ನವದೆಹಲಿ : COVID 19 ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಬಹಳ ಮುಖ್ಯ. ಲಸಿಕೆ ಪಡೆಯಬೇಕಾದರೆ  ಇದಕ್ಕಾಗಿ  ಮೊದಲು ಸ್ಲಾಟ್ ಅನ್ನು ಕಾಯ್ದಿರಿಸಬೇಕು. ಆದರೆ ಲಸಿಕೆ ಸ್ಲಾಟ್ ಅನ್ನು ಹುಡುಕುವುದು (how to search vaccination slot) ಮತ್ತು ಕಾಯ್ದಿರಿಸುವುದು ಕೆಲವರಿಗೆ ಕಷ್ಟ ಎಂದೆನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ತನ್ನ ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಸೇವೆಯನ್ನು ಪರಿಚಯಿಸಿದೆ. ಈಗ Vi ಆ್ಯಪ್ ಬಳಸಿ ತಮ್ಮ ಹತ್ತಿರದ COVID 19 ಕೇಂದ್ರವನ್ನು ಸರ್ಚ್ ಮಾಡಿ, ಲಸಿಕೆಗಾಗಿ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದು. ಇದಕ್ಕಾಗಿ, ವೊಡಾಫೋನ್ ಐಡಿಯಾ CoWIN app ಅಪ್ಲಿಕೇಶನ್ ಅನ್ನು ಇನ್ ಟಿ ಗ್ರೇಟ್ ಮಾಡಿದೆ. ಇಲ್ಲಿ ಸುಲಭವಾಗಿ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು. 


COMMERCIAL BREAK
SCROLL TO CONTINUE READING

ನೀವು ವೊಡಾಫೋನ್ ಐಡಿಯಾ ಬಳಕೆದಾರರಾಗಿದ್ದು, ಕೋವಿಡ್ ಲಸಿಕೆಗಾಗಿ (COVID Vaccination) ಸ್ಲಾಟ್ ಕಾಯ್ದಿರಿಸಬೇಕಾದರೆ,  ಇದಕ್ಕಾಗಿ ನೀವು ವಿ ಆಪ್ (Vi app) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. 


ಇದನ್ನೂ ಓದಿ : Whatsapp Story: ನಿಮ್ಮ ವಾಟ್ಸಾಪ್ ಸ್ಟೋರಿಯನ್ನು ಯಾರಾದರೂ ಡೌನ್‌ಲೋಡ್ ಮಾಡಬಹುದು!


COVID 19 ಲಸಿಕೆ ಸ್ಲಾಟ್ ಅನ್ನು ಹೇಗೆ ಬುಕ್ ಮಾಡುವುದು ಹೇಗೆ ? 


1. COVID 19 ಲಸಿಕೆಗಾಗಿ ಸ್ಲಾಟ್ ಕಾಯ್ದಿರಿಸಲು, ಮೊದಲು  ನಿಮ್ಮ ಫೋನ್‌ನಲ್ಲಿ Vi ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
2. Vi ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ, ಅದನ್ನುಓಪನ್ ಮಾಡಿ.
3.  ನಂತರ ಅಪ್ಲಿಕೇಶನ್‌ನ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿದರೆ  Get Yourself Vaccinated Today ಆಯ್ಕೆ ಕಾಣಿಸುತ್ತದೆ. 
4. Get Yourself Vaccinated Today ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಕೆಲವು ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.  ಇದರಲ್ಲಿ ಜಿಲ್ಲೆ ಅಥವಾ ರಾಜ್ಯ , ಪಿನ್ ಕೋಡ್ ಮುಂತಾದ ವಿವರಗಳನ್ನು ನಮೂದಿಸಬೇಕಾಗುತ್ತದೆ.
5. ಪಿನ್ ಕೋಡ್ ಅನ್ನು ನಮೂದಿಸಿದ ನಂತರ, ನೀವು ಹತ್ತಿರದ ಕೇಂದ್ರ ಮತ್ತು ಅಲ್ಲಿರುವ ಸ್ಲಾಟ್ ಅನ್ನು ಹುಡುಕಬಹುದು.
6.ಸ್ಲಾಟ್ ಕಾಯ್ದಿರಿಸುವ ಮೊದಲು ಕೆಲವು ಫಿಲ್ಟರ್‌ಗಳನ್ನು ಬಳಸಬೇಕಾಗುತ್ತದೆ.  ವಯಸ್ಸು 18-44, ವಯಸ್ಸು 45+, ಡೋಸ್ 1 / ಡೋಸ್ 2, ಕೋವಾಕ್ಸಿನ್ / ಕೋವಿಶೀಲ್ಡ್ / ಸ್ಪುಟ್ನಿಕ್ ವಿ, free /paid ಇತ್ಯಾದಿಗಳನ್ನು ಒಳಗೊಂಡಿದೆ. ಅದರಲ್ಲಿ ನಿಮ್ಮ ಅಗತ್ಯಕ್ಕನುಗುಣವಾಗಿ  ಫಿಲ್ಟರ್‌ಗಳನ್ನು ಆಯ್ಕೆ ಮಾಡಬಹುದು.
7.ಫಿಲ್ಟರ್‌ಗಳನ್ನು ಆಯ್ಕೆ ಮಾಡಿದ ನಂತರ, ಕೋವಿಡ್ 19 ಲಸಿಕೆಗಾಗಿ ಲಭ್ಯವಿರುವ ಸ್ಲಾಟ್‌ಗಳನ್ನು ನಿಮಗೆ ತೋರಿಸಲಾಗುತ್ತದೆ. ಈ ದಿನಾಂಕಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬಹುದು.
8.ದಿನಾಂಕವನ್ನು ಆಯ್ಕೆ ಮಾಡಿದ ನಂತರ  ಕೋವಿನ್ ಅಪ್ಲಿಕೇಶನ್‌ಗೆ ರಿ ಡೈರೆಕ್ಟ್ ಮಾಡಲಾಗುತ್ತದೆ. ಉಳಿದ ಪ್ರಕ್ರಿಯೆಯನ್ನು ಅಲ್ಲಿ ಪೂರ್ಣಗೊಳಿಸಬೇಕಾಗುತ್ತದೆ.


ಇದನ್ನೂ ಓದಿ : Smartphone Under Rs 6000 : 6,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಸ್ಮಾರ್ಟ್ ಫೋನ್
 
ಇದನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಬಳಸಬಹುದು.ಆದರೆ  ಪ್ರಸ್ತುತ ಈ ಸೌಲಭ್ಯವು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.