Nokia 5 Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ನೋಕಿಯಾದ 5G ಸ್ಮಾರ್ಟ್‌ಫೋನ್!
Nokia 5G ಸ್ಮಾರ್ಟ್‌ಫೋನ್: Nokia ಶೀಘ್ರದಲ್ಲೇ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5G ಸ್ಮಾರ್ಟ್‌ಫೋನ್ ಅನ್ನು ತರುತ್ತಿದೆ. ಇದರ ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ.
ನವದೆಹಲಿ: Nokia ಮತ್ತೆ ಭರ್ಜರಿಯಾಗಿ ಮಾರುಕಟ್ಟೆ ಪ್ರವೇಶಿಸಲು ತಯಾರಿ ನಡೆಸುತ್ತಿದೆ. ಒಂದೆಡೆ ಅನೇಕ ದೊಡ್ಡ ಕಂಪನಿಗಳು ತಮ್ಮ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದ್ದರೆ, ಮತ್ತೊಂದೆಡೆ Nokia ತನ್ನ 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ನೋಕಿಯಾ ಶೀಘ್ರವೇ ತಮ್ಮ G ಸರಣಿಯ ಹೊಸ ಫೋನ್ ತರಲಿದೆ. ಇದನ್ನು Nokia G400 5G ಎಂದು ಹೆಸರಿಸಲಾಗಿದೆ. ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಇದರ ಬೆಲೆಯೂ ಸ್ವಲ್ಪ ಹೆಚ್ಚಾಗಿರುತ್ತದೆ. Nokia G400 5G ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ.
ಭಾರತದಲ್ಲಿ Nokia G400 5G ಬೆಲೆ
Nokia G400 5G ಭಾರತದಲ್ಲಿ 2023ರ ಜನವರಿ 18ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಅಂದಾಜು ಬೆಲೆ 19,990 ರೂ. ಇರಲಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಹಲವಾರು ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಬರುತ್ತಿದೆ. ಇದು ಫಿಂಗರ್‌ಪ್ರಿಂಟ್ ಮತ್ತು ಫೇಸ್ ಅನ್‌ಲಾಕ್‌ನೊಂದಿಗೆ ಬೂದು ಬಣ್ಣದಲ್ಲಿ ಗ್ರಾಹಕರಿಗೆ ಸಿಗಲಿದೆ.
ಇದನ್ನೂ ಓದಿ: Bumper Offer: ಕೇವಲ 550 ರೂ.ಗೆ ಖದೀದಿಸಿ Redmi 9i Sport ಸ್ಮಾರ್ಟ್‌ಫೋನ್
Nokia G400 5G ವಿಶೇಷತೆಗಳು
Nokiaದ ಹೊಸ ಸ್ಮಾರ್ಟ್‌ಫೋನ್ 1089*1920 ಪಿಕ್ಸೆಲ್‌ಗಳೊಂದಿಗೆ 6.5-ಇಂಚಿನ ಪೂರ್ಣ HD+ ರೆಸಲ್ಯೂಶನ್ ಹೊಂದಿರಲಿದೆ. ಫೋನ್‌ನ Dimensions 166.3x76.6x8.8mm ಆಗಿದೆ. Nokia G400 5G ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 ಪ್ಲಸ್ ಅನ್ನು ಹೊಂದಿದೆ. ಇದು 4GB RAM ಮತ್ತು 64GB ಆಂತರಿಕ ಮೆಮೊರಿಯೊಂದಿಗೆ ಬರಲಿದ್ದು, 1TBವರೆಗೆ ವಿಸ್ತರಿಸಬಹುದಾಗಿದೆ.
Nokia G400 5G ಕ್ಯಾಮೆರಾ
ಈ ಸಾಧನವು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ - f/1.8 Apertureನೊಂದಿಗೆ 48MP ಪ್ರಾಥಮಿಕ ಕ್ಯಾಮೆರಾ, f/2.2 Apertureನೊಂದಿಗೆ 5MP ಸೆಕೆಂಡರಿ ಕ್ಯಾಮೆರಾ, f/2.4 Aperture ಹೊಂದಿರುವ 2MP 3ನೇ ಕ್ಯಾಮೆರಾ ಮತ್ತು 16MP ಸಿಂಗಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.
Nokia G400 5G ಬ್ಯಾಟರಿ
ಇದರ 5000mAh Li-ಪಾಲಿಮರ್ ಬ್ಯಾಟರಿಯಿಂದ ಬಳಕೆದಾರರು 1 ದಿನಗಳ ಕಾಲ ಬಳಕೆ ಮಾಡಬಹುದು. ಅಲ್ಲದೆ ಇದು USB ಟೈಪ್ C ಜೊತೆಗೆ 20W ವೇಗದ ಚಾರ್ಜಿಂಗ್ ಹೊಂದಿದೆ. ಈ ಸಾಧನವು ನ್ಯಾನೊ ಗಾತ್ರದ ಡ್ಯುಯಲ್ ಸಿಮ್ ಸ್ಲಾಟ್‌ಗಳನ್ನು ಹೊಂದಿದ್ದು, ಸಿಮ್ 1 5G ನೆಟ್‌ವರ್ಕ್ ಅನ್ನು ಮಾತ್ರ ಬೆಂಬಲಿಸುತ್ತದೆ.
Nokia G400 5G ವೈಶಿಷ್ಟ್ಯಗಳು
ಈ ಫೋನ್ ಸಂಪರ್ಕಕ್ಕಾಗಿ 5G, 4G, 3G, 2G, VoLTE, ವೈಫೈ ಮತ್ತು ಬ್ಲೂಟೂತ್ v5.1ಅನ್ನು ಒಳಗೊಂಡಿದೆ. ಇದರ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಫೋನ್‌ಗೆ ಸೊಗಸಾದ ನೋಟವನ್ನು ನೀಡುತ್ತದೆ. Light, Proximity, Accelerometer, Barometer, Gyro, Compass ಹೀಗೆ ಇತರ ಸೆನ್ಸಾರ್‍ಗಳು ಈ ಫೋನಿನಲ್ಲಿ ಇರುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.