ವಾಟ್ಸಾಪ್ನಲ್ಲಿ ಇನ್ಮುಂದೆ ಒರಿಜಿನಲ್ ಕ್ವಾಲಿಟಿ ಫೋಟೋಸ್, ವಿಡಿಯೋಸ್ ಶೇರ್ ಮಾಡಬಹುದು
WhatsApp New Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದ್ದು ಇದೀಗ ವಾಟ್ಸಾಪ್ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಲು ಸಾಧ್ಯವಾಗಲಿದೆ.
WhatsApp New Update: ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಹೊಸ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿದ್ದು ಅದು ಐಫೋನ್ ಬಳಕೆದಾರರಿಗೆ ಕಂಪ್ರೆಷನ್ ಇಲ್ಲದೆಯೇ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಸಹಾಯಕವಾಗಲಿದೆ.
ಹೌದು, ವಾಟ್ಸಾಪ್ iOS ನಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ, ಅದು ಬಳಕೆದಾರರು ತಮ್ಮ ಮೂಲ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಫೋಟೋಗಳು ಮತ್ತು ವೀಡಿಯೊಗಳನ್ನು ಡಾಕ್ಯುಮೆಂಟ್ ಆಗಿ ಹಂಚಿಕೊಳ್ಳಲು ಅನುಮತಿಸುತ್ತದೆ.
WABetaInfoನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, iOS ನಲ್ಲಿ WhatsApp ನ 23.24.73 ಅಪ್‌ಡೇಟ್ ಜೊತೆಗೆ ಒದಗಿಸಲಾದ ಅಧಿಕೃತ ಚೇಂಜ್‌ಲಾಗ್ ಬಳಕೆದಾರರು ಈಗ "ಮೂಲ ಗುಣಮಟ್ಟದ ಮಾಧ್ಯಮವನ್ನು ಫೈಲ್‌ನಂತೆ ಸುಲಭವಾಗಿ ಕಳುಹಿಸಬಹುದು" ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಒಂದೇ ವಾಟ್ಸಾಪ್ ಖಾತೆಯಲ್ಲಿ ಎರಡು ಪ್ರೊಫೈಲ್‌ಗಳನ್ನು ರಚಿಸಬಹುದು!
ಈ ವೈಶಿಷ್ಟ್ಯವನ್ನು ನವೆಂಬರ್‌ನಲ್ಲಿ ಬಳಕೆದಾರರ ಸಣ್ಣ ಉಪವಿಭಾಗದಿಂದ ಪರೀಕ್ಷಿಸಲಾಗಿದೆ. ಆದರೆ ಈಗ ಎಲ್ಲಾ iOS ಬಳಕೆದಾರರಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದು "ಮುಂಬರುವ ವಾರಗಳಲ್ಲಿ" ಹೊರಹೊಮ್ಮುತ್ತಿದೆ. ಆದಾಗ್ಯೂ, ಎಲ್ಲಾ ಬಳಕೆದಾರರಿಗೂ ಈ ವೈಶಿಷ್ಟ್ಯ ಲಭ್ಯವಾಗಲು ಸ್ವಲ್ಪ ಸಮಯ ಬೇಕಾಗಬಹುದು.
ಇದನ್ನೂ ಓದಿ- ದುಬಾರಿಯಾಗಲಿವೆಯೇ ಜಿಯೋ 5G ಪ್ಲಾನ್‌ಗಳು: ಕಂಪನಿ ಹೇಳಿದ್ದೇನು ಗೊತ್ತೇ!
ಗಮನಾರ್ಹವಾಗಿ ವಾಟ್ಸಾಪ್ ಈ ವರ್ಷದ ಸೆಪ್ಟೆಂಬರ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೂ ಸಹ ಅದೇ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದು ಆಂಡ್ರಾಯ್ಡ್ ಬಳಕೆದಾರರು ಸಹ ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಪಡೆಯುವ ನಿರೀಕ್ಷೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.