Peahen Reproduction:  ನವಿಲಿಗೆ ನಮ್ಮ ದೇಶದ 'ರಾಷ್ಟ್ರೀಯ ಪಕ್ಷಿ' ಸ್ಥಾನಮಾನ ದೊರೆತಿದೆ. ಹೀಗಾಗಿ ದೇಶಾದ್ಯಂತ ನವಿಲಿನ ಬೇಟೆಯನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ನವಿಲಿನ ಬೇಟೆಯಾಡುವುದು ಕಂಡುಬಂದರೆ, ಆತನಿಗೆ ಮೂರರಿಂದ ಏಳು ವರ್ಷಗಳವರೆಗೆ ಶಿಕ್ಷೆಯ ನಿಬಂಧನೆ ಇದೆ. ಆದರೆ, ನವಿಲಿನ ಗರ್ಭಧಾರಣೆಯ ಬಗ್ಗೆ ಹಲವು ಜನರು ಕಟ್ಟು ಕಥೆಗಳನ್ನು ಹೇಳುವುದನ್ನು ನೀವೂ ಕೂಡ ಕೇಳಿರಬಹುದು. ತಳಬುಡ ಗೊತ್ತಿಲ್ಲದೇ ಮಾತನಾದುವವರಲ್ಲಿ ಕೆಲ  ಹೆಸರಾಂತ ವ್ಯಕ್ತಿಗಳ ಹೆಸರೂ ಕೂಡ ಶಾಮೀಲಾಗಿದ್ದಾರೆ. ಅನೇಕ ಜನ ಸಾಮಾನ್ಯರೂ ಅದನ್ನು ನಂಬಿದ್ದಾರೆ. ಗಂಡು ನವಿಲು ಹೆಣ್ಣು ನವಿಲಿನ ಕಣ್ಣಲ್ಲಿ ತನ್ನ ಕಣೀರು ಹಾಕಿದರೆ ಹೆಣ್ಣು ನವಿಲು ಗರ್ಭಿಣಿಯಾಗುತ್ತದೆ ಎಂದು ಯಾರೋ ಹೇಳಿರುವುದನ್ನು ನೀವೂ ಕೂಡ ಕೇಳಿರಬಹುದು. ನವಿಲು ಮತ್ತು ಹೆಣ್ಣು ನವಿಲಿನ ಸಂಬಂಧದ ಬಗ್ಗೆ ಮಾತನಾಡಿದ್ದ ಮತ್ತೊಬ್ಬರು ಹೆಣ್ಣು ನವಿಲು ಮೊಟ್ಟೆ ಇಡುವುದಿಲ್ಲ ಎಂದು ಹೇಳಿದ್ದರು ಮತ್ತು ಗಂಡು ಹಾಗೂ ಹೆಣ್ಣು ನವಿಲುಗಳು ದೈಹಿಕ ಸಂಬಂಧಗಳನ್ನು ನಡೆಸುವುದಿಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಈ ವಿಚಾರದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ ಬನ್ನಿ,


YouTubeನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಯಾವುದು? ಉತ್ತರ ನಿಬ್ಬೇರಗಾಗಿಸಲಿದೆ


COMMERCIAL BREAK
SCROLL TO CONTINUE READING

ಹೆಣ್ಣು ನವಿಲು ಹೇಗೆ ಗರ್ಭಿಣಿಯಾಗುತ್ತದೆ?
ಗಂಡು ನವಿಲು ಜೀವನಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುತ್ತದೆ ಮತ್ತು ಹೆಣ್ಣು ನವಿಲು ಅದರ ಕಣ್ಣೀರಿನಿಂದ ಗರ್ಭಿಣಿಯಾಗುತ್ತದೆ ಎಂದು ಒಮ್ಮೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಹೇಳಿದ್ದರು. ಈ ಗೊಂದಲವನ್ನು ಹೋಗಲಾಡಿಸಲು ಕೆಲವರು ಸಾಕ್ಷ್ಯಗಳನ್ನು ಒದಗಿಸಿದ್ದಾರೆ . ಅವುಗಳನ್ನು ನೋಡಿದ ನಂತರ ನಿಮ್ಮ ಎಲ್ಲಾ ಗೊಂದಲಗಳು ದೂರಾಗಳಿವೆ. ಪಕ್ಷಿಗಳ ದೈಹಿಕ ಸಂಬಂಧದ ಪ್ರಕ್ರಿಯೆ ಒಂದು ವಿಶೇಷವಾದ ಚುಂಬನದ ಮೂಲಕ ಆರಂಭವಾಗುತ್ತದೆ, ಅದನ್ನೇ 'ಕ್ಲೋಕಲ್ ಕಿಸ್' ಎಂದು ಕರೆಯಲಾಗುತ್ತದೆ. ಹೆಚ್ಚಿನ ಗಂಡು ಹಕ್ಕಿಗಳು ಹೆಣ್ಣಿನ ಮೇಲೆ ಕುಳಿತು ನಂತರ ತಮ್ಮ ವೀರ್ಯವನ್ನು ಹೆಣ್ಣಿನ ದೇಹಕ್ಕೆ ವರ್ಗಾಯಿಸುತ್ತವೆ. ಈ ಕ್ರಿಯೆಯು 8 ರಿಂದ 16 ಸೆಕೆಂಡುಗಳ ನಡುವೆ ನಡೆಯುತ್ತದೆ. ಗಂಡು ಹಾಗೂ ಹೆಣ್ಣು ನವಿಲುಗಳು ಕೂಡ ಈ ಕ್ಲೋಕಲ್ ಕಿಸ್ ವಿಧಾನವನ್ನು ಅಳವಡಿಸಿಕೊಂಡಿವೆ.


New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು


ಕಣ್ಣೀರಿನ ಕಥೆ ಒಂದು ಕಟ್ಟು ಕಥೆಯಾಗಿದೆ
ಗಂಡು ಹಾಗೂ ಹೆಣ್ಣು ನವಿಲುಗಳು ದೈಹಿಕ ಸಂಬಂಧ ಬೆಳೆಸುವುದಿಲ್ಲ ಎಂದು ಯಾರಾದರೂ ನಿಮಗೆ ಹೇಳಿದ್ದರೆ, ಅವರ ಈ ತಪ್ಪು ಕಲ್ಪನೆಯನ್ನು ನಿವಾರಿಸಿ ಮತ್ತು ಇತರ ಪಕ್ಷಿಗಳಂತೆ ನವಿಲುಗಳು ಕೂಡ  ಕ್ಲೋಕಲ್ ಕಿಸ್ ಅನ್ನು ವಿಧಾನವನ್ನು ಅನುಸರಿಸುತ್ತವೆ ಮತ್ತು ಹೆಣ್ಣು ನವಿಲು ಗಂಡು ನವಿಲಿನ ವಿರ್ಯದಿಂದಲೇ ಗರ್ಭ ಧರಿಸುತ್ತದೆ ಮತ್ತು ಇತರ ಕೋಳಿಗಳ ಪ್ರಜಾತಿಯಂತೆಯೇ ಹೆಣ್ಣು ನವಿಲು ಕೂಡ ಮೊಟ್ಟೆ ಕೊಡುತ್ತದೆ ಎಂಬುದನ್ನು ಅವರಿಗೆ ತಿಳಿಹೇಳಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.