Online Fraud: ಮಕ್ಕಳಿಗೆ ಫೋನ್ ಕೊಡುವ ಮುನ್ನ ಎಚ್ಚರ, ಎಚ್ಚರ! ಖಾಲಿಯಾದೀತು ಖಾತೆ!
Online Fraud: ಮಕ್ಕಳಿಗೆ ಫೋನ್ ನೀಡುವುದರಿಂದ ಒಂದೆಡೆ ಅವರ ಕಣ್ಣುಗಳ ಆರೋಗ್ಯ, ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಇದು ನಿಮ್ಮ ಖಾತೆಯನ್ನು ಕೂಡ ಖಾಲಿ ಮಾಡಬಹುದು. ಇಂತಹುದ್ದೇ ಒಂದು ಘಟನೆಯಲ್ಲಿ ಮಹಿಳೆಯೊಬ್ಬಳು 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
Online Fraud: ಈ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಹೆಚ್ಚಾಗಿ ಗ್ಯಾಜೆಟ್ಸ್ ಗಳಿಗೆ ವ್ಯಸನಿಯಾಗುತ್ತಿದ್ದಾರೆ. ಇದು ವಿಡಿಯೋ ನೋಡುವುದಿರಲಿ ಇಲ್ಲವೇ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗುವುದಿರಲಿ ಅವರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲ, ಇದು ಪೋಷಕರ ಖಾತೆಯನ್ನು ಕೂಡ ಖಾಲಿ ಮಾಡಿಸಬಹುದು. ಅಂತಹುದ್ದೇ ಆನ್‌ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ನಿಂದ ಮಹಿಳೆಗೆ 1 ಲಕ್ಷರೂ. ಪಂಗನಾಮ ಹಾಕಲಾಗಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯ ಮಗ. ವಾಸ್ತವವಾಗಿ, ಮಹಿಳೆಯ 14 ವರ್ಷದ ಮಗ ಸ್ಮಾರ್ಟ್‌ಫೋನ್‌ನಲ್ಲಿ ಭವಿಷ್ಯ ಹೇಳುವ ಆಟದಲ್ಲಿ ಭಾಗವಹಿಸಿದ್ದನು. ಇದರ ಲಾಭ ಪಡೆದ ಆ ಆನ್‌ಲೈನ್ ವೇದಿಕೆ ಮಹಿಳೆಯ ಖಾತೆಯಿಂದ 1 ಲಕ್ಷ ರೂ. ಲಪಟಾಯಿಸಿದೆ. ಈ ಕುರಿತಂತೆ ಮಹಿಳೆ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ- Google Photos: ಗೂಗಲ್ ಫೋಟೋಸ್‌ನಲ್ಲಿ ಫೋಟೋ ಡಿಲೀಟ್ ಆಗಿದ್ಯಾ? ಚಿಂತೆಬಿಡಿ ಈ ರೀತಿ ಮರಳಿ ಪಡೆಯಿರಿ
ಏನಿದು ಪ್ರಕರಣ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮಹಿಳೆ, ಸರೋಜ ಅವರ ಮಗ ಸುಮಿತ್ ಎಂಬಾತ ಪ್ರೋಬೋ ಎಂಬ ಆನ್‌ಲೈನ್ ಗೇಮ್‌ನಲ್ಲಿ ಆಟವಾಡುತ್ತಿದ್ದನು. ಫೆಬ್ರವರಿ 16ರಂದು ಈ ಗೇಮ್‌ನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಸುಮಿತ್ ಈ ಪ್ರಶ್ನೆಗಳಿಗೆ ಉತ್ತರಿಸಿದ ಸುಮಿತ್ ಮೊದಲಿಗೆ ₹ 40 ಬಹುಮಾನವನ್ನು ಗೆದ್ದಿದ್ದಾರೆ. ಇದರಿಂದ ಸಂತಸಗೊಂಡ ಸುಮಿತ್ ಫೆಬ್ರವರಿ 26ರ ರಾತ್ರಿ ಮತ್ತೆ ಇದೇ ಗೇಮ್ ಆಡಿದ್ದಾನೆ. ಆಗಲೂ ₹ 40 ಬಹುಮಾನವನ್ನು ಗೆದ್ದಿದ್ದಾನೆ.
ಇದರ ಮರುದಿನವೇ ಎಂದರೆ ಫೆಬ್ರವರಿ 27ರಂದು ಸರೋಜ ಅವರ ಮೊಬೈಲ್‌ಗೆ ಒಟಿಪಿ ಬಂದಿತ್ತು. ಕೈಯಲ್ಲಿ ಮೊಬೈಲ್ ಹಿಡಿದಿದ್ದ ಸುಮಿತ್ ಗೊತ್ತಿಲ್ಲದೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗೆ ಒಟಿಪಿಯನ್ನು ನೀಡಿದ್ದಾನೆ. ಬಳಿಕ ಸರೋಜ ಅವರ ಖಾತೆಯಿಂದ ₹1 ಲಕ್ಷ ಹಣ ಡ್ರಾ ಆಗಿದೆ. ತಕ್ಷಣವೇ ಇದು ವಂಚನೆಯಿಂದ ಆಗಿರಬಹುದು ಎಂದು ಅರ್ಥ ಮಾಡಿಕೊಂಡ ಮಹಿಳೆಗೆ ಕತ್ಲಾಲ್ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ- WhatsApp Scam: ಹೂಡಿಕೆ ಮಾಡಿ ಹಠಾತ್ ಶ್ರೀಮಂತರಾಗುರಿವಿರಿ... ನೀವು ಇಂತಹ ಮೆಸೇಜ್ ಸ್ವೀಕರಿಸಿದ್ದರೆ ಹುಷಾರಾಗಿರಿ...!
ಗಮನಾರ್ಹವಾಗಿ, ಪ್ರೋಬೋ ಇಂಡಿಯಾ ಟೆಕ್ನಾಲಜೀಸ್ ವಿರುದ್ಧ ತೆರಿಗೆ ವಂಚನೆ ಹಾಗೂ ತಪ್ಪು ಮಾಹಿತಿ ನೀಡಿದ ಆರೋಪವಿದೆ. ಜೂಜಾಟವನ್ನು ಉತ್ತೇಜಿಸಿದ್ದಕ್ಕಾಗಿ ಮುಂಬೈ ಪೊಲೀಸರು ಜುಲೈ 2022 ರಲ್ಲಿ ಪ್ರೋಬೋ ವಿರುದ್ಧ ಕ್ರಮ ಕೈಗೊಂಡಿದ್ದರು. ಇದಲ್ಲದೆ, ಹರಿಯಾಣ ತೆರಿಗೆ ಇಲಾಖೆ ಪ್ರೋಬೋ ಮೀಡಿಯಾ ಟೆಕ್ನಾಲಜೀಸ್‌ಗೆ ₹ 1,500 ಕೋಟಿ ನೋಟಿಸ್ ಕಳುಹಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.