Portronics Vayu Portable Tyre Inflator : ವಾಹನದ ಟೈರ್‌ನಲ್ಲಿ ಗಾಳಿ ಕಡಿಮೆಯಾಗುತ್ತಿದ್ದಂತೆ, ಏರ್ ಫಿಲ್ಲಿಂಗ್ ಗೆ ಸಮೀಪದಲ್ಲಿರುವ ಪೆಟ್ರೋಲ್ ಪಂಪ್‌ಗೆ ಹೋಗುತ್ತೇವೆ. ಅಲ್ಲಿನದ ಟೈರ್ ಗೆ ಉಚಿತವಾಗಿ ಗಾಳಿ ತುಂಬಲಾಗುತ್ತದೆ. ಕೆಲವೊಮ್ಮೆ ಪೆಟ್ರೋಲ್ ಪಂಪ್ ನಲ್ಲಿರುವ   ಅಪಾರ ಜನಸಂದಣಿಯಿಂದಾಗಿ ನಮ್ಮ ಸಮಯ ವ್ಯರ್ಥವಾಗುತ್ತಿದೆ. ಇನ್ನು ತುರ್ತು ಪರಿಸ್ಥಿತಿಯಲ್ಲಿ,  ಮೋಟಾರು ಗ್ಯಾರೇಜ್‌ಗೆ ಹೋಗಬೇಕಾಗುತ್ತದೆ. ಆದರೆ ಅಲ್ಲಿ ಟೈರ್ ಗೆ ಗಾಳಿ ತುಂಬಲು ಹಣ ನೀಡಬೇಕಾಗುತ್ತದೆ.  ಆದರೆ ನಿಮ್ಮ ಬಳಿಯೇ ಈ ಒಂದು ಸಾಧನವಿದ್ದರೆ ಟೈರ್ ಗೆ ಗಾಳಿ ತುಂಬಲು ಪೆಟ್ರೋಲ್ ಪಂಪ್ ನ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಸಮಯ ವ್ಯರ್ಥ ಮಾಡಿಕೊಳ್ಳಬೇಕಾಗಿಲ್ಲ. ಈ ಸಾಧನದ ಮೂಲಕ  ಸುಲಭವಾಗಿ ನೀವೇ ಗಾಳಿಯನ್ನು ತುಂಬಬಹುದು. ಹೌದು ನಾವಿಲ್ಲ ಪೋರ್ಟಬಲ್ ಟೈರ್ ಇನ್ಫ್ಲೇಟರ್ ಪೋರ್ಟ್ರೋನಿಕ್ಸ್ ವಾಯು ಬಗ್ಗೆ  ಹೇಳುತ್ತಿದ್ದೇವೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ ಪೋರ್ಟ್ರೋನಿಕ್ಸ್ ವಾಯು ಪೋರ್ಟಬಲ್ ಟೈರ್ ಇನ್ಫ್ಲೇಟರ್ ಬೆಲೆ : 
ಪೋರ್ಟ್ರೋನಿಕ್ಸ್ ವಾಯು ಪೋರ್ಟಬಲ್ ಟೈರ್ ಇನ್ಫ್ಲೇಟರ್ ಬೆಲೆ ಕೇವಲ 2,899 ರೂ. ಇದು  ಟೂಲ್‌ಬಾಕ್ಸ್‌ಗೆ ಅಗತ್ಯವಾದ ಸೇರ್ಪಡೆಯೂ  ಹೌದು.  ಪೋರ್ಟ್ರೋನಿಕ್ಸ್ ವಾಯು 12 ತಿಂಗಳ ವಾರಂಟಿಯೊಂದಿಗೆ ಬರುತ್ತದೆ.


ಇದನ್ನೂ ಓದಿ : iPhone 14: ಈ ದಿನದಂದು ಬಿಡುಗಡೆಯಾಗಲಿದೆ Apple iPhone 14


ಪೋರ್ಟ್ರೋನಿಕ್ಸ್ ವಾಯು ಪೋರ್ಟಬಲ್ ಟೈರ್ ಇನ್ಫ್ಲೇಟರ್ : 
ಪೋರ್ಟ್ರೋನಿಕ್ಸ್ ವಾಯು ಪೋರ್ಟಬಲ್ ಟೈರ್ ಇನ್ಫ್ಲೇಟರ್  ಬಹಳ ಉಪಯುಕ್ತವಾಗಿದೆ. ಪೋರ್ಟ್ರೋನಿಕ್ಸ್ ವಾಯುವನ್ನು ಕಾರು, ಮೋಟಾರ್‌ಸೈಕಲ್, ಸೈಕಲ್ ಮತ್ತು ಬಾಲ್‌ಗೆ ಗಾಳಿ ತುಂಬಲು ಬಳಸಬಹುದು. ಇದು ವಿವಿಧ ಗಾತ್ರಗಳು ಮತ್ತು ಕ್ರಿಯಾತ್ಮಕತೆಯ ಬಹು ನಳಿಕೆಗಳೊಂದಿಗೆ ಬರುತ್ತದೆ ಮತ್ತು ಇದು ಪ್ರೆಸ್ಟಾ ವಾಲ್ವ್ ಅಡಾಪ್ಟರ್‌ಗಳನ್ನು ಆಧರಿಸಿದೆ. ಇದಕ್ಕೆ ಹಾಕಲಾಗಿರುವ ಎಲ್ಇಡಿ ಡಿಸ್ಪ್ಲೇ ಮೂಲಕ ವಸ್ತುವಿನಲ್ಲಿ ಎಷ್ಟು ಗಾಳಿ ಇದೆ ಎನ್ನುವ ಮಾಹಿತಿ ನೀಡುತ್ತದೆ. 


ಪೋರ್ಟ್ರೋನಿಕ್ಸ್ ವಾಯು ಪೋರ್ಟಬಲ್ ಟೈರ್ ಇನ್ಫ್ಲೇಟರ್ ನಾಲ್ಕು  ಮೋಡ್ ಗಳನ್ನೂ ಹೊಂದಿರುತ್ತದೆ.  ಕಾರು, ಮೋಟಾರ್‌ಸೈಕಲ್, ಸೈಕಲ್ ಮತ್ತು ಬಾಲ್ ಮೋಡ್. ಯಾವ ಮೋಡ್ ಮೇಲೆ ಕ್ಲಿಕ್ ಮಾಡುತ್ತೇವೆಯೋ, ಅದಕ್ಕನುಸಾರವಾಗಿ ಗಾಳಿಯನ್ನು ಸರಿಹೊಂದಿಸುತ್ತದೆ. ಇದು 9 ನಿಮಿಷಗಳಲ್ಲಿ ಕಾರಿನ ಟೈರ್‌ಗಳಿಗೆ ಗಾಳಿ ತುಂಬಿಸುತ್ತದೆ. ಇದನ್ನೂ  ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಗಳಿಂದ ಖರೀದಿಸಬಹುದು. ಅಲ್ಲದೆ ಭಾರತದಲ್ಲಿ ಆಫ್‌ಲೈನ್ ಔಟ್‌ಲೆಟ್‌ಗಳಲ್ಲಿ ಈ ಸಾಧನ ಲಭ್ಯವಿದೆ.


ಇದನ್ನೂ ಓದಿ : ಸೊಳ್ಳೆ ಕಾಟದಿಂದ ಕ್ಷಣ ಮಾತ್ರದಲ್ಲಿ ಮುಕ್ತಿ ನೀಡುತ್ತದೆ ಈ ಲ್ಯಾಂಪ್ .! ಬೆಲೆ ಕೂಡಾ ತೀರಾ ಕಡಿಮೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.