ಮಾರುತಿಯ ಈ ನಾಲ್ಕು ಕಾರುಗಳನ್ನು ಖರೀದಿಸುವಾಗ ಎಚ್ಚರ.! 0 ಮತ್ತು 1 ಇದರ ಸೇಫ್ಟಿ ರೇಟಿಂಗ್
Maruti Cars Safety Rating:ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಖರೀದಿಸುವವರು ಮಾರುತಿ ಸುಜುಕಿಯ ಕೆಲವು ಕಾರುಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಮಾರುತಿ ಸುಜುಕಿಯ 4 ಕಾರುಗಳು Global Encoup ನಿಂದ ಅತ್ಯಂತ ಕಳಪೆ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿವೆ.
Maruti Cars Safety Rating : ಮಾರುತಿ ಸುಜುಕಿ ಭಾರತದಲ್ಲಿ ಅತಿ ದೊಡ್ಡ ಕಾರು ತಯಾರಕ ಕಂಪನಿ. ಇದು ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತದೆ. ಮಾರುತಿ ಸುಜುಕಿಯ ಕಾರುಗಳನ್ನು ಗ್ರಾಹಕರು ಕೂಡಾ ಬಹಳ ನಂಬಿಕೆಯಿಂದ ಒಪ್ಪಿಕೊಳ್ಳುತ್ತಾರೆ. ಸುರಕ್ಷತೆಯ ಕಾರಣ ನೀಡಿಯೇ ಮಾರುತಿಯ ಕಾರುಗಳನ್ನು ಖರೀದಿಸಲಾಗುತ್ತದೆ. ಆದರೆ, ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಖರೀದಿಸುವವರು ಮಾರುತಿ ಸುಜುಕಿಯ ಕೆಲವು ಕಾರುಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಮಾರುತಿ ಸುಜುಕಿಯ 4 ಕಾರುಗಳು Global Encoup ನಿಂದ ಅತ್ಯಂತ ಕಳಪೆ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿವೆ.
ಮಾರುತಿ ಸ್ವಿಫ್ಟ್, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊ ಸುರಕ್ಷತೆಯ ರೇಟಿಂಗ್ :
ಮಾರುತಿ ಸ್ವಿಫ್ಟ್, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊ, ಎಲ್ಲಾ ಮೂರು ಕಾರುಗಳನ್ನು ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳ ಅಡಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ, ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅಡಲ್ಟ್ ಪ್ರೊಟೆಕ್ಷನ್ ಮತ್ತು ಚೈಲ್ಡ್ ಪ್ರೊಟೆಕ್ಷನ್ ನಲ್ಲಿ 1 ಸ್ಟಾರ್ ಪಡೆದರೆ, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊ ಅಡಲ್ಟ್ ಪ್ರೊಟೆಕ್ಷನ್ ನಲ್ಲಿ 1 ಸ್ಟಾರ್ ಮತ್ತುಚೈಲ್ಡ್ ಪ್ರೊಟೆಕ್ಷನ್ ನಲ್ಲಿ 0 ಸ್ಟಾರ್ ಪಡೆದುಕೊಂಡಿದೆ.
ಇದನ್ನೂ ಓದಿ : ಸಾಮಾನ್ಯ ಕಾರಿನ ಬೆಲೆಯಲ್ಲಿಯೇ ಲಭ್ಯ ಮಾರುಕಟ್ಟೆಗೆ ಬಂದಿರುವ ಈ 13 ಸೀಟರ್
ಅಡಲ್ಟ್ ಪ್ರೊಟೆಕ್ಷನ್ ಮತ್ತು ಚೈಲ್ಡ್ ಪ್ರೊಟೆಕ್ಷನ್ ನಲ್ಲಿ ಸ್ವಿಫ್ಟ್ 34 ರಲ್ಲಿ 19.19 ಮತ್ತು 49 ರಲ್ಲಿ 16.68 ಅಂಕಗಳನ್ನು ಗಳಿಸಿದೆ. ಮಾರುತಿ ಇಗ್ನಿಸ್ ಅಡಲ್ಟ್ ಪ್ರೊಟೆಕ್ಷನ್ 34 ರಲ್ಲಿ 16.48 ಅಂಕಗಳನ್ನು ಪಡೆದರೆ ಚೈಲ್ಡ್ ಪ್ರೊಟೆಕ್ಷನ್ ನಲ್ಲಿ 49 ರಲ್ಲಿ 3.86 ಅಂಕಗಳನ್ನು ಗಳಿಸಿದೆ.
ಮಾರುತಿ ಎಸ್-ಪ್ರೆಸ್ಸೋ ಬಗ್ಗೆ ಹೇಳುವುದಾದರೆ ಅಡಲ್ಟ್ ಪ್ರೊಟೆಕ್ಷನ್ ನಲ್ಲಿ 34 ಅಂಕಗಳಲ್ಲಿ 20.03 ಅಂಕಗಳನ್ನು ಗಳಿಸಿದರೆ, ಚೈಲ್ಡ್ ಪ್ರೊಟೆಕ್ಷನ್ ನಲ್ಲಿ 49 ಅಂಕಗಳಲ್ಲಿ 3.52 ಅಂಕಗಳನ್ನು ಗಳಿಸಿದೆ.
ಮಾರುತಿ ವ್ಯಾಗನ್ಆರ್ ಸುರಕ್ಷತೆಯ ರೇಟಿಂಗ್ :
ಮಾರುತಿ ವ್ಯಾಗನ್ಆರ್ ಅನ್ನು ಹೊಸ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳ ಅಡಿಯಲ್ಲಿ ಇನ್ನೂ ಪರೀಕ್ಷಿಸಲಾಗಿಲ್ಲ. ಆದರೆ ಹಳೆಯ ಮಾನದಂಡದ ಅಡಿಯಲ್ಲಿ, ಇದನ್ನು ಅಕ್ಟೋಬರ್ 2019 ರಲ್ಲಿ ಪರೀಕ್ಷಿಸಲಾಗಿತ್ತು. ಇದರಲ್ಲಿ ಗ್ಲೋಬಲ್ NCAP ಎರಡು-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿತು. ಹ್ಯಾಚ್‌ಬ್ಯಾಕ್ ಅಡಲ್ಟ್ ಪ್ರೊಟೆಕ್ಷನ್ ಮತ್ತು ಚೈಲ್ಡ್ ಪ್ರೊಟೆಕ್ಷನ್ ನಲ್ಲಿ 17 ರಲ್ಲಿ 6.93 ಮತ್ತು 49 ರಲ್ಲಿ 16.33 ಅಂಕಗಳನ್ನು ಗಳಿಸಿದೆ.
ಇದನ್ನೂ ಓದಿ : ಜನವರಿ 1 ರಿಂದ ಬಂದ್ ಆಗಲಿವೆ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು: ಯಾಕ್ ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.