ನವದೆಹಲಿ: ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್ ಪ್ಲಸ್ ಮಾರುಕಟ್ಟೆಯಲ್ಲಿ ತನ್ನ ಹೊಸ ಫೋನ್ ಒನ್ ಪ್ಲಸ್ ಏಸ್ ಅನ್ನು ಅನಾವರಣಗೊಳಿಸಿದೆ. ಫೇಸ್‌ಲಿಫ್ಟ್‌ನೊಂದಿಗೆ ಬರುವ ಈ ಸ್ಮಾರ್ಟ್‌ಫೋನ್ ಅನ್ನು ಹೊಸ ಮೀಡಿಯಾ ಟೆಕ್ ಡೈಮೆನ್ಶನ್ 8100-ಮ್ಯಾಕ್ಸ್ ಪ್ರೀಮಿಯಂ ಮಧ್ಯಮ ಶ್ರೇಣಿಯ ಎಸ್ಒಸಿ ಜೊತೆಗೆ ಜೋಡಿಸಲಾಗಿದೆ. ವಿಶಿಷ್ಟ ಲುಕ್ ನೊಂದಿಗೆ ಬರುವ ಈ ಫೋನಿನಲ್ಲಿ  ಎಲ್ಇಡಿ ಫ್ಲ್ಯಾಷ್  ಜೊತೆಗೆ ಟ್ರಿಪಲ್ ಕ್ಯಾಮರಾವನ್ನು ಒದಗಿಸಲಾಗಿದೆ. ಫೋನ್ ಬಿಗ್ ಸ್ಕ್ರೀನ್, ಸ್ಟ್ರಾಂಗ್ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. 


COMMERCIAL BREAK
SCROLL TO CONTINUE READING

ಒನ್ ಪ್ಲಸ್ ಏಸ್ ಫೋನಿನ ವೈಶಿಷ್ಟ್ಯ:
ಒನ್ ಪ್ಲಸ್ ಏಸ್ ಎಫ್ಎಚ್ಡಿ+ ರೆಸಲ್ಯೂಶನ್ ಹೊಂದಿರುವ 6.7-ಇಂಚಿನ ಒಎಲ್ಇಡಿ ಡಿಸ್ಪ್ಲೇ ಬೆಂಬಲಿಸುತ್ತದೆ. ಇದು 360Hz ಟಚ್ ಸ್ಯಾಂಪ್ಲಿಂಗ್ ರೇಟ್, 720Hz ಗೇಮಿಂಗ್ ಟಚ್ ಸ್ಯಾಂಪ್ಲಿಂಗ್ ರೇಟ್ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಸಹ ಬೆಂಬಲಿಸುತ್ತದೆ. ಇದು 100% ಡಿಸಿಐ ಪಿ 3 ಬಣ್ಣದ ಹರವು, HDR10+ ಬೆಂಬಲ ಮತ್ತು 1000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಮುಂಭಾಗದ ಕ್ಯಾಮೆರಾಕ್ಕಾಗಿ ಪರದೆಯು ಮೇಲಿನ ಮಧ್ಯದಲ್ಲಿ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿದೆ ಎನ್ನಲಾಗಿದೆ.


ಒನ್ ಪ್ಲಸ್ ಏಸ್ ನಲ್ಲಿ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 8100-MAX ಎಸ್ಒಸಿ ಆಗಿದೆ. ಹೊಸ ಎಸ್ಒಸಿ 12ಜಿಬಿ ಯ ಎಲ್ಪಿಡಿಡಿಆರ್ 5 ಜಿಬಿ ರಾಮ್ ಮತ್ತು 512ಜಿಬಿ ಯುಎಫ್ಎಸ್ 3.1 ಸಂಗ್ರಹಣೆಯೊಂದಿಗೆ ಬರುತ್ತದೆ. ಆನ್‌ಬೋರ್ಡ್ ಗ್ರಾಫಿಕ್ಸ್ ಜೊತೆಗೆ, ಇಂಗೇಮ್ ಫ್ರೇಮ್‌ರೇಟ್‌ಗಳನ್ನು ಹೆಚ್ಚಿಸಲು ಒನ್ ಪ್ಲಸ್  ಸಾಧನದಲ್ಲಿ ಸ್ವತಂತ್ರ ಗ್ರಾಫಿಕ್ಸ್ ಚಿಪ್ ಅನ್ನು ಸಹ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ- ಫೋನ್ ಅನ್ನು ಮೂರು ಬಾರಿ ಫುಲ್ ಚಾರ್ಜ್ ಮಾಡಬಲ್ಲ ಪವರ್‌ಬ್ಯಾಂಕ್ ಬೆಲೆ, ವೈಶಿಷ್ಟ್ಯ ತಿಳಿಯಿರಿ


