WhatsApp ನಲ್ಲಿ ಇನ್ಮುಂದೆ ನೀವು ಥರ್ಡ್ ಪಾರ್ಟಿ ಚಾಟ್ ಗಳನ್ನು ನಿರ್ವಹಿಸಬಹುದು, ಬರಲಿದೆ ಹೊಸ ವೈಶಿಷ್ಯ!
WhatsApp ತನ್ನ ಅಪ್ಲಿಕೇಶನ್ ಅನ್ನು ಮತ್ತಷ್ಟು ಯೂಸರ್ ಫ್ರೆಂಡ್ಲಿಯಾಗಿಸಲು ಮತ್ತು ಸುರಕ್ಷಿತವಾಗಿಸಲು ಹಲವು ಹೊಸ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಕಂಪನಿ ಥರ್ಡ್ ಪಾರ್ಟಿ ಚಾಟ್‌ಗಳನ್ನು (Third Party Chats) ನಿರ್ವಹಿಸಬಹುದಾದ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ.(Technology News In Kannada)
WhatsApp Updates And Changes: WhatsApp ವಿಶ್ವದ ಅತ್ಯಂತ ಜನಪ್ರಿಯ ಕಿರುಸಂದೇಶ ಕಳುಹಿಸುವ (Messaging App) ಮತ್ತು ಸ್ವೀಕರಿಸುವ ಆಪ್ ಆಗಿದೆ, ಇದರಲ್ಲಿ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತ್ರವಲ್ಲದೆ ವ್ಯಾಪಾರ ಖಾತೆಗಳೊಂದಿಗೂ ಕೂಡ ಸಂವಹನ ನಡೆಸಬಹುದು. ಈ ಜನಪ್ರಿಯ ತ್ವರಿತ ಸಂದೇಶ ರವಾನಿಸುವ ಆಪ್ ನಲ್ಲಿ, ಇನ್ಮುಂದೆ ನೀವು ಥರ್ಡ್ ಪಾರ್ಟಿ ಆಪ್ ಗಳಿಂದಲೂ (WhatsApp cross-platform messaging) ಕೂಡ ಸಂದೇಶಗಳನ್ನು ಪಡೆಯಬಹುದು. ಆದರೆ ಇದರಿಂದ ಬಳಕೆದಾರರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಥರ್ಡ್ ಪಾರ್ಟಿ ಆಪ್‌ಗಳ (Third Party Apps) ಮೂಲಕವೂ ನೀವು ವಂಚನೆಗೆ ಗುರಿಯಾಗಬಹುದು. ಹೀಗಾಗಿ ತನ್ನ ಬಳಕೆದಾರರನ್ನು ರಕ್ಷಿಸಲು, WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದು ಥರ್ಡ್ ಪಾರ್ಟಿ ಚಾಟ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲಿದೆ. (Technology News In Kannada).
ಈ ಮೊದಲು ಬಿತ್ತರಗೊಂಡ ವರದಿಯೊಂದರ ಪ್ರಕಾರ, ಕಂಪನಿಯು ಥರ್ಡ್ ಪಾರ್ಟಿ ಚಾಟ್‌ಗಳ ಇನ್ಫೋ ಸ್ಕ್ರೀನ್ (Third Party Info Screen) ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ, ಇದರಿಂದಾಗಿ ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಚಾಟ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇತ್ತೀಚಿನ ವರದಿಯ ಪ್ರಕಾರ, ಭವಿಷ್ಯದಲ್ಲಿ WhatsApp ಬಳಕೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಥರ್ಡ್ ಚಾಟ್‌ಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ, .
WhatsApp ಯಾವ ಹೊಸ ವೈಶಿಷ್ಟ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿದೆ
WABetainfo ನ ಇತ್ತೀಚಿನ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ Android 2.24.6.2 ನವೀಕರಣಕ್ಕಾಗಿ WhatsApp ಬೀಟಾ ಥರ್ಡ್ ಪಾರ್ಟಿ ಸಂವಹನಗಳನ್ನು ನಿರ್ವಹಿಸಲು ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಬಹಿರಂಗಪಡಿಸಿದೆ. WABetainfo ಎಂಬುದು WhatsApp ನ ಮುಂಬರುವ ವೈಶಿಷ್ಟ್ಯಗಳ ಮೇಲೆ ಕಣ್ಣಿಡುವ ವೆಬ್‌ಸೈಟ್ ಆಗಿದ್ದು, ಅದರ ಬಹುತೇಕ ಮಾಹಿತಿ ನಿಜ ಎಂದು ಸಾಬೀತಾಗುತ್ತದೆ.
