ಸ್ಟ್ರಾಂಗ್ ಬ್ಯಾಟರಿಯೊಂದಿಗೆ 5G ಸ್ಮಾರ್ಟ್‌ಫೋನ್ ಪರಿಚಯಿಸಲಿರುವ Nokia
Nokia G42: ಇತ್ತೀಚಿನ ದಿನಗಳಲ್ಲಿ 5ಜಿ ಸ್ಮಾರ್ಟ್‌ಫೋನ್ ಗಳತ್ತ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಪ್ರಸಿದ್ದ ಫೋನ್ ತಯಾರಕ ನೋಕಿಯಾ ಕೂಡ ಶೀಘ್ರದಲ್ಲೇ ಹೊಸ 5ಜಿ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಯಾವುದೀ ಫೋನ್, ಇದರ ವಿಶೇಷತೆಗಳೇನು ಎಂದು ತಿಳಿಯೋಣ...
Nokia G42: ಜಗತ್ತಿನ ಪ್ರಸಿದ್ದ ಫೋನ್ ತಯಾರಕ ಕಂಪನಿ ನೋಕಿಯಾ ಶೀಘ್ರದಲ್ಲೇ ಹೊಸ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ನೋಕಿಯಾ ತನ್ನ ನೋಕಿಯಾ ಜಿ42 5ಜಿ ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್ 11ರಂದು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಉತ್ತಮ ವಿನ್ಯಾಸದೊಂದಿಗೆ, ಸ್ಟ್ರಾಂಗ್ ಬ್ಯಾಟರಿಯೊಂದಿಗೆ ಲಭ್ಯವಾಗಲಿರುವ ಈ ಸ್ಮಾರ್ಟ್‌ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತಿಳಿಯೋಣ...
ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿರುವ Nokia G42 5G ಕಂಪನಿಯ ಎರಡನೇ 5G-ಸಕ್ರಿಯಗೊಳಿಸಿದ ಫೋನ್ ಆಗಿದೆ. ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಫೋನ್‌ನ ಮೈಕ್ರೋಸೈಟ್ ಸದ್ಯ ಅಮೆಜಾನ್‌ನಲ್ಲಿ ಲೈವ್ ಆಗಿದೆ.
ಇದನ್ನೂ ಓದಿ- ಎಫ್‌ಬಿ ಪಾಸ್‌ವರ್ಡ್‌ನಿಂದ ಹಿಡಿದು ಬ್ಯಾಂಕ್ ಖಾತೆ ವಿವರಗಳವರೆಗೆ ಎಲ್ಲವನ್ನೂ ರೆಕಾರ್ಡ್ ಮಾಡುತ್ತೆ ನಿಮ್ಮ ಮನೆಯಲ್ಲಿರುವ ಈ ಸಾಧನ
Nokia G42 5G ಸ್ಮಾರ್ಟ್‌ಫೋನ್ ವಿಶೇಷಣಗಳು:
* Nokia G42 5G 6.56-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು ವಾಟರ್‌ಡ್ರಾಪ್ ನಾಚ್ ಅನ್ನು ಹೊಂದಿದೆ.
* ಈ ಸ್ಮಾರ್ಟ್‌ಫೋನ್ OZO ಪ್ಲೇಬ್ಯಾಕ್-ಚಾಲಿತ ಧ್ವನಿವರ್ಧಕವನ್ನು ಒಳಗೊಂಡಿದೆ.
* ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಜೊತೆಗೆ 50ಎಮ್‌ಪಿ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಅಷ್ಟೇ ಅಲ್ಲ, ಇದರಲ್ಲಿ ಮ್ಯಾಕ್ರೋ ಕ್ಯಾಮೆರಾ ಮತ್ತು ಆಳ ಸಂವೇದಕವನ್ನೂ ಒಳಗೊಂಡಿದೆ.
* ನೋಕಿಯಾ ಜಿ42 5ಜಿ ಸ್ಮಾರ್ಟ್‌ಫೋನ್ 11GB RAM ವರೆಗೆ (ವರ್ಚುವಲ್ RAM ಸೇರಿದಂತೆ) ಸ್ನಾಪ್‌ಡ್ರಾಗನ್ 480 ಪ್ಲಸ್ ಚಿಪ್‌ಸೆಟ್ ಅನ್ನು ಕೂಡ ಹೊಂದಿದೆ.
* ಇದು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.
ಇದನ್ನೂ ಓದಿ- ಥ್ರೆಡ್ಸ್‌ನಲ್ಲಿ ಹೊಸ ಫೀಚರ್ ಜಾರಿಗೆ ಮೆಟಾ ಸಿದ್ಧತೆ
ನೇರಳೆ ಮತ್ತು ಬೂದು ಬಣ್ಣದ ರೂಪಾಂತರಗಳಲ್ಲಿ ಲಭ್ಯವಿರುವ Nokia G42 5G ಎರಡು ವರ್ಷಗಳ Android OS ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
Nokia G42 5G ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬ ಬಗ್ಗೆ ಕಂಪನಿಯಿಂದ ಇನ್ನೂ ಕೂಡ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, Nokia G42 5G ಸ್ಮಾರ್ಟ್‌ಫೋನ್ 128 GB ಆಂತರಿಕ ಸಂಗ್ರಹಣೆ ಮತ್ತು 5,000mAh ಸ್ಟ್ರಾಂಗ್ ಬ್ಯಾಟರಿಯೊಂದಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.