Paytm Cashback Offer Scam : ಇತ್ತೀಚಿನ ದಿನಗಳಲ್ಲಿ ಮನೆಯಿಂದ ಹೊರಹೋಗುವಾಗ ವಾಲೆಟ್ ಅಥವಾ ಹಣವನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಯಾಕೆಂದರೆ  ಈಗ ವ್ಯಾಲೆಟ್ ಸ್ಮಾರ್ಟ್‌ಫೋನ್‌ನಲ್ಲಿಯೇ ಇರುತ್ತದೆ.  ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್‌ಗಳ  ಮೂಲಕ ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ಇದೀಗ Paytm ಅತ್ಯಂತ ಜನಪ್ರಿಯ ಮತ್ತು ಉತ್ತಮ ಅಪ್ಲಿಕೇಶನ್ ಆಗಿದೆ.  ಆದರೆ  paytm ಬಳಸುತ್ತಿದ್ದರೆ ಬಹಳ ಎಚ್ಚರದಿಂದ ಇರಬೇಕು. ಇತ್ತೀಚಿನ ದಿನಗಳಲ್ಲಿ paytm ಸ್ಕ್ಯಾಮ್ ಬೆಳಕಿಗೆ ಬಂದಿದೆ.  


COMMERCIAL BREAK
SCROLL TO CONTINUE READING

Paytm ಬಳಕೆದಾರರಾಗಿದ್ದರೆ ಎಚ್ಚರ : 
ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್‌ನ ಎಲ್ಲಾ ಬಳಕೆದಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಯಾಕೆಂದರೆ ಕೆಲವು ಹ್ಯಾಕರ್‌ಗಳು ಪೇಟಿಎಂ ಬಳಕೆದಾರರನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹ್ಯಾಕರ್‌ಗಳು ಕ್ಯಾಶ್‌ಬ್ಯಾಕ್ ಆಮಿಷ ಒಡ್ಡಿ ಖಾತೆಗಳಿಂದ ಹಣವನ್ನು ದೋಚುತ್ತಿದ್ದಾರೆ. 


ಇದನ್ನೂ ಓದಿ : ಮಾರುಕಟ್ಟೆಗೆ ಬರುತ್ತಿದೆ OnePlusನ ಹೊಸ Smartphone ..! ಬೆಲೆ ವೈಶಿಷ್ಟ್ಯ ಎಷ್ಟಿದೆ ಗೊತ್ತಾ ?


ಭಾರೀ ಖತರ್ನಾಕ್ ಈ ಫೋನ್ ಕಾಲ್ : 
ಪೇಟಿಎಂ ಬಳಕೆದಾರರು ಇಂದು ವಿದ್ಯುತ್ ಬಿಲ್ ಪಾವತಿಸಿದರೆ  ಕ್ಯಾಶ್ ಬ್ಯಾಕ್ ಸಿಗುತ್ತದೆ ಎಂದು ಹೇಳಲಾಗುತ್ತದೆ. ಕ್ಯಾಶ್‌ಬ್ಯಾಕ್‌ ಪಡೆಯಬಹುದು ಎನ್ನುವ ಉದ್ದೇಶದಿಂದ ಬಳಕೆದಾದರು ಕೂಡಾ ಬಿಲ್ ಪಾವತಿಸುತ್ತಾರೆ. ಇದಾದ ನಂತರ ಅವರ ಫೋನ್‌ನಲ್ಲಿ OTP ಕೂಡಾ ಬರುತ್ತದೆ. 


ನಿಮ್ಮ ಖಾತೆ ಖಾಲಿ ಮಾಡಬಹುದು ಈ ಫೋನ್ ಕಾಲ್ : 
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಿದ ನಂತರ ಬರುವ OTP ಮೂಲಕ ಹ್ಯಾಕರ್ ಗಳು ನಿಮ್ಮ ಖಾತೆಯನ್ನು ಖಾಲಿ ಮಾಡಿ ಬಿಡುತ್ತಾರೆ. OTP ಮೂಲಕ ಖಾತೆಯ ಆಕ್ಸೆಸ್ ಪಡೆಯಲು ಹ್ಯಾಕರ್‌ಗಳು ಆ Paytm ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಡೌನ್‌ಲೋಡ್ ಮಾಡುತ್ತಾರೆ. ಇದರಿಂದ ಹ್ಯಾಕರ್ ಸುಲಭವಾಗಿ VPNಗೆ ಸಂಪರ್ಕಿಸಬಹುದು. ಈ ರೀತಿಯಾಗಿ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಹಣವನ್ನು ಪಡೆಯಬಹುದು. 


ಇದನ್ನೂ ಓದಿ : Free High Speed Data: ಉಚಿತವಾಗಿ ಪಡೆಯಿರಿ 20ಜಿಬಿ ಹೈ ಸ್ಪೀಡ್ ಡೇಟಾ, ಈ ಟೆಲಿಕಾಂ ಕಂಪನಿಯ ನೀಡುತ್ತಿದೆ ಅದ್ಭುತ ಕೊಡುಗೆ


ಇಂತಹ ಹಗರಣಗಳನ್ನು ತಪ್ಪಿಸಲು, ಮೊದಲು ಎಚ್ಚರದಿಂದಿರಬೇಕು. Paytm ಯಾವುದೇ ರೀತಿಯ ಕ್ಯಾಶ್‌ಬ್ಯಾಕ್ ಆಫರ್ ಗಳನ್ನು  ಫೋನ್‌ನಲ್ಲಿ ನೀಡುವುದಿಲ್ಲ. ಅವುಗಳು ಸಾಮಾನ್ಯವಾಗಿ ಅಪ್ಲಿಕೇಶನ್‌ನಲ್ಲಿಯೇ ಲಭ್ಯವಿರುತ್ತವೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a