IRCTC-Swiggy Deal: ಈಗ ರೈಲು ಪ್ರಯಾಣದ ವೇಳೆ ನಿಮ್ಮ ನೆಚ್ಚಿನ ಆಹಾರವನ್ನು ಆನಂದಿಸಬಹುದು!
IRCTC-Swiggy Deal: ನೀವು ರೈಲು ಪ್ರಯಾಣದ ವೇಳೆ ರೈಲಿನಲ್ಲಿ ಸಿಗುವ ಇಲ್ಲವೇ, ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುವ ಆಹಾರವನ್ನು ಸೇವಿಸಲು ಇಚ್ಛಿಸಿದ್ದರೆ ಚಿಂತಿಸಬೇಕಿಲ್ಲ. ಇನ್ನೂ ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೂ ಸ್ವಿಗ್ಗಿ ಮೂಲಕ ನಿಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು.
IRCTC-Swiggy Deal: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುವ ಆಹಾರವನ್ನು ಸೇವಿಸದಿದ್ದರೆ ಚಿಂತಿಸಬೇಕಿಲ್ಲ. ಬದಲಿಗೆ ನೀವು ರೈಲು ಪ್ರಯಾಣದ ಸಂದರ್ಭದಲ್ಲಿ ಸ್ವಿಗ್ಗಿ ಮೂಲಕ ನಿಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು. ಈ ನಿಟ್ಟಿನಲ್ಲಿ ಐಆರ್‌ಸಿಟಿಸಿ ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಹಾಗಾಗಿ, ಈಗ ನೀವು ರೈಲು ಪ್ರಯಾಣದ ಸಂದರ್ಭದಲ್ಲಿ ಸ್ವಿಗ್ಗಿ ಮೂಲಕ ನಿಮ್ಮ ನೆಚ್ಚಿನ ಬಿಸಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.
ಈ ನಿಲ್ದಾಣಗಳಲ್ಲಷ್ಟೇ ಲಭ್ಯವಾಗಲಿದೆ ಸೌಲಭ್ಯ:
ಐಆರ್‌ಸಿಟಿಸಿಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಆಹಾರ ಆರ್ಡರ್ ಮಾಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಭಾರತೀಯ ರೈಲ್ವೆ ಈ ಒಪ್ಪಂದವನ್ನು ಮಾಡಿದೆ. ಈ ಸೌಲಭ್ಯವು ಭಾರತೀಯ ರೈಲ್ವೆಯ A1 ಮತ್ತು A2 ದರ್ಜೆಯ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ಇದನ್ನೂ ಓದಿ- Google Chrome Features: ಗೂಗಲ್ ಕ್ರೋಮ್‌ನಲ್ಲಿ ಒಮ್ಮೆಗೆ ಮೂರು ವೈಶಿಷ್ಟ್ಯಗಳನ್ನು ಪರಿಚಯಿಸಿದ ಗೂಗಲ್
ಗಮನಾರ್ಹವಾಗಿ, ದೇಶಾದ್ಯಂತ A1 ಮತ್ತು A2 ದರ್ಜೆಯ 350ಕ್ಕೂ ಹೆಚ್ಚು ನಿಲ್ದಾಣಗಳಿವೆ. ಈ ನಿಲ್ದಾಣಗಳಲ್ಲಿ ರೈಲು ಬಹಳ ಹೊತ್ತು ನಿಲ್ಲುತ್ತದೆ. ಇದು ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ 4 ನಿಲ್ದಾಣಗಳಿಂದ ಆರಂಭವಾಗಲಿದೆ. ಮುಂದಿನ 6 ತಿಂಗಳಲ್ಲಿ 60 ನಿಲ್ದಾಣಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ- WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!
ರೆಸ್ಟೋರೆಂಟ್ ದರಗಳು ಮಾತ್ರ ಅನ್ವಯಿಸುತ್ತವೆ:
ಐಆರ್‌ಸಿಟಿಸಿ ಮತ್ತು ಸ್ವಿಗ್ಗಿ ನಡುವಿನ ಒಪ್ಪಂದದ ಬಳಿಕ ಈಗ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಪ್ರಯಾಣಿಕರು ಮುಂಚಿತವಾಗಿ ಫುಡ್ ಆರ್ಡರ್ ಮಾಡುವುದರಿಂದ ರೈಲು ನಿಲ್ದಾಣವನ್ನು ತಲುಪುವ ಮುನ್ನವೇ ಸ್ವಿಗ್ಗಿ ಜನರು ಪ್ರಯಾಣಿಕರು ಆರ್ಡರ್ ಮಾಡಿದ ಆಹಾರದೊಂದಿಗೆ ನಿಲ್ದಾಣದಲ್ಲಿ ಸಿದ್ದರಿದ್ದು, ರೈಲು ನಿಲ್ದಾಣವನ್ನು ತಲುಪುತ್ತಿದ್ದಂತೆ ಆಹಾರ ವಿತರಿಸುತ್ತಾರೆ. ನೀವು ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡಿದಾಗ ರೆಸ್ಟೋರೆಂಟ್ ದರಗಳು ಮಾತ್ರ ಅನ್ವಯಿಸುತ್ತವೆ. ಆದಾಗ್ಯೂ, ವಿತರಣೆಯ ಶುಲ್ಕವು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ಗಮನಾರ್ಹವಾಗಿ ಸ್ವಿಗ್ಗಿಗಿಂತ ಮೊದಲು, ಐಆರ್‌ಸಿಟಿಸಿ ರೈಲಿನಲ್ಲಿ ಮುಂಗಡ-ಆರ್ಡರ್ ಆಹಾರ ವಿತರಣೆಗಾಗಿ ಜೋಮೋಟೊ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. Zomato ಜೊತೆಗಿನ ಒಪ್ಪಂದವು ಪ್ರಸ್ತುತ 63 ಕೇಂದ್ರಗಳಲ್ಲಿ ಲಭ್ಯವಿದ್ದು, ಕ್ರಮೇಣ ಈ ಸೇವೆ ವಿಸ್ತರಣೆಯಾಗಲಿದೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.