AI vs Human Brain: ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಂತೆ ಅವುಗಳ ಮೇಲೆ ಮನುಷ್ಯರ ಅವಲಂಬನೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ವೇಳೆ, ಮನುಷ್ಯನ ಈ ಅವಲಂಬನೆಯು ಒಂದು ದಿನ ಆತನ ಶತ್ರುವಾಗಲಿದೆ. ನಮ್ಮ ಕೆಲಸವನ್ನು ಸುಲಭಗೊಳಿಸುವ ತಂತ್ರಜ್ಞಾನ ಭವಿಷ್ಯದಲ್ಲಿ ನಮ್ಮ ಪಾಲಿಗೆ ಶತ್ರುವಾಗುವುದು ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ. ವಿಜ್ಞಾನಿಗಳ ತಂಡವು ಮನುಷ್ಯನ ಈ ಶತ್ರುವನ್ನು ಸಹ ಪತ್ತೆಹಚ್ಚಿದೆ ಮತ್ತು ಮುಂದಿನ 12 ವರ್ಷಗಳಲ್ಲಿ ಮನುಷ್ಯರು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸಂಶೋಧನೆಯಲ್ಲಿ ಅವರು ಇದಕ್ಕೆ ಸೂಕ್ತ ಕಾರಣವನ್ನು ಕೂಡ ನೀಡಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಪ್ರಸ್ತುತ ಚಿತ್ರಣ 2035 ರ ಹೊತ್ತಿಗೆ ಬದಲಾಗಲಿದೆ
ಅಮೇರಿಕನ್ ಥಿಂಕ್ ಟ್ಯಾಂಕ್ ಪ್ಯೂ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ 12 ವರ್ಷಗಳಲ್ಲಿ, ಎಐ ಅಂದರೆ ಕೃತಕ ಬುದ್ಧಿಮತ್ತೆಯು ಮನುಷ್ಯರ ಆಲೋಚನಾ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ನಾಶಪಡಿಸಲಿದೆ ಎಂದು ಹೇಳಿದೆ. ಈ ತಂತ್ರಜ್ಞಾನವು ಮನುಷ್ಯರ ಮೇಲೆ ಪರಿಣಾಮ ಬೀರುವುದರಿಂದ ಮನುಷ್ಯ ತನ್ನಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸಲಾರಂಭಿಸುತ್ತಾನೆ. ಮುಂಬರುವ 12 ವರ್ಷಗಳಲ್ಲಿ ಅಂದರೆ 2035ರ ವರೆಗೆ ಯಂತ್ರಗಳು, ಚಾಟ್ ಬಾಟ್‌ಗಳು, ವ್ಯವಸ್ಥೆಗಳ ಬಳಕೆ ವೇಗವಾಗಿ ಹೆಚ್ಚಲಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.


ಮುಂದುವರೆಯಲು ಎಐ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ
ಸಂಶೋಧನೆಯ ಪ್ರಕಾರ, ಜನರು ತಮ್ಮನ್ನು ತಾವು ಮುನ್ನಡೆಸಲು ಡಿಜಿಟಲ್ ಉಪಕರಣಗಳು ಮತ್ತು ಎಐ ಅನ್ನು ಬಳಸಬೇಕಾಗುವ ಕಾಲ ಸನ್ನಿಹಿತವಾಗುತ್ತಿದೆ ಎನ್ನಲಾಗಿದೆ, ಇದು ಅವರ ವೈಯಕ್ತಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಸಿದುಕೊಳ್ಳಲಿದೆ. ಮುಂಬರುವ ದಿನಗಳಲ್ಲಿ, ವ್ಯವಹಾರ, ಸರ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯು ಸಂಪೂರ್ಣವಾಗಿ ಸ್ವಯಂಚಾಲಿತವಾಗುತ್ತದೆ, ಇದರಿಂದಾಗಿ ಮಾನವನ ಚಿಂತನೆ ಮತ್ತು ತಿಳುವಳಿಕೆ ದುರ್ಬಲಗೊಳ್ಳಲಿದೆ ಎಂದು ಸಂಶೋಧನೆ ಹೇಳಿದೆ.


