ನವದೆಹಲಿ: ಪ್ರಸಿದ್ಧ ಸ್ಮಾರ್ಟ್‍ಫೋನ್‍ ತಯಾರಕ ಕಂಪನಿ OPPO ಇದೀಗ Find X6 ಮತ್ತು X6 Pro ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ವರದಿಯಾಗಿದೆ. ಬಹುಶಃ ಈ ಸ್ಮಾರ್ಟ್‍ಫೋನ್‍ಗಳು ಶೀಘ್ರವೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸ್ಮಾರ್ಟ್‍ಫೋನ್‍ಗಳ ಕೆಲವು ಪ್ರಮುಖ ಮಾಹಿತಿಗಳು ಸೋರಿಕೆಯಾಗಿವೆ.  


COMMERCIAL BREAK
SCROLL TO CONTINUE READING

ಮಾಹಿತಿ ಪ್ರಕಾರ OPPOದ ಮುಂಬರುವ ಸರಣಿಯ ಸ್ಮಾರ್ಟ್‍ಫೋನ್‍ಗಳ ಕೆಲ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು ಈಗಾಗಲೇ ಬಹಿರಂಗವಾಗಿದೆ. Find X6 Pro ಸ್ಮಾರ್ಟ್‍ಫೋನ್‍ನಲ್ಲಿ 1-ಇಂಚಿನ Sony IMX989 ಸೆನ್ಸಾರ್ ಬಳಸಲಾಗಿದೆ ಎಂಬ ಮಾಹಿತಿ ದೊರೆತಿದೆ.


ಇದನ್ನೂ ಓದಿ: ಸರ್ಕಾರದಿಂದ ಉಚಿತ ಸ್ಮಾರ್ಟ್‌ಫೋನ್! ಮೂರು ವರ್ಷದವರೆಗೆ ಇಂಟರ್ನೆಟ್ ಮತ್ತು ಕರೆ ಸೌಲಭ್ಯ ಕೂಡಾ ಫ್ರೀ


Find X6 Proನಲ್ಲಿ ಇದು ವಿಶೇಷವಾಗಿರುತ್ತದೆ


Oppoದ Find X6 Pro ಸ್ಮಾರ್ಟ್‍ಫೋನ್‍ ಅತ್ಯುನ್ನತ ಆವೃತ್ತಿಯು 1-ಇಂಚಿನ Sony IMX989 ಸೆನ್ಸಾರ್ ಹೊಂದಿದೆ ಎಂದು ಪ್ರಸಿದ್ಧ ಟಿಪ್‌ಸ್ಟರ್ ಐಸ್ ಯೂನಿವರ್ಸ್ ಟ್ವೀಟ್‌ನಲ್ಲಿ ಬಹಿರಂಗಪಡಿಸಿದೆ. ಈ ಸೆನ್ಸಾರ್ ಎಲ್ಲಾ ISOCELL ಉತ್ತಮ ಗುಣಮಟ್ಟದೊಂದಿಗೆ ಬರಲಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುತ್ತದೆ ಎಂದು ಹೇಳಲಾಗಿದೆ. DSLR ಕ್ಯಾಮೆರಾಗಳಿಗೆ ಸೆಡ್ಡು ಹೊಡೆಯುವ ರೀತಿ  ಈ ಸ್ಮಾರ್ಟ್‍ಫೋನ್‍ಗಳ ಕ್ಯಾಮೆರಾಗಳು ಇರುತ್ತವೆ ಎಂದು ಹೇಳಲಾಗಿದೆ.


Find X6 Pro 1-ಇಂಚಿನ ಕ್ಯಾಮೆರಾ ಸೆನ್ಸಾರ್ ಹೊಂದಿರುತ್ತದೆ


Find X6 Proನ ಮುಖ್ಯ ಕ್ಯಾಮೆರಾವು 1 ಇಂಚಿನ ಸೆನ್ಸಾರ್‍ ಹೊಂದಿರುತ್ತದೆ. ಇದಲ್ಲದೆ ಮುಂಬರುವ ಹ್ಯಾಂಡ್‌ಸೆಟ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಪ್ರಾಥಮಿಕ ಕ್ಯಾಮೆರಾವು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 32-ಮೆಗಾಪಿಕ್ಸೆಲ್ ಟೆಲಿಫೋಟೋ ಘಟಕದೊಂದಿಗೆ ಇರುತ್ತದೆ ಅನ್ನೋ ಮಾಹಿತಿ ದೊರೆತಿದೆ.


ಇದನ್ನೂ ಓದಿ: iPhone 14 ನ್ನು ಅರ್ಧ ಬೆಲೆಗೆ ಖರೀದಿಸುವ ಸುವರ್ಣಾವಕಾಶ! ಅದೂ ಬ್ರಾಂಡ್ ನ್ಯೂ ಫೋನ್... ಸೆಕೆಂಡ್ ಹ್ಯಾಂಡ್ ಅಲ್ಲ


ಅತ್ಯುತ್ತಮ ಕ್ಯಾಮೆರಾ


ವೆನಿಲ್ಲಾ Find X6 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಹೊಂದಿದೆ ಎಂದು ವರದಿಯಾಗಿದೆ. ಈ ಸಾಧನವು 50-ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್, 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಘಟಕವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇತ್ತೀಚಿನ ವರದಿಯ ಪ್ರಕಾರ, Find X6 1.5K ಡಿಸ್ಪ್ಲೇ ರೆಸಲ್ಯೂಶನ್‌ನೊಂದಿಗೆ ಬರುತ್ತದೆ ಮತ್ತು ಪ್ರೊ ಮಾದರಿಯು 2K ರೆಸಲ್ಯೂಶನ್ ನೀಡುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್‌ಕಾಮ್‌ನ ಮುಂಬರುವ ಸ್ನಾಪ್‌ಡ್ರಾಗನ್ 8+ Gen2 ನಿಂದ ಕಾರ್ಯನಿರ್ವಹಿಸಬಹುದು. ಮೂಲ ಮಾದರಿಯು ಸ್ನಾಪ್‌ಡ್ರಾಗನ್ 8+ Gen1 ನೊಂದಿಗೆ ಬರುವ ಸಾಧ್ಯತೆಯಿದೆ. OPPO Find X6 ಸರಣಿಯು ಬಹುಶಃ ಮುಂದಿನ ವರ್ಷ(2023) ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.