ನವದೆಹಲಿ : ಈದ್ ಅಂಗವಾಗಿ ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರಿಗೆ ಅದ್ಭುತ ಕೊಡುಗೆಯನ್ನು ಪರಿಚಯಿಸಿದೆ. 599 ರೂ.ಗಳ ಪ್ಲಾನ್ ನಲ್ಲಿ, ಜುಲೈ 21 ರಿಂದ ರಾತ್ರಿ ಅನಿಯಮಿತ ಡೇಟಾವನ್ನು (Unlimited data) ಪಡೆಯಲಿದ್ದಾರೆ. ಈದ್ ಅನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಆಫರ್ (BSNL offer) ನೀಡುತ್ತಿದೆ. ಜುಲೈ 21 ರಿಂದ ಗ್ರಾಹಕರಿಗೆ ರಾತ್ರಿ 12ಗಂಟೆಯಿಂದ ಮುಜಾನೆ 5 ರವರೆಗೆ ಅನಿಯಮಿತ ಡೇಟಾ ಸಿಗಲಿದೆ.  ಅಲ್ಲದೆ ಗ್ರಾಹಕರು ಹೈ ಸ್ಪೀಡ್ ಡೇಟಾವನ್ನು ಪಡೆಯುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಏನಿದು 599 ರೂ ಪ್ಲಾನ್ ?  
ಬಿಎಸ್ಎನ್ಎಲ್ (BSNL Plans) ನ ಈ ಪ್ಲಾನ್ ನಲ್ಲಿ ಅನಿಯಮಿತ ವಾಯ್ಸ್ ಕಾಲ್ ಇದ್ದು, ಪ್ರತಿದಿನ 5 ಜಿಬಿ ಡೇಟಾ ಸಹ ಲಭ್ಯವಿದೆ. ದೈನಂದಿನ ಡೇಟಾ ಮುಗಿದಿದ್ದರೆ, 4kbps ಸ್ಪೀಡ್ನಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಪ್ಲಾನ್ ಅಡಿಯಲ್ಲಿ 100 ಎಸ್‌ಎಂಎಸ್ (SMS) ಲಭ್ಯವಿದೆ. ಎಲ್ಲಾ ನೆಟ್‌ವರ್ಕ್‌ ಗೂ ಉಚಿತವಾಗಿ SMS ಕಳುಹಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಬಿಎಸ್ಎನ್ಎಲ್ ಟ್ಯೂನ್ಸ್ ಮತ್ತು ಉಚಿತ ಜಿಂಗ್ ಮ್ಯೂಸಿಕಲ್ ಅಪ್ಲಿಕೇಶನ್ ಸಹ ಲಭ್ಯವಿದೆ.


ಇದನ್ನೂ ಓದಿ :Realme C21Y: ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್ಮೆ, ಇದರ ಬೆಲೆ, ವೈಶಿಷ್ಟ್ಯ ತಿಳಿಯಿರಿ


ರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ಉಚಿತ ಇಂಟರ್ನೆಟ್ :
ಈ ಪ್ಲಾನ್ ನಲ್ಲಿ ಜುಲೈ 21 ರಿಂದ, ರಾತ್ರಿ ನಿಯಮಿತ ಡೇಟಾ ಸಿಗಲಿದೆ. ಆದರೆ ಇದರ ಲಾಭವನ್ನು ವೈಯಕ್ತಿಕ ಬಳಕೆಗೆ ಮಾತ್ರ ಬಳಸಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ (BSNL)ತಿಳಿಸಿದೆ. ಈ ಯೋಜನೆಯನ್ನು ವಂಚನೆ ಅಥವಾ ವಾಣಿಜ್ಯ ಬಳಕೆಗಾಗಿ ಬಳಸಿದರೆ, ಕಂಪನಿಯು ಅದನ್ನು ನಿಲ್ಲಿಸುತ್ತದೆ.


ಲಭ್ಯವಿದೆ ಇನ್ನೂ ಹೆಚ್ಚಿಯ ಕೊಡುಗೆಗಳು : 
ಬಿಎಸ್ಎನ್ಎಲ್ ಗೂಗಲ್ ಸ್ಮಾರ್ಟ್ ಡಿವೈಸ್ ಗಳನ್ನೂ  ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಗೂಗಲ್ ನೆಸ್ಟ್ ಮಿನಿ, ಗೂಗಲ್ ನೆಸ್ಟ್ ಹಬ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಗೂಗಲ್ ನೆಸ್ಟ್ ಹಬ್ (google nest hub) ಅನ್ನು 199 ರೂಗಳಿಗೆ ಮತ್ತು ಗೂಗಲ್ ನೆಸ್ಟ್ (Google nest mini) ಮಿನಿ 99 ರೂಗಳಿಗೆ ಖರೀದಿಸಬಹುದು.


ಇದನ್ನೂ ಓದಿ : Reliance Jio: ಜಿಯೋ ತಂದಿದೆ ಅತ್ಯುತ್ತಮ ಅಗ್ಗದ ಆಫರ್, 1 ಜಿಬಿ ಡೇಟಾ 11 ರೂ.ಗಳಿಗೆ ಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.