Samsung Smart TVಗಳಲ್ಲಿ ಇನ್ಮುಂದೆ ಇರಲ್ಲ Google Assistant ವೈಶಿಷ್ಟ್ಯ!
New Tech Update: ಮಾರ್ಚ್ 1, 2024 ರಿಂದ ಎಲ್ಲಾ Samsung ಸ್ಮಾರ್ಟ್ ಟಿವಿಗಳಲ್ಲಿ Google Assistant ವೈಶಿಷ್ಟ್ಯವು ಲಭ್ಯವಿರುವುದಿಲ್ಲ. ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿರುವ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯ ಮಾದರಿಗಳನ್ನು ಸಹ ಒಳಗೊಂಡಿದೆ. ಸ್ಯಾಮ್‌ಸಂಗ್‌ನ ಸಪೋರ್ಟ್ ಪುಟದಲ್ಲಿ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. (Technology News In Kannada)
Samsung Smart TV: ನೀವು ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಬಳಸುತ್ತಿದ್ದರೆ ಹೊಸ ಟೆಕ್ ಅಪ್ಡೇಟ್ ಕೇವಲ ನಿಮಗಾಗಿ, ಮಾರ್ಚ್ 1, 2024 ರಿಂದ ಎಲ್ಲಾ Samsung ಸ್ಮಾರ್ಟ್ ಟಿವಿಗಳಲ್ಲಿ Google Assistant ವೈಶಿಷ್ಟ್ಯವು ಲಭ್ಯವಿರುವುದಿಲ್ಲ. ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿರುವ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯ ಮಾದರಿಗಳನ್ನು ಸಹ ಒಳಗೊಂಡಿದೆ. ಸ್ಯಾಮ್‌ಸಂಗ್ ಸಪೋರ್ಟ್ ಪುಟದಲ್ಲಿ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಈ ನಿರ್ಧಾರದ ಸೂಚನೆಗಳು ಕಳೆದ ವರ್ಷದಿಂದ ಕಾಣಿಸಿಕೊಳ್ಳಲಾರಂಭಿಸಿದ್ದವು. ಏಕೆಂದರೆ 2023 ಟಿವಿ ಲೈನ್‌ಅಪ್‌ನಲ್ಲಿ Google Assistant ವೈಶಿಷ್ಟ್ಯವನ್ನು ಸೇರಿಸಲಾಗಿಲ್ಲ. ಸ್ಯಾಮ್‌ಸಂಗ್‌ನ ಹಳೆಯ ಮಾದರಿಗಳಿಂದ Google Assistant ವೈಶಿಷ್ಟ್ಯವನ್ನು ಕೂಡ ತೆಗೆದುಹಾಕಲಾಗುತ್ತಿದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ, .(Technology News In Kannada)
ಈ ಮಾದರಿಗಳಿಂದ Google Assistant ತೆಗೆದುಹಾಕಲಾಗುತ್ತದೆ
ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್ ಟಿವಿಗಳಲ್ಲಿ ಗೂಗಲ್ ಅಸಿಸ್ಟೆಂಟ್ ವೈಶಿಷ್ಟ್ಯವನ್ನು 2020 ರಲ್ಲಿ ಸಂಯೋಜಿಸಲು ಆರಂಭಿಸಿತ್ತು. ಕೇವಲ ನಾಲ್ಕು ವರ್ಷಗಳಲ್ಲಿ ಈ ವೈಶಿಷ್ಟ್ಯವನ್ನು ಎಲ್ಲಾ ಬೆಂಬಲಿತ ಮಾದರಿಗಳಿಂದ ತೆಗೆದುಹಾಕಲಾಗುತ್ತಿದೆ. ಈ ವೈಶಿಷ್ಟ್ಯವನ್ನು ತೆಗೆದುಹಾಕುವ Samsung Smart TV ಮಾದರಿಗಳಲ್ಲಿ 2022 ಮಾಡೆಲ್‌ಗಳು, 2021 ಮಾಡೆಲ್‌ಗಳು, 2020 8K ಮತ್ತು 4K QLED ಟಿವಿಗಳು, 2020 ಕ್ರಿಸ್ಟಲ್ UHD ಟಿವಿ ಮತ್ತು 2020 ಲೈಫ್‌ಸ್ಟೈಲ್ ಟಿವಿ (ಫ್ರೇಮ್, ಸೆರಿಫ್, ಟೆರೇಸ್, ಮತ್ತು ಸೆರೋ) ಮಾಡೆಲ್‌ಗಳು ಶಾಮೀಲಾಗಿವೆ.
