OMG! ದೀಪಾವಳಿ ನಂತರ ಈ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ WhatsApp
WhatsApp Will Stop Working On These Smartphones: ನೀವು ವಾಟ್ಸಾಪ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು. ಏಕೆಂದರೆ ದೀಪಾವಳಿ ನಂತರ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್ಫೋನ್ ಇದೆಯೇ? ಎಂಬುದನ್ನು ಈಗಲೇ ಪರಿಶೀಲಿಸಿ.
WhatsApp Will Stop Working On These Smartphones: ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮವಾಗಿರುವ ವಾಟ್ಸಾಪ್ ಅಕ್ಟೋಬರ್ 24 ರ ನಂತರ ಕೆಲವು ಸಾಧನಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಏತನ್ಮಧ್ಯೆ, ಐಒಎಸ್ 12 ನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸಾಧನಗಳ ಐಫೋನ್ ಬಳಕೆದಾರರಿಗೆ ಇದು ದೊಡ್ಡ ಆಘಾತವಾಗಿದೆ.
ಮೇ 2022 ರಲ್ಲಿ WABetaInfo ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ 24 ರ ನಂತರ iPhone 5 ಮತ್ತು iPhone 5C ಬಳಕೆದಾರರು ತಮ್ಮ ಸಾಧನಗಳಲ್ಲಿ ವಾಟ್ಸಾಪ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಿಮ್ಮ ಐಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ವಾಟ್ಸಾಪ್ ಗಾಗಿ ಪರ್ಯಾಯ ಅಪ್ಲಿಕೇಶನ್‌ಗಾಗಿ ನೋಡಲು ನಿಮಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ.
ಈ ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ:
iOS 10 ಮತ್ತು iOS 11 ಚಾಲನೆಯಲ್ಲಿರುವ ಐಫೋನ್‌ಗಳಿಗೆ WhatsApp ಬೆಂಬಲವನ್ನು ಕೊನೆಗೊಳಿಸುತ್ತಿದೆ. ಅಂದರೆ ಈ ರೀತಿಯ ಆಪರೇಟಿಂಗ್ ಸಿಸ್ಟಮ್ ಹೊಂದಿರುವ iPhone ನಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ. ಇದರೊಂದಿಗೆ, iPhone 5 ಮತ್ತು iPhone 5C ಬಳಕೆದಾರರಿಗೆ ವಾಟ್ಸಾಪ್ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ- WhatsApp New Feature: ಸೆಂಟ್ ಮೆಸೇಜ್ ಅನ್ನು ಎಡಿಟ್ ಮಾಡಬಹುದು
WABetaInfo ಈ ವಿಷಯವನ್ನು ಹೇಳಿದೆ:
WABetaInfo ಈ ವರ್ಷದ ಆರಂಭದಲ್ಲಿ, 'ದುರದೃಷ್ಟವಶಾತ್, ವಾಟ್ಸಾಪ್ ಅಕ್ಟೋಬರ್ 24, 2022 ರ ನಂತರ iOS ನ ಈ ಆವೃತ್ತಿಯನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ಕೆಲವು ಆಂತರಿಕ ಕಾರಣಗಳಿಗಾಗಿ, ವಾಟ್ಸಾಪ್ ಈಗ ಮುಂಬರುವ ತಿಂಗಳುಗಳಲ್ಲಿ ಕೆಲವು iOS ಆವೃತ್ತಿಗಳಿಗೆ (iOS 10 ಮತ್ತು iOS 11 )ಬೆಂಬಲವನ್ನು ಕೈಬಿಡಲು ಯೋಜಿಸಿದೆ. ವಾಟ್ಸಾಪ್ ಬಳಸುವುದನ್ನು ಮುಂದುವರಿಸಲು iOS ನ ಇತ್ತೀಚಿನ ಆವೃತ್ತಿಗೆ ನವೀಕರಿಸಿ' ಎಂದು ಹೇಳುವ ಸ್ಕ್ರೀನ್‌ಶಾಟ್ ಅನ್ನು ವರದಿ ಹಂಚಿಕೊಂಡಿದೆ.
ಐಫೋನ್‌ನಂತೆ, WhatsApp ಕೆಲವು Android ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. 4.1 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಫೋನ್‌ಗಳು WhatsApp ಸೇವೆಯ ಪ್ರಯೋಜನವನ್ನು ಪಡೆಯುವುದಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ ಅಂತಹ ಫೋನ್‌ನಿಂದ ನೀವು ಸಂದೇಶಗಳನ್ನು ಕಳುಹಿಸಲು, ಕರೆ ಮಾಡಲು ಅಥವಾ ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ, ಬಳಕೆದಾರರು ತಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ನವೀಕರಿಸಬೇಕು.
ಇದನ್ನೂ ಓದಿ- ವಾಟ್ಸಾಪ್‌ನ ಈ ಆವೃತ್ತಿಗಳನ್ನು ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ .! ತಪ್ಪಿದ್ದಲ್ಲ ಅಪಾಯ
ವಾಟ್ಸಾಪ್ ಏನು ಹೇಳಿದೆ?
'ನಾವು ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಬೆಂಬಲಿಸುವುದನ್ನು ನಿಲ್ಲಿಸುವ ಮೊದಲು, ನೇರವಾಗಿ ವಾಟ್ಸಾಪ್ ನಲ್ಲಿ ನಿಮಗೆ ಮುಂಚಿತವಾಗಿ ಸೂಚನೆ ನೀಡಲಾಗುವುದು ಮತ್ತು ಅಪ್‌ಗ್ರೇಡ್ ಮಾಡಲು ಕೆಲವು ಬಾರಿ ಜ್ಞಾಪಿಸುತ್ತದೆ. ಆದ್ದರಿಂದ, ನೀವು iOS 10 ಅಥವಾ iOS 11 ಅನ್ನು ಬಳಸುತ್ತಿದ್ದರೆ, ವಾಟ್ಸಾಪ್ ಬಳಸುವುದನ್ನು ಮುಂದುವರಿಸಲು ನೀವು iOS 12 ಗೆ ಅಪ್‌ಡೇಟ್ ಮಾಡಬೇಕಾಗುತ್ತದೆ. ವಾಟ್ಸಾಪ್ iOS 12 ಮತ್ತು ಮೇಲಿನ ಆಪರೇಟಿಂಗ್ ಸಿಸ್ಟಂನಲ್ಲಿ ಸರಾಗವಾಗಿ ರನ್ ಆಗುತ್ತದೆ ಎಂದು ತಿಳಿಸಿದೆ.
ವಾಟ್ಸಾಪ್ ಯಾವಾಗಲೂ ತನ್ನ ಬಳಕೆದಾರರಿಗೆ ಹೊಸ ಆವೃತ್ತಿಯನ್ನು ಅಪ್‌ಗ್ರೇಡ್ ಮಾಡಲು ಸಲಹೆ ನೀಡುತ್ತದೆ. ಇದರಿಂದ ಹೊಸ ವೈಶಿಷ್ಟ್ಯಗಳು ಲಭ್ಯವಿರುತ್ತವೆ ಮತ್ತು ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ನಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.