WABetainfo ನಿನ್ನೆ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಾಟ್ಸಾಪ್ ಥರ್ಡ್ ಪಾರ್ಟಿ ಚಾಟ್‌ಗಳಿಗಾಗಿ ಇನ್ಫೋಸ್ಕ್ರೀನ್ ರಚಿಸುತ್ತಿದೆ (Third Party Chats Management) ಎಂದು ಹೇಳಲಾಗಿದೆ, ಅಲ್ಲಿಂದ ಅವುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈಗ, ಮತ್ತೊಂದು ಹೊಸ ಅಭಿವೃದ್ಧಿಶೀಲ ವೈಶಿಷ್ಟ್ಯದಿಂದ, ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ರವಾನಿಸುವ ಆಪ್ ಥರ್ಡ್ ಪಾರ್ಟಿ ಚಾಟ್‌ಗಳಿಗಾಗಿ ಹಲವು ವೈಶಿಷ್ಟ್ಯಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ನಿರ್ವಹಿಸಲು ನಿಮಗೆ ಎರಡು ಆಯ್ಕೆಗಳು ಸಿಗಲಿವೆ
ವರದಿಯಲ್ಲಿ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಳ್ಳಲಾಗಿದ್ದು, ಇದರಲ್ಲಿ, ಥರ್ಡ್ ಪಾರ್ಟಿ ಚಾಟ್‌ಗಳನ್ನು (WhatsApp user demand for cross-platform messaging) ನಿರ್ವಹಿಸಲು ಲಭ್ಯವಿರುವ ಆಯ್ಕೆಗಳನ್ನು ತೋರಿಸಲಾಗಿದೆ. ಸ್ಕ್ರೀನ್‌ಶಾಟ್ ಪ್ರಕಾರ, ಬಳಕೆದಾರರು ಥರ್ಡ್ ಪಾರ್ಟಿ ಚಾಟ್ಸ್ ವಿಭಾಗದಲ್ಲಿ ಟರ್ನ್ ಆಫ್ ಮತ್ತು ಸೆಲೆಕ್ಟೆಡ್ ಆಪ್ಸ್ ಎಂಬ ಎರಡು ಆಯ್ಕೆಗಳನ್ನು ಪಡೆಯಲಿದ್ದಾರೆ ಎಂಬಂತೆ ತೋರುತ್ತಿದೆ. ಇದರರ್ಥ ಭವಿಷ್ಯದಲ್ಲಿ WhatsApp ಬಳಕೆದಾರರು WhatsApp ಮೂಲಕ ಯಾವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಸಂವಹನ ನಡೆಸಬಹುದು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಅವರು ಬಯಸಿದರೆ, ಥರ್ಡ್ ಪಾರ್ಟಿ ಚಾಟ್ಸ್ ಆಫ್ ಕೂಡ ಮಾಡಬಹುದು.
WhatsApp New Feature: ವಾಟ್ಸ್ ಆಪ್ ನಲ್ಲಿ ಇನ್ಮುಂದೆ ದಿನಾಂಕ ಆಧರಿಸಿ ನೀವು ಈ ಕೆಲಸ ಮಾಡಬಹುದು, ಹೊಸ ವೈಶಿಷ್ಟ್ಯ ಬಿಡುಗಡೆ!
ಆದರೂ ಕೂಡ ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಸ್ವಲ್ಪ ಸಮಯ ನಿರೀಕ್ಷಿಸಬೇಕಾಗಲಿದೆ. ಏಕೆಂದರೆ ಪ್ರಸ್ತುತ, ಇದು ಅಭಿವೃದ್ಧಿ ಹಂತದಲ್ಲಿದೆ. ಇದರ ನಂತರ, ಅಪ್ಲಿಕೇಶನ್‌ನ ಭವಿಷ್ಯದ ಅಪ್ಡೇಟ್ ಗಳನ್ನು ಮೊದಲು ಪರೀಕ್ಷಿಸಲು ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುತ್ತದೆ. ಬಳಿಕ ಇದು ಸ್ಥಿರ ಆವೃತ್ತಿಯಲ್ಲಿ ಎಲ್ಲಾ ಬಳಕೆದಾರರಿಗೆ ಹೊರಬರಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