ಬೆಂಗಳೂರು : ಕಳೆದ ಕೆಲವು ದಿನಗಳಲ್ಲಿ, WhatsApp ತನ್ನ ಸ್ಟೇಟಸ್ ಅಪ್‌ಡೇಟ್ ವೈಶಿಷ್ಟ್ಯದಲ್ಲಿ ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದೆ ಎಂದು ಹಲವಾರು ವರದಿಗಳು ಬಂದಿವೆ. ಸಂಪೂರ್ಣ ಇಂಟರ್ಫೇಸ್ ಅನ್ನು ಬದಲಾಯಿಸುವುದರಿಂದ ಹಿಡಿದು ಸ್ಟೇಟಸ್‌ನಲ್ಲಿ ಕಾಂಟಾಕ್ಟ್ ಗಳನ್ನು ರಹಸ್ಯವಾಗಿ ನಮೂದಿಸುವವರೆಗೆ,ಅನೇಕ ಹೊಸ ವಿಷಯಗಳು ಬರುತ್ತಿವೆ. WABetaInfo ನ ಹೊಸ ವರದಿಯ ಪ್ರಕಾರ, WhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು  ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

WhatsApp ಹೊಸ ವೈಶಿಷ್ಟ್ಯ : 
WABetaInfo ಪ್ರಕಾರ, WhatsApp ತನ್ನ ಸ್ಟೇಟಸ್ ವೈಶಿಷ್ಟ್ಯವನ್ನು Apple ಮತ್ತು Android ಫೋನ್ ಬಳಕೆದಾರರಿಗಾಗಿ ಸುಧಾರಿಸುತ್ತಿದೆ.ಈಗ ಬಳಕೆದಾರರು ಸ್ಟೇಟಸ್‌ನಲ್ಲಿ 1 ನಿಮಿಷದವರೆಗೆ ವಾಯ್ಸ್ ರೆಕಾರ್ಡಿಂಗ್‌ಗಳನ್ನು ಶೇರ್ ಮಾಡಬಹುದು. ಹೊಸ WhatsApp ಅಪ್‌ಡೇಟ್ ಅನ್ನು ಡೌನ್‌ಲೋಡ್ ಮಾಡುವ ಬಳಕೆದಾರರು  ದೀರ್ಘವಾದ ಆಡಿಯೊ ಸಂದೇಶಗಳನ್ನು ಹಂಚಿಕೊಳ್ಳಬಹುದು.


ಇದನ್ನೂ ಓದಿ : Airtel : ಉಚಿತ ನೆಟ್‌ಫ್ಲಿಕ್ಸ್, ಅನಿಯಮಿತ ಕರೆ… 5G ಇಂಟರ್ನೆಟ್‌ನೊಂದಿಗೆ ವಿಶೇಷ ಯೋಜನೆ 


ದೀರ್ಘಾವಧಿಯ ವೀಡಿಯೊ ಸ್ಟೇಟಸ್ ಅನ್ನು WhatsAppನಲ್ಲಿ ಪೋಸ್ಟ್ ಮಾಡುವ ವೈಶಿಷ್ಟ್ಯ ಬಳಕೆದಾರರ ಬಹುದಿನಗಳ ಬೇಡಿಕೆಯಾಗಿತ್ತು.ಈಗ ಈ ಅಪ್‌ಡೇಟ್‌ನೊಂದಿಗೆ ನಿಮ್ಮ ಸ್ನೇಹಿತರೊಂದಿಗೆ ಹೆಚ್ಚು ಆಸಕ್ತಿದಾಯಕ ಮತ್ತು ದೀರ್ಘವಾದ ವೀಡಿಯೊ ಕ್ಲಿಪ್‌ಗಳನ್ನು ಹಂಚಿಕೊಳ್ಳಬಹುದು.30 ಸೆಕೆಂಡುಗಳಲ್ಲಿ ತೋರಿಸಲು ಕಷ್ಟಕರವಾದ ವಿಷಯಗಳನ್ನು ವಿವರಿಸಲು ಇದು ವಿಶೇಷವಾಗಿ ಉಪಯುಕ್ತವಾಗಿದೆ.


ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ? : 
WABetaInfo ಹೆಸರಿನ ವೆಬ್‌ಸೈಟ್ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದೆ. ಅದರ ಪ್ರಕಾರ  ವಾಯ್ಸ್ ನೋಟ್ ಗಳನ್ನು ರೆಕಾರ್ಡ್ ಮಾಡುವ ವಿಧಾನವು ಚಾಟ್‌ನಲ್ಲಿ  ವಾಯ್ಸ್ ಮೆಸೇಜ್ ಕಳುಹಿಸುವಂತೆಯೇ ಇರುತ್ತದೆ.ಇಲ್ಲಿ ಕೂಡಾ ಮೈಕ್ ಬಟನ್ ಅನ್ನು ಒತ್ತಿ ಹಿಡಿದುಕೊಂಡು ಮಾತನಾಡಲು ಪ್ರಾರಂಭಿಸಬೇಕು. ಒನುದ್ ವೇಳೆ ಆಕಸ್ಮಿಕವಾಗಿ ರೆಕಾರ್ಡಿಂಗ್ ಪ್ರಾರಂಭಿಸಿದರೆ, ಅದನ್ನು ಕ್ಯಾನ್ಸೆಲ್ ಮಾಡಲು ಬಟನ್ ಅನ್ನು ಸ್ಲೈಡ್ ಮಾಡಬಹುದು.ಈ ಹೊಸ ವೈಶಿಷ್ಟ್ಯವು ಪ್ರಸ್ತುತ WhatsAppನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವ ಕೆಲವೇ ಜನರಿಗೆ ಮಾತ್ರ ಲಭ್ಯವಿದೆ. ನೀವು Android ಅನ್ನು ಬಳಸುತ್ತಿದ್ದರೆ ಈ ನವೀಕರಣವು Google Play Store ನಿಂದ ಲಭ್ಯವಿರುತ್ತದೆ. iPhone ಬಳಕೆದಾರರು ಅದನ್ನು ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.ಮುಂಬರುವ ಕೆಲವೇ ದಿನಗಳಲ್ಲಿ ಈ ಹೊಸ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯಿದೆ.


ಇದನ್ನೂ ಓದಿ : Samsung Galaxy S23 FE: Samsungನ ಈ ಸ್ಮಾರ್ಟ್‌ಫೋನ್‌ ಮೇಲೆ ಶೇ.56ರಷ್ಟು ಡಿಸ್ಕೌಂಟ್‌!


WhatsApp  ಸ್ಟೇಟಸ್ ವೈಶಿಷ್ಟ್ಯಗಳು :
WhatsApp ದೀರ್ಘ ವಾಯ್ಸ್ ರೆಕಾರ್ಡಿಂಗ್‌ಗಳನ್ನು ಮಾತ್ರ ತರುತ್ತಿಲ್ಲ.ಅದರ ಜೊತೆಗೆ ನಿಮ್ಮ ಸ್ಟೇಟಸ್ ಅನ್ನು ಯಾರು ನೋಡಬಹುದು ಎಂಬುದನ್ನು ನಿರ್ಧರಿಸಲು ಸಹ ಅವಕಾಶ ನೀಡುತ್ತದೆ.ನಿಮ್ಮ ಸ್ಟೇಟಸ್ ಅನ್ನು ಯಾರು ನೋಡಬಹುದು, ಯಾರು ನೋಡಬಾರದು ಎಂಬುದನ್ನು ನಿಯಂತ್ರಿಸುವುದು  ಸಾಧ್ಯವಾಗುತ್ತದೆ. ನಿಮ್ಮ ಸ್ಟೇಟಸ್‌ನಲ್ಲಿ 1 ನಿಮಿಷದವರೆಗಿನ ವೀಡಿಯೊಗಳನ್ನು ಸಹ ಹಾಕಬಹುದು.ಈ ಹಿಂದೆ ಕೇವಲ 30 ಸೆಕೆಂಡ್‌ಗಳ ವೀಡಿಯೊಗಳನ್ನು ಮಾತ್ರ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.