾಗುತ್ತಿದೆ. ನೀವು ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಜೊತೆಗೆ ಲಭ್ಯವಿರುವ ಸ್ಮಾರ್ಟ್‌ವಾಚ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ.
Affordable Smartwatch: ನೀವು ಕೈಗೆಟುಕುವ ಬೆಲೆಯ ಸ್ಮಾರ್ಟ್ ವಾಚ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಂಪನಿಯಾದ ನಾಯ್ಸ್ ನಿಮಗಾಗಿ ಹೊಸ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಕಂಪನಿಯು, ನಾಯ್ಸ್ ಕಲರ್‌ಫಿಟ್ ಥ್ರೈವ್ (Noise ColorFit Thrive) ಎಂಬ ಹೊಸ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ ಕೇವಲ 1,299 ರೂ. ಗಳು ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್ ವೈಶಿಷ್ಟ್ಯಗಳೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ನಾಯ್ಸ್‌ನ ಈ ಹೊಸ ಸ್ಮಾರ್ಟ್‌ವಾಚ್ ನಾಯ್ಸ್ ಕಲರ್‌ಫಿಟ್ ಥ್ರೈವ್ (Noise ColorFit Thrive) 1.85 ಇಂಚಿನ ಚದರ ಆಕಾರದ ಡಿಸ್‌ಪ್ಲೇ ಮತ್ತು 550 ಬ್ರೈಟ್‌ನೆಸ್‌ನೊಂದಿಗೆ ಲಭ್ಯವಾಗಲಿದೆ. ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್ ಸ್ಟೇನ್-ಫ್ರೀ ವಾಚ್ ಎಂದು ನಾಯ್ಸ್ ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ವಾಚ್ ನಲ್ಲಿ ಬ್ಲೂಟೂತ್ ಕಾಲಿಂಗ್ ಜೊತೆಗೆ ಎಐ ಸೌಂಡ್ ಸಹಾಯಕವೂ ಲಭ್ಯವಿದ್ದು, ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಹಾಗೂ ಐಫೋನ್ ನಲ್ಲಿ ಎರಡರಲ್ಲೂ ಸುಲಭವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ- WhatsApp ಬಳಕೆದಾರರೇ ಎಚ್ಚರ! ಎಚ್ಚರ! ಈ ನಂಬರ್‌ನಿಂದ ಬರುವ ಕಾಲ್ ಅನ್ನು ಮಿಸ್ ಆಗಿಯೂ ಪಿಕ್ ಮಾಡಲೇಬೇಡಿ!
ನಾಯ್ಸ್ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು:
* ಈ ವಾಚ್‌ನಲ್ಲಿ ನಾಯ್ಸ್ ಬಜ್ ಎಂಬ ವೈಶಿಷ್ಟ್ಯವನ್ನು ನೀಡಲಾಗಿದೆ.
* ಈ ಸ್ಮಾರ್ಟ್‌ವಾಚ್‌ನಿಂದ ಕರೆ ಇತಿಹಾಸವನ್ನು ನ್ಯಾವಿಗೇಟ್ ಮಾಡಬಹುದು.
* ಈ ಸ್ಮಾರ್ಟ್‌ವಾಚ್‌ನಲ್ಲಿ ಒಮ್ಮೆಗೆ 8 ಸಂಪರ್ಕ ಸಂಖ್ಯೆಗಳನ್ನು ಸೇವ್ ಮಾಡಬಹುದು.
* ಈ ಸ್ಮಾರ್ಟ್‌ವಾಚ್ ಹೆಲ್ತ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇವುಗಳಲ್ಲಿ
ಹೃದಯ ಬಡಿತ, SpO2, ಸ್ಲೀಪ್ ಪ್ಯಾಟರ್ನ್, ಒತ್ತಡದ ಮಟ್ಟ, ಉಸಿರಾಟದ ವ್ಯಾಯಾಮ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್‌ನಂತಹ ವಿಶೇಷಣಗಳಿವೆ.
* ನಾಯ್ಸ್ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್ ಹವಾಮಾನ ಸ್ಥಿತಿಯ ಬಗ್ಗೆಯೂ ಮಾಹಿತಿಯನ್ನು ನೀಡಬಲ್ಲದು.
* ಮಾತ್ರವಲ್ಲ, ಇದರಲ್ಲಿ ರಿಮೈಂಡರ್ ಗಳನ್ನು ಕೂಡ ಹೊಂದಿಸಬಹುದು ಎಂದು ಕಂಪನಿ ತಿಳಿಸಿದೆ.
* ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಪಡೆದುಕೊಂಡಿದೆ.
* ಇದು 100 ಸ್ಪೋರ್ಟ್ಸ್ ಮೋಡ್‌ಗಳು ಮತ್ತು 100 ವಾಚ್ ಫೇಸ್‌ಗಳೊಂದಿಗೆ ಬರುತ್ತದೆ.
* ಈ ಸ್ಮಾರ್ಟ್‌ವಾಚ್‌ನಲ್ಲಿ ಕೆಲವು ಇನ್ಬಿಲ್ಟ್ ಗೇಮ್ ಕೂಡ ಇವೆ.
ನಾಯ್ಸ್ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್‌ನ ಬ್ಯಾಟರಿ:
ನಾಯ್ಸ್ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್‌ನ ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 7 ದಿನಗಳವರೆಗೆ ಮತ್ತೆ ಚಾರ್ಜ್ ಮಾಡಬೇಕಿಲ್ಲ.
ಇದನ್ನೂ ಓದಿ- Phone Charging Tips: ರಾತ್ರಿಯಿಡೀ ಫೋನ್ ಚಾರ್ಜಿಂಗ್ ಮಾಡುವುದು ಎಷ್ಟು ಸರಿ?
ಆರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ ಸ್ಮಾರ್ಟ್‌ವಾಚ್:
ಇನ್ನೂ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್‌ವಾಚ್ ಆರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ವಾಚ್ ಅನ್ನು ನೀವು ಡೀಪ್ ವೈನ್, ಕಾಮ್ ಬ್ಲೂ, ಕೋರಲ್ ಪಿಂಕ್, ಜೆಟ್ ಬ್ಲಾಕ್, ಸಿಲ್ವರ್ ಗ್ರೇ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.
ನಾಯ್ಸ್ ಕಲರ್‌ಫಿಟ್ ಥ್ರೈವ್ ಅನ್ನು ಎಲ್ಲಿ ಖರೀದಿಸಬಹುದು:
ನಾಯ್ಸ್ ಕಲರ್‌ಫಿಟ್ ಥ್ರೈವ್ (Noise ColorFit Thrive) ಸ್ಮಾರ್ಟ್‌ವಾಚ್ ಅನ್ನು ಫ್ಲಿಪ್‌ಕಾರ್ಟ್ ಮತ್ತು gonoise.com ನಿಂದ 1,299ರೂ.ಗಳಿಗೆ ಖರೀದಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.