ಈ ಓಟಿಟಿ ವೇದಿಕೆಯ ಮೇಲೆ 20 ದಿನಗಳವರೆಗೆ ನಿತ್ಯ ಹೊಸ ಚಿತ್ರ ನೋಡಲು ಸಿಗಲಿದೆ, ಟೋಟಲ್ ಫ್ರೀ!
Jio Film Festival: ಓಟಿಟಿ ವೇದಿಕೆಗಳ ಈ ಕಾಲದಲ್ಲಿ ಕ್ಷಣ ಕ್ಷಣಕ್ಕೂ ಸಿನಿಮಾ ನಿಮ್ಮೊಂದಿಗಿವೆ. ಸಿನಿಮಾ ಹಾಲ್ಗಳು ಮತ್ತು ಟಿವಿಗಳು ಸಾಕಷ್ಟು ಹಿಂದೆ ಬಿದ್ದಿವೆ. OTT ಎಲ್ಲವನ್ನೂ ಬದಲಾಯಿಸಿದೆ. ಈಗ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಚಿತ್ರಗಳ ಪ್ರೀಮಿಯರ್ಗಳು ನಿರಂತರವಾಗಿ ನಡೆಯುತ್ತಿವೆ. ಸೆಪ್ಟೆಂಬರ್ನಲ್ಲಿ ಹೊಸ ಆರಂಭ ಬರಲಿದೆ. (Technology News In Kannada)
OTT ಪ್ಲಾಟ್‌ಫಾರ್ಮ್‌ಗಳ ನಡುವಿನ ಸ್ಪರ್ಧೆಯು ಕ್ರಮೇಣ ಹೆಚ್ಚುತ್ತಿದೆ. ಪ್ರತಿಯೊಂದು ವೇದಿಕೆಗಳು ಆದಷ್ಟು ಹೆಚ್ಚು ಪ್ರೇಕ್ಷಕರನ್ನು ಸಂಪರ್ಕಿಸಲು ಬಯಸುತ್ತಿವೆ. ಕೆಲವು ತಿಂಗಳ ಹಿಂದೆ ದೇಶದಲ್ಲಿ ಒಟಿಟಿ ರೇಸ್‌ಗೆ ಸೇರ್ಪಡೆಗೊಂಡ ಜಿಯೋ ಸಿನಿಮಾ ಅದ್ಭುತ ಚಲನಚಿತ್ರೋತ್ಸವವನ್ನು ಆಯೋಜಿಸಿದೆ, ಇದರಲ್ಲಿ ಪ್ರೇಕ್ಷಕರು ಇಪ್ಪತ್ತು ದಿನಗಳ ಕಾಲ ಪ್ರತಿದಿನ 20 ಹೊಸ ಚಲನಚಿತ್ರಗಳ ಮೊದಲ ಪ್ರದರ್ಶನವನ್ನು ನೋಡಲಿದ್ದಾರೆ. ಈ ಚಲನಚಿತ್ರೋತ್ಸವ ಎಲ್ಲರಿಗೂ ಉಚಿತವಾಗಿರುತ್ತದೆ, ಅಂದರೆ, ಅದನ್ನು ವೀಕ್ಷಿಸಲು ಜಿಯೋ ಸಿನಿಮಾದ ಚಂದಾದಾರಿಕೆಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ಜಿಯೋ ಸಿನಿಮಾ ಫಿಲ್ಮ್ ಫೆಸ್ಟ್ ಸೆಪ್ಟೆಂಬರ್ 29 ರಿಂದ ಆರಂಭವಾಗಲಿದೆ ಮತ್ತು ಪ್ರತಿದಿನ ಹೊಸ ಚಿತ್ರವು ಪ್ರೀಮಿಯರ್ ಆಗಲಿದೆ. ವಿಶೇಷವೆಂದರೆ ಈ ಚಿತ್ರಗಳು ವಿವಿಧ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿವೆ.
ಇದನ್ನೂ ಓದಿ -ತಿಂಗಳಿಗೆ ಆದಾಯ ತಂದು ಕೊಡುತ್ತೇ ನಿಮ್ಮ ಹಳೆ ಸ್ಮಾರ್ಟ್ ಫೋನ್, ಇಂದೇ ಈ ಟ್ರಿಕ್ಸ್ ತಿಳಿದುಕೊಳ್ಳಿ!
