Trending Car Features : ಇತ್ತೀಚಿನ ದಿನಗಳಲ್ಲಿ, ಕಾರುಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳು ಕಂಡುಬರುತ್ತವೆ. ಜನರು ಸಹ ಮೊದಲಿಗಿಂತ ಹೆಚ್ಚು ಹಣ ಪಾವತಿಸಿ ಕಾರು ಖರೀದಿಸಲು ಮುಂದಾಗುತ್ತಾರೆ. ಅದರಂತೆ, ಇತ್ತೀಚಿನ ದಿನಗಳಲ್ಲಿ ಕಾರು ಕಂಪನಿಗಳು ಕೂಡಾ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅನೇಕ ಕಾರುಗಳು ಅವುಗಳ ವೈಶಿಷ್ಟ್ಯದಿಂದಾಗಿಯೇ ಬೇಡಿಕೆಯಲ್ಲಿವೆ. ಅಂದರೆ, ಜನರು ಆ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ  ವೈಶಿಷ್ಟ್ಯದ ಮೂಲಕವೇ ಸಾಕಷ್ಟು ಜನಪ್ರಿಯವಾಗಿರುವ 4 ಕಾರುಗಳು ಯಾವುವೂ ಮತ್ತು ಆ ವೈಶಿಷ್ಟ್ಯತೆಗಳು ಯಾವುವು ನೋಡೋಣ.  


COMMERCIAL BREAK
SCROLL TO CONTINUE READING

ಪನೋರಮಿಕ್ ಸನ್‌ರೂಫ್: 
ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ಸನ್‌ರೂಫ್ ಹೆಚ್ಚು ಟ್ರೆಂಡಿಂಗ್ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಅದಕ್ಕೆ ಸಾಕಷ್ಟು ಬೇಡಿಕೆ ಇದೆ. ಸಿಂಗಲ್ ಪೇನ್ ಸನ್‌ರೂಫ್ ಅನೇಕ ಕಾರುಗಳಲ್ಲಿ ಲಭ್ಯವಿದೆ. ಆದರೆ ಈಗ ಜನರು PANORAMIC SUNROOF ಅನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಇದು ಸಿಂಗಲ್ ಪೇನ್ ಸನ್‌ರೂಫ್‌ಗಿಂತ ದೊಡ್ಡದಾಗಿದೆ. ಕ್ರೆಟಾ, ಹ್ಯಾರಿಯರ್ ಮತ್ತು ಸಫಾರಿ, XUV700 ನಂತಹ ಕಾರುಗಳು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತವೆ.


ಇದನ್ನೂ ಓದಿ : Honda City ಅನುಭವವನ್ನೇ ನೀಡಲಿದೆ ಈ ಅಗ್ಗದ ಸೆಡನ್ ! ಬೆಲೆ 4.5 ಲಕ್ಷದಷ್ಟು ಕಡಿಮೆ !


360 ಡಿಗ್ರಿ ಕ್ಯಾಮೆರಾ: 
360 ಡಿಗ್ರಿ ಕ್ಯಾಮೆರಾ ಕಾರುಗಳಲ್ಲಿ ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ. ಇದು ಸಾಕಷ್ಟು ಟ್ರೆಂಡಿಂಗ್ ಆಗಿದೆ. ಜನರು ಕಾರುಗಳಲ್ಲಿ 360 ಡಿಗ್ರಿ ಕ್ಯಾಮೆರಾಗಳನ್ನು ಹೊಂದಿರುವುದನ್ನು  ಇಷ್ಟಪಡುತ್ತಾರೆ. ಇಕ್ಕಟ್ಟಾದ ಜಾಗಗಳಲ್ಲಿ ಕಾರನ್ನು ನಿಲ್ಲಿಸಲು ಮತ್ತು ನಿರ್ಗಮಿಸಲು ಇದು ಸಹಾಯ ಮಾಡುತ್ತದೆ. ಇದು ಬ್ಲೈಂಡ್ ಸ್ಪಾಟ್‌ಗಳನ್ನು ಆರಾಮವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು Baleno, Seltos, XUV700 ನಂತಹ ಕಾರುಗಳಲ್ಲಿ ಲಭ್ಯವಿದೆ.


HUD ಡಿಸ್ಪ್ಲೇ :


ಮಾರುತಿ ಬಲೆನೊ, ಬ್ರೆಝಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾರುಗಳಲ್ಲಿ ಹೆಡ್ಸ್-ಅಪ್ ಡಿಸ್ಪ್ಲೇ (HUD) ಅನ್ನು ನೀಡಲಾಗುತ್ತದೆ. HUD ಎರಡು ವಿಧಗಳಿವೆ - ಪ್ರೊಜೆಕ್ಷನ್ ಆಧಾರಿತ (ಎಲ್ಇಡಿ/ಲೇಸರ್ ಬಳಸಿ) ಮತ್ತು ರೆಫ್ಲೇಕ್ಶನ್ ಬೇಸ್ಡ್.  ಇದು ಡ್ಯಾಶ್‌ಬೋರ್ಡ್‌ನಲ್ಲಿ ಅಥವಾ ವಿಂಡ್‌ಶೀಲ್ಡ್‌ನಲ್ಲಿ ಕಂಡುಬರುತ್ತದೆ. ಇದು ಅತ್ಯಂತ ಜನಪ್ರಿಯ ಕಾರು ವೈಶಿಷ್ಟ್ಯವಾಗಿದೆ.


ಇದನ್ನೂ ಓದಿ : ಬೇಸಿಗೆಯಲ್ಲಿ ಕಾಶ್ಮೀರದ ಅನುಭವ ನೀಡುತ್ತೆ ಈ ಪುಟ್ಟ Air Cooler: ಒಂದಲ್ಲ ಎರಡಲ್ಲ.. ಹತ್ತಾರು ವೈಶಿಷ್ಟ್ಯ- ಬೆಲೆ ಜಸ್ಟ್ 1500 ರೂ!


ವೆಂಟಿಲೇಟೆಡ್ ಸೀಟ್‌ಗಳು: 
ನೆಕ್ಸನ್, ಹ್ಯಾರಿಯರ್, ಸೋಯೆಂಟ್, ಕುಶಾಕ್, ಟೈಗುನ್, ವೆರ್ನಾ, ಕ್ರೆಟಾ, ಕ್ಯಾರೆನ್ಸ್, ಸೆಲ್ಟೋಸ್‌ನಂತಹ ಕಾರುಗಳು ವೆಂಟಿಲೇಟೆಡ್ ಸೀಟ್‌ಗಳೊಂದಿಗೆ ಬರುತ್ತವೆ. ವೆಂಟಿಲೇಟೆಡ್ ಸೀಟ್‌ಗಳಲ್ ಫೋರ್ಸ್ಡ್ ಏರ್ ಸರ್ಕ್ಯುಲೇಶನ್  ಸಿಸ್ಟಮ್ ಇರುತ್ತದೆ. ಬೇಸಿಗೆಯಲ್ಲಿ ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ಈ ವೈಶಿಷ್ಟ್ಯದಿಂದಾಗಿ ಆಸನದ ಸಂಪರ್ಕದಲ್ಲಿರುವ ಸೊಂಟದಂತಹ ದೇಹದ ಭಾಗಗಳಿಗೆ ಗಾಳಿಯು ತಲುಪುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