ನವದೆಹಲಿ : ಮಂಗಳನ (Mars)  ಅಂಗಳದಲ್ಲೊಂದು ಮನೆ ಕಟ್ಟಲು ವಿಜ್ಞಾನಿಗಳು ಸರ್ವ ಸಾಹಸ ಪಡುತ್ತಿದ್ದಾರೆ.  ಈ ನಡುವೆಯೇ ABIBOO Studios  ಮತ್ತು SONet ಎಂಬ ಹೆಸರಿನ ಸೈಂಟಿಫಿಕ್ ಥಿಂಕ್ ಟ್ಯಾಂಕ್ ಮುಖ್ಯಸ್ಥ ಹಾಗೂ ಪ್ರಮುಖು ಅಸ್ಟ್ರೋ ಫಿಜಿಸ್ಟ್ ಗಿಲೊಮಾ ಅಂಗ್ಲಾಡಾ ಪ್ರಕಾರ ಮಂಗಳ ಗ್ರಹದಲ್ಲೊಂದು ಮೆಗಾಸಿಟಿ ನಿರ್ಮಾಣವಾಗಲಿದೆ. ಅದರಲ್ಲಿ ಕಡಿಮೆ ಅಂದರೂ 2.5 ಲಕ್ಷ ಜನ ವಾಸಿಸಬಹುದು. ಮಂಗಳನ ಅಂಗಳದ ಬೆಟ್ಟದ ತುದಿಯ ಮೇಲೆ ಈ ಮೆಗಾಸಿಟಿ (Mega city) ನಿರ್ಮಾಣವಾಗಲಿದೆ.  ಅದಕ್ಕೆ ಬೇಕಾದ ಇಂಧನ ಮಂಗಳ ಗ್ರಹದಲ್ಲೇ ಸಿಗಲಿದೆ.  ಆ ಜಾಗ ಯಾವುದು ಎಂಬುದನ್ನೂ ಥಿಂಕ್ ಟ್ಯಾಂಕ್ ಹೇಳಿದೆ.


COMMERCIAL BREAK
SCROLL TO CONTINUE READING

ಮಾನವನ ಲೇಔಟ್ ಎಲ್ಲಿರುತ್ತೆ ಗೊತ್ತಾ..?
ಅಂಗ್ಲಾಡಾ ಪ್ರಕಾರ ಮೆಗಾಸಿಟಿಯ ಹೆಸರು ನೂವಾ (NUWA).  ಇದು ಮಂಗಳ ಗ್ರಹದ ಟಂಪೆ ಮೆನ್ಸ್ ಬೆಟ್ಟದ ತುದಿಯಲ್ಲಿ ನಿರ್ಮಾಣವಾಗಲಿದೆ. ಈ ಶಿಖರ 3000  ಅಡಿ ಎತ್ತರವಿದೆ. ಅಂದರೆ ಸುಮಾರು ಒಂದು ಕಿಲೋಮೀಟರ್ ಎತ್ತರ. ಇಲ್ಲಿನ ಜಾಗವನ್ನು ಅಳೆಯಬಹುದು. ಇಲ್ಲಿ ಸಿಟಿ ಕಟ್ಟೋದು ಸುಲಭವಾಗಬಹುದು. ಇಲ್ಲಿ ಬೆಳಕು ಮತ್ತು ಕತ್ತಲೆ  ಮನುಷ್ಯರಿಗೆ ಎಷ್ಟು ಬೇಕೋ ಅಷ್ಟು ಲಭ್ಯವಿದೆ. 


ಇದನ್ನೂ ಓದಿ : ಮನೆಯಲ್ಲಿದ್ದುಕೊಂಡೇ ಫಟಾಪಟ್ ನಿಮ್ಮ ಹಳೆಯ ಸ್ಮಾರ್ಟ್‍ಫೋನ್ ಸೇಲ್ ಮಾಡಿ..!