ಇದನ್ನೂ ಓದಿ-Jio ಕಂಪನಿಯ ಅತ್ಯಂತ ಅಗ್ಗದ ಪ್ಲಾನ್ ಇದು, ನೆಟ್ಫ್ಲಿಕ್ಸ್-ಪ್ರೈಮ್ ವಿಡಿಯೋ ಸೇರಿದಂತೆ ಅನಿಯಮಿತ ಕರೆ ಮತ್ತು 200ಜಿಬಿ ಡೇಟಾ!


ಅನೇಕ ಜನರು ಈಗಾಗಲೇ ಎಐ ಮೇಲೆ ಅವಲಂಭಿತರಾಗಿದ್ದಾರೆ
ಅಮೇರಿಕನ್ ಥಿಂಕ್ ಟ್ಯಾಂಕ್ ಪ್ಯೂ ರಿಸರ್ಚ್‌ನ ಈ ಸಮೀಕ್ಷೆಯಲ್ಲಿ, 540 ತಜ್ಞರನ್ನು ಶಾಮೀಲುಗೊಳಿಸಲಾಗಿತ್ತು, ಈ ಸಂಶೋಧನೆಯ ವರದಿಯಲ್ಲಿ, ಎಐ ಯ ಪ್ರಾಮುಖ್ಯತೆ ಮತ್ತು ಮಾನವರಿಗೆ ಅದರ ಪ್ರಯೋಜನಗಳನ್ನು ಸಹ ವಿವರಿಸಲಾಗಿದೆ. ಆದಾಗ್ಯೂ, ಹೆಚ್ಚಿನ ಕಂಪನಿಗಳು ಅಥವಾ ಸಂಸ್ಥೆಗಳು ಎಐ ಗೆ ಸಂಬಂಧಿಸಿದಂತೆ ಮಾನವ ನಿರ್ಧಾರಗಳಿಗೆ ಗಮನ ಕೊಡುತ್ತಿಲ್ಲ  ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಅನೇಕ ತಜ್ಞರು ತಮ್ಮ ದೈನಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗಾಗಲೇ ಎಐ ಅನ್ನು ಅವಲಂಬಿಸಿದ್ದಾರೆ ಎಂದು ವರದಿ ಹೇಳಿದೆ.


ಇದನ್ನೂ ಓದಿ-ಇಡೀ ದೇಶವನ್ನೇ ಶ್ರೀಮಂತ ರಾಷ್ಟ್ರವನ್ನಾಗಿಸಲಿವೆ ಈ ಮೂರು ಜಿಲ್ಲೆಗಳು! ನೆಲದಡಿಯಲ್ಲಿ ಅಡಗಿದೆ ದೊಡ್ಡ ಚಿನ್ನದ ಗಣಿ!


ಮಾನವರು ತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ
ಸರ್ಟೆನ್ ರಿಸರ್ಚ್ ಸಂಸ್ಥಾಪಕ ಬ್ಯಾರಿ ಚುಡಾಕೋವ್ ಪ್ರಕಾರ, 2035 ರ ವೇಳೆಗೆ, ಯಂತ್ರಗಳು, ಬಾಟ್‌ ವ್ಯವಸ್ಥೆಗಳು ಮತ್ತು ಮಾನವರ ನಡುವೆ ವಾದದ ಪರಿಸ್ಥಿತಿ ಉದ್ಭವಿಸಬಹುದು. ಮುಂಬರುವ ದಿನಗಳಲ್ಲಿ ಮಾನವರು ಯಾವುದೇ ತಂತ್ರಜ್ಞಾನ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಜನರು ಸಂಪೂರ್ಣವಾಗಿ ಎಐ ಅನ್ನು ಅವಲಂಬಿಸಬೇಕಾಗುತ್ತದೆ ಎಂದು ಚುಡಾಕೋವ್ ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.