ಬೆಂಗಳೂರು : ಫೇಸ್‌ಬುಕ್‌ನಲ್ಲಿ ಹಣ ಸಂಪಾದಿಸುವ ವಿಧಾನವನ್ನು ಮೆಟಾ ಬದಲಾಯಿಸುತ್ತಿದೆ.ಈಗ, ಕ್ರಿಯೇಟರ್ಸ್  ಮೂರು ವಿಭಿನ್ನ ರೀತಿಯಲ್ಲಿ ಹಣ ಗಳಿಸುವ ಅಗತ್ಯವಿಲ್ಲ. ಕಂಪನಿಯು ಈ ಮೂರು ವಿಧಾನಗಳನ್ನು ಒಟ್ಟಾಗಿ ಸಂಯೋಜಿಸುತ್ತಿದೆ. ಇದು  ಕ್ರಿಯೇಟರ್ಸ್ ಗೆ ಹಣ ಗಳಿಸಿವ ವಿಧಾನವನ್ನು ಸುಲಭವಾಗಿಸಲಿದೆ.ಈ ಹಿಂದೆ, ಇನ್-ಸ್ಟ್ರೀಮ್ ಜಾಹೀರಾತುಗಳು,ರೀಲ್‌ಗಳಲ್ಲಿನ ಜಾಹೀರಾತುಗಳು ಮತ್ತು ಕಾರ್ಯಕ್ಷಮತೆಯ ಬೋನಸ್‌ಗಳ ಮೂಲಕ ಹಣ ಗಳಿಸಲು ಕ್ರಿಯೇಟರ್ಸ್ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು.ಆದರೆ ಈಗ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಿದರೆ ಸಾಕು. 


COMMERCIAL BREAK
SCROLL TO CONTINUE READING

ಕಳೆದ ಒಂದು ವರ್ಷದಲ್ಲಿ ಕ್ರಿಯೇಟರ್ಸ್ ಗೆ ತಮ್ಮ ರೀಲ್‌ಗಳು, ವೀಡಿಯೊಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಗಾಗಿ 2 ಬಿಲಿಯನ್‌ ಡಾಲರ್ ಗಿಂತಲೂ ಹೆಚ್ಚಿನ ಹಣವನ್ನು ನೀಡಿದೆ ಎಂದು ಮೆಟಾ ಹೇಳಿದೆ.ಆದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಕ್ರಿಯೇಟರ್ಸ್ ಎಷ್ಟು ಹಣ ಗಳಿಸಬಹುದೋ ಅಷ್ಟು ಹಣವನ್ನು ಗಳಿಸುವುದು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಹೇಳಿದೆ.ಮೂರನೇ ಒಂದು ಭಾಗದಷ್ಟು ಜನರು ಮಾತ್ರ ಹೆಚ್ಚಿನ ಮೆಟಾ ವಿಧಾನಗಳ ಮೂಲಕ ಹಣವನ್ನು ಗಳಿಸುತ್ತಿದ್ದಾರೆ.


ಇದನ್ನೂ ಓದಿ : ಸಿಲಿಂಡರ್‌ನಲ್ಲಿ ಇನ್ನೆಷ್ಟು ಗ್ಯಾಸ್ ಉಳಿದಿದೆ ಅಂತಾ ಚೆಕ್‌ ಮಾಡ್ಬೇಕಾ? ಹಾಗಾದ್ರೆ ಹೀಗೆ ಮಾಡಿ ಸಾಕು... 2 ನಿಮಿಷದಲ್ಲಿ ಗೊತ್ತಾಗುತ್ತೆ!


ಬದಲಾವಣೆಯಾಗಿದ್ದು ಯಾವುದು ? :  
ಹೊಸ ವಿಧಾನವು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ.ಕ್ರಿಯೇಟರ್ಸ್ ತಮ್ಮ ರೀಲ್‌ಗಳಲ್ಲಿನ ಜಾಹೀರಾತುಗಳು, ದೀರ್ಘ ವೀಡಿಯೊಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಂದ ಹಣವನ್ನು ಗಳಿಸುತ್ತಾರೆ.ಹೆಚ್ಚುವರಿಯಾಗಿ, Meta ಕ್ರಿಯೇಟರ್ಸ್ ತಮ್ಮ ರೀಲ್‌ಗಳು, ವೀಡಿಯೊಗಳು, ಫೋಟೋಗಳು ಮತ್ತು ಪೋಸ್ಟ್‌ಗಳಿಂದ ಎಷ್ಟು ಗಳಿಸುತ್ತಿದ್ದಾರೆ ಎಂಬುದನ್ನು ನೋಡಲು ಹೊಸ ಸಾಧನವನ್ನು ನೀಡುತ್ತದೆ.ಯಾವ ವೀಡಿಯೊಗಳು ಮತ್ತು ಪೋಸ್ಟ್‌ಗಳು ಹೆಚ್ಚು ಹಣವನ್ನು ಗಳಿಸುತ್ತಿವೆ ಎಂಬುದನ್ನು ಇದು ಕ್ರಿಯೇಟರ್ಸ್ ಗೆ ತಿಳಿಸುತ್ತದೆ. 


ಅರ್ಜಿ ಸಲ್ಲಿಸುವುದು ಹೇಗೆ? :
ಹೊಸ ವಿಧಾನವು ಪ್ರಸ್ತುತ ಪ್ರಯೋಗದಲ್ಲಿದೆ. ಈ ವಾರ ಈ ಪ್ರಯೋಗಕ್ಕೆ ಸೇರಲು 10 ಲಕ್ಷ ಕ್ರಿಯೇಟರ್ಸ್ ಅನ್ನು Meta ಆಹ್ವಾನಿಸುತ್ತದೆ.ಈಗಾಗಲೇ ಫೇಸ್‌ಬುಕ್‌ನಲ್ಲಿ ಹಣ ಸಂಪಾದಿಸುತ್ತಿರುವ ಕ್ರಿಯೇಟರ್ಸ್ ಗೆ ಇನ್ವೈಟ್ ಮಾಡಿದೆ.ಎಲ್ಲಾ ಕ್ರಿಯೇಟರ್ಸ್  ಈ ಪ್ರಯೋಗದಲ್ಲಿ ಭಾಗವಹಿಸುವ ಅಗತ್ಯವಿಲ್ಲ.ಆದರೆ ಇದರಲ್ಲಿ ಪಾಲ್ಗೊಳ್ಳ ಬಯಸುವವರು ಫೇಸ್‌ಬುಕ್‌ನ ಹಳೆಯ ವಿಧಾನಗಳ ಮೂಲಕ ಹಣ ಸಂಪಾದಿಸಲು ಸಾಧ್ಯವಾಗುವುದಿಲ್ಲ.ಈ ಹೊಸ ವಿಧಾನವನ್ನು ಸೇರಲು ಬಯಸಿದ್ದು, ನಿಮಗೆ ಇನ್ನೂ ಇನ್ವೈಟ್ ಬಂದಿಲ್ಲ ಎಂದಾದರೆ Facebook ನ ಕಂಟೆಂಟ್ ಮೊನೆಟೈಜೇಶನ್ ಪೇಜ್ ಗೆ  ಭೇಟಿ ನೀಡುವ ಮೂಲಕ ಆಸಕ್ತಿಯನ್ನು ವ್ಯಕ್ತಪಡಿಸಬಹುದು.


ಇದನ್ನೂ ಓದಿ : ಈ ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು, WhatsAppನಲ್ಲಿಯೇ ವೀಕ್ಷಿಸಬಹುದು Instagram Reels !


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.