ಮೆಗಾಸಿಟಿ ನಿರ್ಮಾಣ ಕಾರ್ಯ ಯಾವಾಗ .?
ABIBOO ಸಂಸ್ಥಾಪಕ ಮತ್ತು ಅದರ ಮುಖ್ಯಸ್ಥ ಅಲ್ಫ್ರೆಡೊ ಮುನೊಜ್ (Alfredo Munoz)ಪ್ರಕಾರ  ಅವರ ತಂಡವೊಂದು ಟೆಂಪೆ ಮೆನ್ಸ್ ಶಿಖರದ ಮೆಗಾಸಿಟಿ ಕಟ್ಟುವ ವಿನ್ಯಾಸವನ್ನು ತಯಾರು ಮಾಡಿದೆ.  ನೂವಾ ಪಟ್ಟಣದ ಡಿಜಿಟಲ್ ನಕ್ಷೆ ತುಂಬಾ ಸುಂದರವಾಗಿದೆ. ಮತ್ತಿದು ಅತ್ಯಾಧುನಿಕವಾಗಿದೆ.  
ಅಲ್ಫ್ರೆಡೊ ಮುನೊಜ್ ಪ್ರಕಾರ ಮಂಗಳನ  (Mars) ಅಂಗಳದಲ್ಲಿ ಮೆಗಾಸಿಟಿ ನಿರ್ಮಾಣ ಕಾರ್ಯ 2054ಕ್ಕೆ ಶುರುವಾಗಲಿದೆ. 2100 ರ ಹೊತ್ತಿಗೆ ಜನ ಅಲ್ಲಿ ನೆಲೆಸಬಹುದು. ಅಂದರೆ ಮಂಗಳನ ಅಂಗಳ ತಲುಪುವ ಕನಸು 2100ರ ಹೊತ್ತಿಗೆ ಪೂರ್ಣಗೊಳ್ಳಬಹುದು.  ಈ ಮೆಗಾಸಿಟಿಯ ಆಸುಪಾಸಿನಲ್ಲೂ ಮೆಗಾಸಿಟಿ ಮಾಡಬಹುದು. 


ಸ್ಪೇಸ್.ಕಾಂ ಜೊತೆ ಅಲ್ಫ್ರೆಡ್ ಮುನೋಜ್ ಮಾತಾಡಿದ್ದಾರೆ. ಒಂದು ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ  ನುವಾ ಮೆಗಾಸಿಟಿ ರಚನೆಯಾಗಲಿದೆ.  ಇಲ್ಲಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳೈಸಲಿದೆ.  ಇಲ್ಲಿ ಮನುಷ್ಯರು ವಾಸಿಸುವಂತ ಮನೆ ಕಟ್ಟಬೇಕು. ಆಕ್ಸಿಜನ್ ಮಾಸ್ಕ್ (Mask) ಇಲ್ಲದೆ ನಿಶ್ಚಿಂತೆಯಿಂದ  ಉಸಿರಾಡುವಂತಿರಬೇಕು.  ಇಲ್ಲಿ ಆಮ್ಲಜನಕ (Oxygen) ಪೂರೈಕೆ ನೋಡಿಕೊಳ್ಳಲು ಸಾಕಷ್ಟು ತಾಂತ್ರಿಕ ಶ್ರಮ ಹಾಕಬೇಕಾಗುತ್ತದೆ.  ಇಷ್ಟೇ ಅಲ್ಲ, ಮಂಗಳನ ಅಂಗಳಕ್ಕೆ ಮಾನವರನ್ನು ಕರೆದುಕೊಂಡು ಹೋಗುವುದು ಕೂಡಾ ಸವಾಲಿನ ಕೆಲಸವೇ ಆಗಿದೆ ಎಂದು ಹೇಳಿದ್ದಾರೆ ಅಲ್ಫ್ರೆಡೊ ಮುನೋಜ್. 


ಇದನ್ನೂ ಓದಿ : Google: ಅದ್ಭುತ ವೈಶಿಷ್ಟ್ಯವನ್ನು ಪ್ರಾರಂಭಿಸಿದ ಗೂಗಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.