ಒನ್ ಪ್ಲಸ್ ಏಸ್ ಫೋನಿನ ಬೆಲೆ:
ಒನ್ ಪ್ಲಸ್ ಏಸ್ 8ಜಿಬಿ + 128ಜಿಬಿ ರೂಪಾಂತರದ ಬೆಲೆ – 2499 ಯುವಾನ್ (ರೂ. 29,509), ಒನ್ ಪ್ಲಸ್ ಏಸ್ 8ಜಿಬಿ ರಾಮ್ + 256ಜಿಬಿ ರೂಪಾಂತರದ ಬೆಲೆ – 2699 ಯುವಾನ್ (ರೂ. 31,855), ಒನ್ ಪ್ಲಸ್ ಏಸ್ 12ಜಿಬಿ  + 256ಜಿಬಿ ರೂಪಾಂತರ ಬೆಲೆ – 2999 ಯುವಾನ್ (ರೂ. 35,439) ಆಗಿದೆ. 


ಒನ್ ಪ್ಲಸ್ ಏಸ್ ಫೋನಿನ ಬ್ಯಾಟರಿ:
ಒನ್ ಪ್ಲಸ್ ಏಸ್ ಸ್ಮಾರ್ಟ್‌ಫೋನ್ ಬಾಕ್ಸ್ ಹೊರಗೆ ಆಂಡ್ರಾಯ್ಡ್ 12 ಆಧಾರಿತ ಕಲರ್ ಒಎಸ್ 12 ಅನ್ನು ರನ್ ಮಾಡುತ್ತದೆ. 4,500mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಲಭ್ಯವಿದ್ರುವ ಈ ಫೋನ್150W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು ಗ್ರಾಹಕರು ಈ ಸಾಧನವನ್ನು  0% ರಿಂದ 100% ವರೆಗೆ ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. 


ಇದನ್ನೂ ಓದಿ- ಎಂಟು ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು


ಸಾಧನವು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ ಬರುತ್ತದೆ ಮತ್ತು ಒನ್ ಪ್ಲಸ್ನ ಇತಿಹಾಸದಲ್ಲಿ ಅತಿದೊಡ್ಡ ಕೂಲಿಂಗ್ ಪ್ರದೇಶದೊಂದಿಗೆ X- ಆಕ್ಸಿಸ್ ಲೀನಿಯರ್ ಮೋಟಾರ್ ಮತ್ತು ಆವಿ ಚೇಂಬರ್ ಅನ್ನು ಒಳಗೊಂಡಿದೆ. ಫೋನಿನಲ್ಲಿ 5ಜಿ, ಡ್ಯುಯಲ್ 4ಜಿ ಎಲ್ಟಿಇ, ವೈ-ಫೈ 6ಇ, ಬ್ಲೂಟೂತ್ 5.2, ಜಿಪಿಎಸ್, ಎನ್ಎಫ್ಸಿ  ಮತ್ತು  ಯುಎಸ್ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್ ಮತ್ತು ಡೇಟಾ ಸಿಂಕ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸೇರಿವೆ. 


ಒನ್ ಪ್ಲಸ್ ಏಸ್ ಕ್ಯಾಮೆರಾ ವೈಶಿಷ್ಟ್ಯ:
ಒನ್ ಪ್ಲಸ್ ಏಸ್  50-ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ (OIS, 4K, ರಾತ್ರಿ ಮೋಡ್ ಮತ್ತು ಹೆಚ್ಚಿನವುಗಳೊಂದಿಗೆ) ಅನ್ನು ಹೊಂದಿದೆ. ಪ್ರಾಥಮಿಕ ಸಂವೇದಕದೊಂದಿಗೆ, ಫೋನ್ 8-ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್355 ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕವನ್ನು ತರುತ್ತದೆ. ಮುಂಭಾಗದಲ್ಲಿ, ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 16-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ISOCELL S5K3P9SP ಲೆನ್ಸ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.