U&i ಸ್ವಿಚರ್ ಪವರ್‌ಬ್ಯಾಂಕ್:   ಸ್ಮಾರ್ಟ್‌ಫೋನ್,  ಸ್ಮಾರ್ಟ್‌ಫೋನ್,  ಸ್ಮಾರ್ಟ್‌ಫೋನ್... ಈಗ ಯಾರ ಕೈಯಲ್ಲಿ ನೋಡಿದರೂ ಕಾಣುವ ಸಾಧನ ಎಂದರೆ ಅದು  ಸ್ಮಾರ್ಟ್‌ಫೋನ್.  ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಖರೀದಿಸುವಾಗ ಬಹುತೇಕ ಮಂದಿ ಕೇಳುವ ಮೊದಲ ಪ್ರಶ್ನೆ ಅದರ ಬ್ಯಾಟರಿ ಬ್ಯಾಕ್ ಅಪ್. ಫೋನ್ ಅನ್ನು ಫುಲ್ ಚಾರ್ಜ್ ಮಾಡಿದ್ದರೂ ಕೂಡ ಅದರ ಬಳಕೆ ಹೆಚ್ಚಾಗಿರುವುದರಿಂದ ಬ್ಯಾಟರಿ ಬೇಗ ಕಡಿಮೆಯಾಗುತ್ತದೆ. ನಾವು ಎಲ್ಲೆಡೆ ಫೋನ್ ಅನ್ನು ಚಾರ್ಜ್ ಮಾಡಲು ಅಗತ್ಯ ಸೌಕರ್ಯವನ್ನು ಹೊಂದಿರುವುದಿಲ್ಲ. ಅದಕ್ಕಾಗಿಯೇ ಪವರ್ ಬ್ಯಾಂಕ್ ಅಗತ್ಯವಾಗಿದೆ 


COMMERCIAL BREAK
SCROLL TO CONTINUE READING

ನೀವು ಬಲಿಷ್ಠ ಸಾಮರ್ಥ್ಯದ ಪವರ್ ಬ್ಯಾಂಕ್ ಖರೀದಿಸಲು ಯೋಜಿಸುತ್ತಿದ್ದರೆ, ಅಂತಹ ಸೂಕ್ತವಾದ ಪವರ್ ಬ್ಯಾಂಕ್ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. U&i ಫ್ಲ್ಯಾಶ್‌ಲೈಟ್‌ನೊಂದಿಗೆ ಸ್ವಿಚರ್ ಸರಣಿ 10000mAh 7-in-1 ಪವರ್‌ಬ್ಯಾಂಕ್ ಅನ್ನು ಬಿಡುಗಡೆ ಮಾಡಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ಗೆ ಉತ್ತಮ ಪವರ್‌ಬ್ಯಾಂಕ್ ಎಂದು ಸಾಬೀತುಪಡಿಸಬಹುದು.


ಯುಅಂಡ್ಐ ಸ್ವಿಚರ್ ಪವರ್‌ಬ್ಯಾಂಕ್ ವೈಶಿಷ್ಟ್ಯಗಳು:
ಯುಅಂಡ್ಐ  ಸ್ವಿಚರ್ ಸರಣಿಯ ಪವರ್‌ಬ್ಯಾಂಕ್ ಯಾವುದೇ ಸಾಧನವನ್ನು ವೇಗವಾಗಿ ಚಾರ್ಜ್ ಮಾಡಬಲ್ಲ ಶಕ್ತಿಶಾಲಿ  ಪವರ್‌ಬ್ಯಾಂಕ್ ಎಂದು ಕಂಪನಿ ಹೇಳಿಕೊಂಡಿದೆ. ಇದರ ಸಹಾಯದಿಂದ ಸ್ಮಾರ್ಟ್‌ಫೋನ್ ಮೂರು ಪಟ್ಟು ವೇಗವಾಗಿ ಚಾರ್ಜ್ ಆಗುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಇದರೊಂದಿಗೆ  ಸತತ 4 ದಿನಗಳವರೆಗೆ ನಿಮಗೆ  ನಿಮ್ಮ ವಾಲ್ ಅಡಾಪ್ಟರ್ ಕೂಡ ಅಗತ್ಯವಿರುವುದಿಲ್ಲ ಎಂಬುದು ವಿಶೇಷ.


ಇದನ್ನೂ ಓದಿ- ಜಿಯೋ ಫೈಬರ್ ಹೊಸ ಮನರಂಜನಾ ಪ್ಲಾನ್ಸ್: ಕೇವಲ 100 ರೂ.ಗಳಲ್ಲಿ 6 ಒಟಿಟಿ ಅಪ್ಲಿಕೇಶನ್‌ಗಳನ್ನು ಆನಂದಿಸಿ


* ಈ ಪವರ್ ಬ್ಯಾಂಕ್ ಮೂರು ವಿಧದ ನಾಲ್ಕು ಪವರ್ ಕೇಬಲ್‌ಗಳೊಂದಿಗೆ ಬರುತ್ತದೆ.
* ಮೈಕ್ರೋ ಯುಎಸ್‌ಬಿ, ಟೈಪ್-ಸಿ ಮತ್ತು ಲೈಟ್ನಿಂಗ್. 
* ಸಂಕ್ಷಿಪ್ತವಾಗಿ, ಯಾವುದೇ ಆಂಡ್ರಾಯ್ಡ್ ಅಥವಾ ಆಪಲ್ ಸ್ಮಾರ್ಟ್‌ಫೋನ್, ಹೆಡ್‌ಫೋನ್ ಅಥವಾ ಬ್ಲೂಟೂತ್ ಸ್ಪೀಕರ್ ಅನ್ನು ಅದರ ಸಹಾಯದಿಂದ 3 ಬಾರಿ ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ.