ಇದನ್ನೂ ಓದಿ-Digital Detox Program: ಗ್ಯಾಜೆಟ್ ಗಳಿಂದ ಮಾನಸಿಕ ಆರೋಗ್ಯ ಹಾಳಾಗುತ್ತಿದೆ, ಆತಂಕಗೊಂಡ ಸರ್ಕಾರದಿಂದ ಅಭಿಯಾನ ಆರಂಭ!
"ಗೂಗಲ್‌ನ ನೀತಿಯಲ್ಲಿನ ಬದಲಾವಣೆ"ಯಿಂದಾಗಿ ಈ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು Samsung ಹೇಳಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಈ ಕುರಿತು ಸ್ಯಾಮ್ಸಂಗ್ ಸಪೋರ್ಟ್ ಪುಟದಲ್ಲಿ "ಪ್ರಮುಖ: Google ನ ನೀತಿಯಲ್ಲಿನ ಬದಲಾವಣೆಯಿಂದಾಗಿ, ಮಾರ್ಚ್ 1, 2024 ರಿಂದ Samsung TV ಗಳಲ್ಲಿ Google Assistant ಇನ್ನು ಮುಂದೆ ಲಭ್ಯವಿರುವುದಿಲ್ಲ. Samsung TV ಗಳಲ್ಲಿ ಇತರ ಧ್ವನಿ ಸಹಾಯಕ ಆಯ್ಕೆಗಳನ್ನು ಪರಿಶೀಲಿಸಿ" ಎಂದು ಬರೆಯಲಾಗಿದೆ.
ಇದನ್ನೂ ಓದಿ-WhatsApp New Feature: ತನ್ನ ಬಳಕೆದಾರರಿಗೊಂದು ಸ್ವಾರಸ್ಯಕರ ವೈಶಿಷ್ಟ್ಯ ಬಿಡುಗಡೆ ಮಾಡಿದ ವಾಟ್ಸ್ ಆಪ್!
ಬಳಕೆದಾರರು ಈ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ
ಇತ್ತೀಚೆಗೆ ಗೂಗಲ್ ಅಸಿಸ್ಟೆಂಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು ಮತ್ತು 17 ವೈಶಿಷ್ಟ್ಯಗಳನ್ನು ತೆಗೆದುಹಾಕಿದೆ. ಆದಾಗ್ಯೂ, ಸ್ಯಾಮ್‌ಸಂಗ್‌ನ ನಿರ್ಧಾರಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಗೂಗಲ್ ಅಸಿಸ್ಟೆಂಟ್ ವೈಶಿಷ್ಟ್ಯವನ್ನು ತೆಗೆದುಹಾಕಿದ ನಂತರ, ಸ್ಯಾಮ್‌ಸಂಗ್ ಟಿವಿ ಬಳಕೆದಾರರು ಈಗ ಸ್ಯಾಮ್‌ಸಂಗ್‌ನ ಬಿಕ್ಸ್‌ಬಿ ಮತ್ತು ಅಮೆಜಾನ್‌ನ ಅಲೆಕ್ಸಾದಂತಹ ಫ್ರೀ ಇನ್ಸ್ಟಾಲ್ಡ್ ಧ್ವನಿ ಸಹಾಯಕಗಳನ್ನು ಬಳಸಬೇಕಾಗಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