ಖ್ಯಾತ ಹೆಸರುಗಳು
ಜಿಯೋ ಸಿನಿಮಾ ಚಿತ್ರೋತ್ಸವದ ಟೀಸರ್ ಅನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಾವು ಎಲ್ಲಾ ಪ್ರಶಸ್ತಿ ವಿಜೇತ ಚಿತ್ರಗಳ ಒಂದು ನೋಟವನ್ನು ನೋಡಬಹುದು. ಈ ಚಿತ್ರಗಳಲ್ಲಿ ಬಾಲಿವುಡ್‌ನ ಅನೇಕ ಪ್ರಸಿದ್ಧ ಮುಖಗಳಿವೆ. ಅವರಲ್ಲಿ ಸುಪ್ರಿಯಾ ಪಾಠಕ್, ನಾಸಿರುದ್ದೀನ್ ಶಾ, ಅಮಿತ್ ಸಾಧ್, ಅದಾ ಶರ್ಮಾ, ನವಾಜುದ್ದೀನ್ ಸಿದ್ದಿಕಿ, ಆಯುಷ್ ಮೆಹ್ರಾ, ಜತಿನ್ ಶರ್ಮಾ, ಸಾಹಿಲ್ ಮೆಹ್ತಾ ಮುಂತಾದ ಪ್ರತಿಭೆಗಳನ್ನು ಕಾಣಬಹುದು. ಚಿತ್ರಗಳ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅವುಗಳ ಒಂದು ಝಲಕ್ ಅನ್ನು ನೀವು ಟೀಸರ್ನಿಂದ ನೋಡಬಹುದಾಗಿದೆ. ನಾಸಿರುದ್ದೀನ್ ಶಾ ಲಾರ್, ಫೋನ್ ಕಾಲ್, ಬಿಫೋರ್ ವಿ ಡೈ, ದಿ ಡಾಟರ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದಾ ಶರ್ಮಾ ಕೊಫುಕು ಮತ್ತು ನವಾಜುದ್ದೀನ್ ಸಿದ್ದಿಕಿ ಡ್ಯಾಮಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Chandrayaan 3 Update: ನಿದ್ರೆಯಿಂದ ಯಾವಾಗ ಎಚ್ಚೆತ್ತುಕೊಳ್ಳಲಿದೆ ಪ್ರಗ್ಯಾನ್, ಇಸ್ರೋ ನೀಡಿದ ಮಹತ್ವದ ಅಪ್ಡೇಟ್ ಇಲ್ಲಿದೆ!
ನಿಜ ಜೀವನದ ಕಥೆಗಳು
ಸುಪ್ರಿಯಾ ಪಾಠಕ್ ಗ್ಯಾಂಗ್‌ಸ್ಟರ್ ಗಂಗಾ ಚಿತ್ರದಲ್ಲಿದ್ದಾರೆ. ಆದರೆ, ಅರ್ಮಾಂಡ್ ಚಿತ್ರದಲ್ಲಿ ರಜತ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ. ದಿ ಲಾಸ್ಟ್ ಎನ್ವಲಪ್‌ನಲ್ಲಿ ಅನ್ನು ಕಪೂರ್ ಮತ್ತು ಶೀಬಾ ಚಡ್ಡಾ ನಟಿಸಿದ್ದಾರೆ, ಇದು ಮಕ್ಕಳ ಹೃದಯ ಸ್ಪರ್ಶಿ ಕಥೆಯಾಗಿದೆ. ಈ ಚಿತ್ರೋತ್ಸವದಲ್ಲಿ ಬೇಬಾಕ್ ಚಿತ್ರ ಕೂಡ ನೋಡಲು ಸಿಗಲಿದೆ. ಇದು ಭಾರತೀಯ ಮುಸ್ಲಿಂ ಮಹಿಳೆ ಮತ್ತು ಅವಳ ಸಮಸ್ಯೆಗಳ ಕಥೆಯನ್ನು ಹೇಳುತ್ತದೆ. ಘುಸ್ಫೈಟ್ ಚಿತ್ರವು ಭಾರತೀಯ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅವರ ನಿಜ ಜೀವನದ ಕಥೆಯಿಂದ ಪ್ರೇರಿತವಾಗಿದೆ. ಉತ್ಸವದಲ್ಲಿ ದಿ ಕಾಮೇಡಿಯನ್ ಚಿತ್ರ ಓರ್ವ ಖಿನ್ನ ಮತ್ತು ಹಳೆಯ ಹಾಸ್ಯನಟನ ಕಥೆಯಾಗಿದೆ, ಅವನ ಜೀವನದಲ್ಲಿ ಸಂತೋಷಕ್ಕಾಗಿ ಏನೂ ಉಳಿದಿಲ್ಲ. ಇಲ್ಲಿ ಸತೀಶ್ ಕೌಶಿಕ್ ಹಾಸ್ಯನಟನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರೋತ್ಸವ ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗಿ ಅಕ್ಟೋಬರ್ 18 ರವರೆಗೆ ನಡೆಯಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