 ಏಕಕಾಲದಲ್ಲಿ ಆರು ಸಾಧನಗಳನ್ನು ಚಾರ್ಜ್ ಮಾಡಬಹುದು:
ಈ ಪವರ್‌ಬ್ಯಾಂಕ್ ಜೊತೆಗೆ ಲಗತ್ತಿಸಲಾಗಿರುವ ಯುಎಸ್‌ಬಿ -ಎ ಕೇಬಲ್ ಜೊತೆಗೆ ಬರುತ್ತದೆ. ಇದನ್ನು ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಅಥವಾ ಪವರ್ ಅಡಾಪ್ಟರ್‌ನ ಯುಎಸ್‌ಬಿ  ಪೋರ್ಟ್‌ಗೆ ನೇರವಾಗಿ ಸಂಪರ್ಕಿಸಲು ನಿಮಗೆ ಅನುಮತಿಸುತ್ತದೆ.  ಇದಲ್ಲದೆ, ಪವರ್ ಬ್ಯಾಂಕ್ ಮೈಕ್ರೋ ಯುಎಸ್‌ಬಿ ಪೋರ್ಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ತನ್ನದೇ ಆದ ಚಾರ್ಜಿಂಗ್‌ಗಾಗಿ ಪವರ್ ಔಟ್‌ಪುಟ್ ಮತ್ತು ಯುಎಸ್‌ಬಿ ಕೇಬಲ್‌ನೊಂದಿಗೆ ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನು ಹೊಂದಿದೆ. ಇವುಗಳ ಸಹಾಯದಿಂದ ನೀವು ಏಕಕಾಲದಲ್ಲಿ ಆರು ಸಾಧನಗಳನ್ನು ಚಾರ್ಜ್ ಮಾಡಬಹುದು. ಅಷ್ಟೇ ಅಲ್ಲದೆ ಈ ಪವರ್‌ಬ್ಯಾಂಕ್ ನಲ್ಲಿ ಬ್ಯಾಟರಿ ಚಾರ್ಜ್ ಸೂಚಕವೂ ಇದೆ, ಅದರ ಸಹಾಯದಿಂದ ಆಂತರಿಕ ಬ್ಯಾಟರಿಯಲ್ಲಿ ಎಷ್ಟು ಶಕ್ತಿ ಉಳಿದಿದೆ ಎಂಬುದನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ.


ಅಂತರ್ನಿರ್ಮಿತ ಫ್ಲ್ಯಾಷ್‌ಲೈಟ್ ಸೌಲಭ್ಯ:
ಯುಅಂಡ್ಐ  ಸ್ವಿಚರ್ ಸರಣಿಯ ಪವರ್‌ಬ್ಯಾಂಕ್ ನ ಮತ್ತೊಂದು ವಿಶೇಷತೆ ಎಂದರೆ ಅದರ ಅಂತರ್ನಿರ್ಮಿತ ಫ್ಲ್ಯಾಷ್‌ಲೈಟ್ ಅಥವಾ ಸಿಒಬಿ ಲೈಟ್. ಪವರ್‌ಬ್ಯಾಂಕ್‌ನ ಮುಂಭಾಗದಲ್ಲಿ 20 ಮೈಕ್ರೋ ಎಲ್ಇಡಿಗಳನ್ನು ಒದಗಿಸಲಾಗಿದೆ. ಇದು ಒಂದು ಪುಟ್ಟ ಕೋಣೆಗೆ ಬೇಕಾಗುವಷ್ಟು ಪ್ರಕಾಶಮಾನವಾದ ಬೆಳಕನ್ನು ಒದಗಿಸುತ್ತದೆ. ಕೆಳಭಾಗದಲ್ಲಿ ಫ್ಲ್ಯಾಶ್‌ಲೈಟ್‌ಗಳಾಗಿ ಕಾರ್ಯನಿರ್ವಹಿಸುವ ಎರಡು ಎಲ್‌ಇಡಿಗಳನ್ನು ಜೋಡಿಸಲಾಗಿದೆ. ಇದನ್ನು ಯಾವುದೇ ತುರ್ತು ಸಂದರ್ಭದಲ್ಲಿ ಬಳಸಬಹುದಾಗಿದೆ. 


ಇದನ್ನೂ ಓದಿ- ವಿವೋದ ಎರಡು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಬದಲಾವಣೆ


ಯುಅಂಡ್ಐ  ಸ್ವಿಚರ್ ಸರಣಿ ಪವರ್‌ಬ್ಯಾಂಕ್‌ನ ಬೆಲೆ:
ಭಾರತದಲ್ಲಿ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಯುಅಂಡ್ಐ  ಸ್ವಿಚರ್ ಸರಣಿ  ಪವರ್‌ಬ್ಯಾಂಕ್‌ ಅನ್ನು ಒಂದು ವರ್ಷದ ವಾರಂಟಿ ಜೊತೆಗೆ ಮಾರಾಟ ಮಾಡಲಾಗುತ್ತಿದೆ. ದೇಶದ ಎಲ್ಲಾ ಯುಅಂಡ್ಐ ಔಟ್‌ಲೆಟ್‌ಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಇದರ ಬೆಲೆ  2999  ರೂ. ಆಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.