Twitter ಹಾಗೂ Instagram ಅಷ್ಟೇ ಅಲ್ಲ ಇನ್ಮುಂದೆ Gmail ನಲ್ಲಿಯೂ ನಿಮಗೆ ಬ್ಲೂ ಟಿಕ್ ಸಿಗಲಿದೆ
Gmail New Feature: ಜಿಮೇಲ್ ಬಳಕೆದಾರರಿಗೆ ಹೊಸದೊಂದು ವೈಶಿಷ್ಟ್ಯ ಲಭ್ಯವಾಗುತ್ತಿದ್ದು, ಇದರಿಂದ ನಕಲಿ ಖಾತೆಗಳ ಮೇಲೆ ನಿಯಂತ್ರಣ ಕಡಿವಾಣ ಬೀಳಲಿದೆ ಮತ್ತು ನಕಲಿ ಖಾತೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು.
Blue Tick Verification: ಒಂದು ವೇಳೆ ನೀವೂ ಕೂಡ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರೆ, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ಬಳಕೆದಾರರಿಗೆ ಪರಿಶೀಲಿಸಲಾದ ಬ್ಯಾಡ್ಜ್‌ಗಳನ್ನು ನೀಡುವುದನ್ನು ನೀವು ನೋಡಿರಬೇಕು, ಇದನ್ನು ಸಾಮಾನ್ಯವಾಗಿ ಬ್ಲೂಟಿಕ್ ಎಂದೂ ಕರೆಯಲಾಗುತ್ತದೆ. ಖಾತೆಗೆ ಬ್ಲೂ ಟಿಕ್ ಬಂದಿದ್ದರೆ, ಆ ವ್ಯಕ್ತಿಯ ಖಾತೆಯನ್ನು ಪರಿಶೀಲಿಸಲಾಗಿದೆ ಎಂದರ್ಥ. ಸಾಮಾಜಿಕ ಮಾಧ್ಯಮದಲ್ಲಿ ಬ್ಲೂಟಿಕ್ ಅಕೌಂಟ್ ಬಂದಿದ್ದರೆ ಅದು ನಕಲಿ ಖಾತೆಯಲ್ಲ ಎಂದರ್ಥ, ಯಾರ ಹೆಸರಿನಲ್ಲಿ ಖಾತೆ ಸೃಷ್ಟಿಯಾಗಿದೆಯೋ ಅವರೇ ಅದನ್ನು ನಡೆಸುತ್ತಿದ್ದಾರೆ ಎಂದರ್ಥ. Instagram ಮತ್ತು Facebook ಜೊತೆಗೆ Twitter ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ತಾಣಗಳು ಈ ಬ್ಲೂಟಿಕ್ ವೇರಿಫಿಕೇಶನ್ ನೀಡುವುದು ಸಾಮಾನ್ಯ, ಆದರೆ ಇದುವರೆಗೆ ಅಂತಹ ಯಾವುದೇ ವೈಶಿಷ್ಟ್ಯವು Gmail ನಲ್ಲಿ ಇರಲಿಲ್ಲ, ಆದರೆ ಇನ್ಮುಂದೆ ಈ ವೈಶಿಷ್ಟ್ಯ ಇನ್ಮುಂದೆ Gmail ಜಿಮೇಲ್ ಬಳಕೆದಾರರಿಗೂ ಸಿಗಲಿದೆ ಮತ್ತು ಇದು ಇದೀಗ ಭಾರತದಲ್ಲಿಯೂ ಪ್ರಾರಂಭವಾಗಿದೆ.
ಇದನ್ನೂ ಓದಿ-WhatsApp ಮಿಸ್ಸಡ್ ಕಾಲ್ ಗಳ ಮೇಲೆ ಬಹುದೊಡ್ಡ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರ
ಇದನ್ನು ಮೇ 3 ರಂದು ಘೋಷಿಸಲಾಗಿದೆ
ಮೇ 3 ರಂದು Google Workspace ನ ಎಲ್ಲಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಆರಂಭಿಸಲಾಗಿದೆ. ಮೇ 3 ರವರೆಗೆ ಈ ವೈಶಿಷ್ಟ್ಯವು ಲಭ್ಯವಿಲ್ಲದಿದ್ದರೂ, ಇದೀಗ ಭಾರತೀಯ ಜಿಮೇಲ್ ಬಳಕೆದಾರರೂ ಈ ವೈಶಿಷ್ಟ್ಯವನ್ನು ಕಾಣಲಿದ್ದಾರೆ. ಬ್ಲೂಟೂತ್ ಆಧಾರದ ಮೇಲೆ, ಮೇಲ್ ಕಳುಹಿಸುವವರ ನೈಜತೆಯ ಪರೀಶೀಲನೆ ನಡೆಸಬಹುದು ಮತ್ತು ಅದು ನಕಲಿ ಖಾತೆ ಅಲ್ಲ ಎಂಬುದನ್ನು ಎಂದು ನೀವು ತಿಳಿದುಕೊಳ್ಳಬಹುದು. ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಈಗ ಜಿಮೇಲ್ ನಕಲಿ ಖಾತೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ವಂಚನೆಯನ್ನು ತಡೆಗಟ್ಟಬಹುದು. ಈ ವೈಶಿಷ್ಟ್ಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ ಏಕೆಂದರೆ ನಿಮಗೆ ನಕಲಿ ಖಾತೆಗಳಿಂದ ಸಂದೇಶಗಳು ಬಂದಾಗ ನೀವು ಹಲವು ಬಾರಿ ಅವುಗಳನ್ನು ನಂಬುವುದು ಸಂಭವಿಸುತ್ತದೆ. ಅಷ್ಟೇ ಅಲ್ಲದೆ ಅವುಗಳನ್ನು ನಂಬಿ ನಿಮ್ಮ ಬ್ಯಾಂಕ್ ಖಾತೆಯೂ ಖಾಲಿಯಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ- 'WhatsApp ಅನ್ನು ನಂಬುವುದು ಸಾಧ್ಯವಿಲ್ಲ' ಅಂತ ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾದರು ಏಕೆ?
ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯ ಸಿಗಲಿದೆ
ಯಾವುದೇ ನಿಶ್ಚಿತ ಸಮಯಾವಧಿ ಇಲ್ಲದಿದ್ದರೂ ಕೂಡ, ಮುಂಬರುವ ಕೆಲವು ವಾರಗಳಲ್ಲಿ ಈ ವೈಶಿಷ್ಟ್ಯವು ಪ್ರತಿ ಖಾತೆಯಲ್ಲಿ ಕಾಣಿಸಿಕೊಳ್ಳಲಿದೆ ಮತ್ತು Gmail ಬಳಸುವ ಹೆಚ್ಚಿನ ಬಳಕೆದಾರರು ಬ್ಲೂ ಟಿಕ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನೀವು ನಿಮ್ಮ ಜಿಮೇಲ್ ಇನ್‌ಬಾಕ್ಸ್ ಅನ್ನು ತೆರೆದಾಗಲೆಲ್ಲಾ ನೀವು ಬಹಳಷ್ಟು ಮೇಲ್ ಅನ್ನು ನೋಡಿವಿರಿ, ಆದರೆ ಮೇಲ್ ಕಳುಹಿಸಲಾದ ಖಾತೆಯು ನಿಜವೋ ಅಥವಾ ನಕಲಿಯೋ ಎಂದು ತಿಳಿದುಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ, ಆದರೆ ಈಗ ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ನೀವು ಸುಲಭವಾಗಿ ನೈಜ ಖಾತೆಯನ್ನು ಪತ್ತೆಹಚ್ಚಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